ಅತಿ ಹೆಚ್ಚು ಓದುಗರನ್ನು ಹೊಂದಿರುವ CINIBUZZ ನಲ್ಲಿ ನಿಮ್ಮ ಸಿನಿಮಾದ ಕುರಿತ ಲೇಖನ / ಜಾಹೀರಾತು ಬೇಕಿದ್ದಲ್ಲಿ ಸಂಪರ್ಕಿಸಿ : 88615 99996

ಅರ್ಜುನ್ ಸರ್ಜಾ ನಟನೆಯ 150ನೇ ಚಿತ್ರ `ವಿಸ್ಮಯ

0

ಅರ್ಜುನ್ ಸರ್ಜಾ ಮುಖ್ಯಭೂಮಿಕೆಯಲ್ಲಿರುವ `ವಿಸ್ಮಯ ಚಿತ್ರ ಸಂಪೂರ್ಣವಾಗಿ ಚಿತ್ರೀಕರಣ ಮುಗಿಸಿಸಿಕೊಂಡಿದೆ. ಪ್ಯಾಷನ್ ಫಿಲಂ ಫ್ಯಾಕ್ಟರಿ ಮೂಲಕ ಉಮೇಶ್ ಅವರು ನಿರ್ಮಿಸಿರುವ ಈ ಚಿತ್ರ ಕನ್ನಡ ಮತ್ತು ತಮಿಳಿನಲ್ಲಿ ಏಕ ಕಾಲದಲ್ಲಿ ತಯಾರಾಗಿದೆ.
ಈ ಚಿತ್ರದ ನಿರ್ದೇಶಕ ಯುಎಸ್ ಪ್ರಜೆಯಾಗಿರೋ ಅರುಣ್ ವೈದ್ಯನಾಥನ್. ಈ ಹಿಂದೆ ಮಲಯಾಳಂನಲ್ಲಿ ಮೋಹನ್ ಲಾಲ್ ಮುಖ್ಯಭೂಮಿಕೆಯಲ್ಲಿದ್ದ ಪೆರುಚ್ಚಾಲಿ ಎಂಬ ಸೂಪರ್ ಹಿಟ್ ಚಿತ್ರ ನಿರ್ದೇಶನ ಮಾಡಿದ್ದ ಖ್ಯಾತಿಯ ಅರುಣ್ ಇದೀಗ ತಮಿಳು ಮತ್ತು ಕನ್ನಡದಲ್ಲಿ ಈ ಚಿತ್ರವನ್ನು ನಿರ್ದೇಶನ ಮಾಡಿದ್ದಾರೆ. ಅಂದ ಹಾಗೆ ತಮಿಳಿನಲ್ಲಿ ಈ ಚಿತ್ರಕ್ಕೆ `ನಿಬುನನ್ ಎಂದು ಹೆಸರಿಡಲಾಗಿದೆ.
ಪಕ್ಕಾ ಆಕ್ಷನ್ ಚಿತ್ರವಾದ ವಿಸ್ಮಯ ನಟ ಅರ್ಜುನ್ ಸರ್ಜಾ ಅವರ ನೂರಾ ಐವತ್ತನೇ ಚಿತ್ರ ಎಂಬುದು ವಿಶೇಷ. ಕಳೆದ ವರ್ಷದ ನವೆಂಬರ್ ತಿಂಗಳಲ್ಲಿ ಚಿತ್ರೀಕರಣ ಆರಂಭಿಸಿದ್ದ ಈ ಚಿತ್ರವೀಗ ಅಂತಿಮ ಹಂತಕ್ಕೆ ಬಂದು ನಿಂತಿದೆ. ಈ ಚಿತ್ರದ ಶೇಖಡಾ ಎಪ್ಪತ್ತರಷ್ಟು ಚಿತ್ರೀಕರಣವನ್ನು ಬೆಂಗಳೂರಿನ ಸುತ್ತಮುತ್ತಲಿನ ಪ್ರದೇಶಗಳಲ್ಲಿಯೇ ನಡೆಸಲಾಗಿದೆ.
ಶ್ರುತಿ ಹರಿಹರನ್ ಈ ಚಿತ್ರದ ನಾಯಕಿ. ಸುಧಾರಾಣಿ, ಸುಹಾಸಿನಿ, ಸುಮನ್ ಮುಂತಾದ ಕಲಾವಿದರು ಈ ಚಿತ್ರದ ತಾರಾಗಣದಲ್ಲಿದ್ದಾರೆ. ಮಾಣಿಕ್ಯ ಚಿತ್ರದಲ್ಲಿ ನಾಯಕಿ ವರಲಕ್ಷ್ಮಿ ಕೂಡಾ ಪ್ರಮುಖ ಪಾತ್ರದಲ್ಲಿ ನಟಿಸಿದ್ದಾರೆ. ಇದರ ಜೊತೆಗೆ ತಮಿಳಿನ ಖ್ಯಾತ ನಟ ಪ್ರಸನ್ನ ಮುಖ್ಯ ಪಾತ್ರವೊಂದರಲ್ಲಿ ಅಭಿನಯಿಸಿದ್ದಾರೆ. ಇನ್ನುಳಿದಂತೆ ವಿಶೇಷವಾದ ಪಾತ್ರವೊಂದನ್ನು ಕನ್ನಡ ಚಿತ್ರರಂಗದಲ್ಲಿ ಹೀರೋ ಆಗಿ ಗುರುತಿಸಿಕೊಂಡು ಮನೆ ಮಾತಾಗಿರುವ ಖ್ಯಾತ ನಟರೊಬ್ಬರು ನಿವಹಿಸಿದ್ದಾರೆ. ಅವರಿಲ್ಲಿ ಮೊದಲ ಸಲ ವಿಲನ್ ಆಗಿ ಕಾಣಿಸಿಕೊಂಡಿದ್ದಾರಂತೆ. ಅವರು ಯಾರೆಂಬುದನ್ನು ಚಿತ್ರ ತಂಡ ಗೌಪ್ಯವಾಗಿಟ್ಟಿದೆ. ತಮಿಳಿನಲ್ಲಿ ಅಲ್ಲಿನ ಪ್ರಸಿದ್ಧ ನಟ ಈ ಪಾತ್ರವನ್ನು ನಿಭಾಯಿಸಿದ್ದಾರೆ. ಅವರ್‍ಯಾರೆಂಬುದೂ ನಿಗೂಢವೇ!
ಸಿನಿಮಾಟೋಗ್ರಫಿ ತಮಿಳಿನಲ್ಲಿ ಧನುಷ್ ಅವರನ್ನು ಪರಿಚಯಿಸಿದ್ದ ಅರವಿಂದ್ ಕೃಷ್ಣ ಅವರದ್ದು. ಎಆರ್ ರೆಹಮಾನ್ ಸಹಾಯಕರಾಗಿದ್ದ ನವೀನ್ ಈ ಚಿತ್ರಕ್ಕೆ ಸಂಗೀತ ನಿರ್ದೇಶನ ಮಾಡಿದ್ದಾರೆ. ಕನ್ನಡದವರೇ ಆದ ಆನಂದ ರಾಘವನ್ ಸ್ಕ್ರೀನ್ ಪ್ಲೇ ಈ ಚಿತ್ರಕ್ಕಿದೆ.

Share.

Leave A Reply