ಅತಿ ಹೆಚ್ಚು ಓದುಗರನ್ನು ಹೊಂದಿರುವ CINIBUZZ ನಲ್ಲಿ ನಿಮ್ಮ ಸಿನಿಮಾದ ಕುರಿತ ಲೇಖನ / ಜಾಹೀರಾತು ಬೇಕಿದ್ದಲ್ಲಿ ಸಂಪರ್ಕಿಸಿ : 88615 99996

ಕಿಚ್ಚನ ಬರ್ತ್ ಡೆ ; ‘ಹೆಬ್ಬುಲಿ’ ಘರ್ಜನೆ

0

ಸ್ಯಾಂಡಲ್ ವುಡ್’ನ ಅಭಿನಯ ಚತುರ, ಅಭಿಮಾನಿಗಳ ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ ಇಂದು ೪೩ನೇ ವಸಂತಕ್ಕೆ ಕಾಲಿಟ್ಟಿದ್ದಾರೆ.
ಹುಟ್ಟುಹಬ್ಬದಂದು ಅಭಿಮಾನಿಗಳಿಂದ ಅಭಿಮಾನದ ಮಹಾಪೂರವನ್ನೇ ಪಡೆಯುವ ಕಿಚ್ಚ ಸುದೀಪ್ ಅಭಿಮಾನಿಗಳಿಗೆ ತಮ್ಮ ಹೊಸ ಚಿತ್ರದ ಟೀಸರ್’ನ್ನು ಕೊಡುಗೆ ನೀಡಿದ್ದಾರೆ. ಕೋಟಿಗೊಬ್ಬನ ಗತ್ತಿನಲ್ಲಿರುವ ಕಿಲಾಡಿ ಕಿಚ್ಚನ ಬಹು ನಿರೀಕ್ಷೆಯ ‘ಹೆಬ್ಬುಲಿ’ ಚಿತ್ರದ ಟೀಸರ್ ಇಂದು ನಿರ್ದೇಶಕ ಕೃಷ್ಣ ಬಿಡುಗಡೆ ಮಾಡಿದ್ದಾರೆ. ಗಜಕೇಸರಿ ಚಿತ್ರದ ಬಳಿಕ ಕೃಷ್ಣ ನಿರ್ದೇಶನದ ಹೆಬ್ಬುಲಿಯಲ್ಲಿ ಆ್ಯಂಗ್ರಿ ಯಂಗ್ ಮ್ಯಾನ್ ಲುಕ್’ನಲ್ಲಿ ಕಿಚ್ಚ ಸುದೀಪ್ ಖಡಕ್ಕಾಗೆ ಘರ್ಜಿಸಿದ್ದಾರೆ.
ಈ ಹಿಂದೆಯೇ ಹೇರ್ ಸ್ಟೈಲ್’ನೊಂದಿಗೆ ಸದ್ದು ಸುದ್ದಿ ಮಾಡಿದ್ದ ಹೆಬ್ಬುಲಿಯು ಈ ಬಾರಿ ಆ್ಯಕ್ಷನ್ ತುಣುಕುಗಳ ಟೀಸರ್’ನೊಂದಿಗೆ ಸಖತ್ತಾಗೆ ಸೌಂಡ್ ಮಾಡಿದೆ. ಬಂದ್ ಬಿಸಿಯನ್ನು ಪಕ್ಕಕ್ಕಿಟ್ಟು ಅಭಿಮಾನಿಗಳು ಸ್ಯಾಂಡಲ್ ವುಡ್ ಹೆಬ್ಬುಲಿಯ ‘ಕಿಚ್ಚೋತ್ಸವ’ವನ್ನು ಭರ್ಜರಿಯಾಗಿ ಆಚರಿಸುತ್ತಿದ್ದಾರೆ. ಕನ್ನಡದ ಕೀರ್ತಿಯನ್ನು ಅನ್ಯರಾಜ್ಯದಲ್ಲೂ ಪಸರಿಸಿದ ಕರುನಾಡ ಕಿಚ್ಚನಿಗೆ ಸಿನಿಬಜ್ ಟೀಂ ಪರವಾಗಿ ಹುಟ್ಟುಹಬ್ಬದ ಶುಭಾಶಯಗಳು.
★ಕಪ್ಪು ಮೂಗುತ್ತಿ

Share.

Leave A Reply