ಅತಿ ಹೆಚ್ಚು ಓದುಗರನ್ನು ಹೊಂದಿರುವ CINIBUZZ ನಲ್ಲಿ ನಿಮ್ಮ ಸಿನಿಮಾದ ಕುರಿತ ಲೇಖನ / ಜಾಹೀರಾತು ಬೇಕಿದ್ದಲ್ಲಿ ಸಂಪರ್ಕಿಸಿ : 88615 99996

ಈ ವಾರ ಪೂರ್ತಿ ಜೋಡಿಹಕ್ಕಿಗಳ ಮದುವೆ ಸಂಭ್ರಮ

0

ಕನ್ನಡನಾಡಿನ ಜನತೆಯ ಮನೆಮಾತಾಗಿರುವ ಜೀ ಕನ್ನಡ ವಾಹಿನಿ ಸದಾ ನವನವೀನ ಕಾರ್ಯಕ್ರಮಗಳನ್ನು ನೀಡುವ ಮೂಲಕ ವೀಕ್ಷಕರಿಗೆ ಸದಾ ಹತ್ತಿರವಾಗಿದೆ. ವಿಶಿಷ್ಟ ಕಥಾಹಂದರವುಳ್ಳ ವಿಭಿನ್ನ ಶೈಲಿಯ ಧಾರಾವಾಹಿಗಳನ್ನು ನಿರೂಪಿಸುತ್ತಲೇ ನಿರಂತವಾಗಿ ಕನ್ನಡಿಗರಿಗೆ ಮನರಂಜನೆಯ ಮಹಾಪೂರವನ್ನೇ ಒದಗಿಸುತ್ತಿದೆ. ಅಂಥ ಮಹತ್ತರ ಧಾರಾವಾಹಿಗಳಲ್ಲಿ ಜೋಡಿಹಕ್ಕಿ ಧಾರಾವಾಹಿಯೂ ಒಂದು.

ಹಳ್ಳಿಯ ಸೊಗಡನ್ನೇ ಮೈತುಂಬಿಕೊಂಡಿರುವ ಈ ಧಾರಾವಾಹಿ ವೀಕ್ಷಕರ ಮನಗೆದ್ದಿದೆ. ಗರಡಿ ಮನೆಯ ಕಸರತ್ತಿನಲ್ಲಿ ಪಳಗಿರುವ, ವ್ಯವಸಾಯವನ್ನೇ ತನ್ನ ಉಸಿರನ್ನಾಗಿಸಿಕೊಂಡು, ಅಪ್ಪಟ ಹಳ್ಳಿ ಹೈದನಾದ ಪೈಲ್ವಾನ್ ರಾಮಣ್ಣನ ಜೀವನದ ಕಥಾನಕ ಜೋಡಿಹಕ್ಕಿ. ಸಿಟಿಯಿಂದ ಹಳ್ಳಿಗೆ ಶಿಕ್ಷಕಿಯಾಗಿ ಬಂದ ಜಾನಕಿ ಟೀಚರ್, ಮುದ್ದು ಮಾತುಗಳನ್ನಾಡುತ್ತಲೇ ಹಳ್ಳಿಯ ಜೀವನವನ್ನು ಪ್ರೀತಿಸಲು ಪ್ರಾರಂಭಿಸುತ್ತಾಳೆ. ಪೈಲ್ವಾನ್ ರಾಮಣ್ಣ ಹಾಗೂ ಜಾನಕಿ ಟೀಚರ್, ಈ ಇಬ್ಬರ ನಡುವಿನ ಪ್ರೀತಿಯ ಕಥಾಹಂದರವನ್ನು ಜೋಡಿಹಕ್ಕಿಯನ್ನು ಹೇಳಲಾಗಿದೆ. ಈ ಧಾರಾವಾಹಿಯಲ್ಲಿ ಪೈಲ್ವಾನ್ ರಾಮಣ್ಣನ ಮುಗ್ಧತೆ, ಜಾನಕಿ ಟೀಚರ್ ಮುದ್ದಾದ ಮಾತುಗಳು ವೀPಕರ ಮನವನ್ನು ಗೆದ್ದಿವೆ.
ಯಾವಾಗಲೂ ಗರಡಿ ಮನೆಯ ಕಸರತ್ತಿನಲ್ಲಿ ಪಳಗಿದ ಪೈಲ್ವಾನ್ ರಾಮಣ್ಣ ಆಂಜನೇಯನ ಭಕ್ತನಾಗಿದ್ದು, ಕೊನೆಯವರೆಗೂ ಬ್ರಹ್ಮಚಾರಿಯಾಗೇ ಉಳಿದುಕೊಳ್ಳಬೇಕೆಂದುಕೊಂಡವನು. ಅದುವರೆಗೆ ಯಾವೊಬ್ಬ ಹೆಣ್ಣುಮಗಳನ್ನು ಕಣ್ಣೆತ್ತಿಯೂ ನೋಡಿದವನಲ್ಲದ ಪೈಲ್ವಾನ್ ರಾಮಣ್ಣ, ತಂದೆ ಅಪ್ಪಣ್ಣನ ಒತ್ತಾಯಕ್ಕೂ ಮಣಿಯದೇ ಮದುವೆಯಾಗಲು ಒಪ್ಪಿದ್ದಿಲ್ಲ. ಆದರೆ ಈಗ ಜಾನಕಿ ಟೀಚರ್‌ರ ಮುಗ್ಧ ಪ್ರೀತಿಗೆ ಮನಸೋತಿzನೆ. ಅದೇ ರಾಮಣ್ಣ ಮತ್ತು ಜಾನಕಿ ಈಗ ಮದುವೆಯಾಗುತ್ತಿzರೆ.
ತನ್ನ ಪ್ರೀತಿಯ ಮಗ ಕೊನೆಗೂ ಮದುವೆಯಾಗಲು ಒಪ್ಪಿದನ ಎಂಬ ಖುಷಿಯ ತಂದೆ ಅಪ್ಪಣ್ಣ ರಾಮ-ಜಾನಕಿಯರ ಮದುವೆಯನ್ನು ಸೀತಾರಾಮರ ಕಲ್ಯಾಣದಷ್ಟೇ ಅದ್ಧೂರಿಯಾಗಿ ನಡೆಸಲು ಎಲ್ಲಾ ರೀತಿಯ ತಯಾರಿಯನ್ನು ಮಾಡಿಕೊಂಡಿದ್ದಾರೆ. ಗ್ರಾಮಿಣ ಶೈಲಿಯಲ್ಲಿ ನಡೆಯುವ ಮದುವೆಯ ಸುಂದರ ದೃಷ್ಯಗಳನ್ನು, ಮದುವೆಯ ಸಂಭ್ರಮವನ್ನು ಜೀ ವೀPಕರ ಮುಂದೆ ಹೊತ್ತು ತರುತ್ತಿದೆ ಜೋಡಿಹಕ್ಕಿ ಧಾರಾವಾಹಿಯ ತಂಡ. ಮದುವೆ ಸಮಾರಂಭಗಳಲ್ಲಿ ನಡೆಯುವ ಅರಿಶಿನ ಶಾಸ್ತ್ರ, ಕಂಬನೆಡುವ ಪೂಜೆ, ವರಪೂಜೆ ಇಂಥ ಸಂಪ್ರದಾಂiiಗಳನ್ನೆಲ್ಲಾ ಸುಂದರವಾಗಿ ತೋರಿಸುವ ಪ್ರಯತ್ನ ಇಲ್ಲಿ ನಡೆದಿದೆ. ಈ ಜೋಡಿಹಕ್ಕಿಗಳ ಮದುವೆಯ ಸಂಭ್ರಮದ ವರ್ಣರಂಜಿತ ಸಮಾರಂಭ ಈ ವಾರಪೂರ್ತಿ ಜೀ ಕನ್ನಡ ವಾಹಿನಿಯಲ್ಲಿ ಪ್ರಸಾರಗೊಳ್ಳುತ್ತಿದೆ. ಜೋಡಿಹಕ್ಕಿ ಧಾರಾವಾಹಿಯು ಪ್ರತಿ ಸೋಮವಾರದಿಂದ ಶುಕ್ರವಾರದವರೆಗೆ ಸಂಜೆ ೬ ಗಂಟೆಯಿಂದ ಜೀ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿದೆ.

Share.

Leave A Reply