ಅತಿ ಹೆಚ್ಚು ಓದುಗರನ್ನು ಹೊಂದಿರುವ CINIBUZZ ನಲ್ಲಿ ನಿಮ್ಮ ಸಿನಿಮಾದ ಕುರಿತ ಲೇಖನ / ಜಾಹೀರಾತು ಬೇಕಿದ್ದಲ್ಲಿ ಸಂಪರ್ಕಿಸಿ : 88615 99996

ಇಂದು ಸಂಜೆ ಜೀ ಕನ್ನಡದಲ್ಲಿ ಬ್ಯೂಟಿಫುಲ್ ಮನಸುಗಳು!

0

ಅಭಿನಯ ಚತುರ ನೀನಾಸಂ ಸತೀಶ್ ನಟನೆಯ ಅಪರೂಪದ ಚಿತ್ರ `ಬ್ಯೂಟಿಫುಲ್ ಮನಸುಗಳು. ಜಯತೀರ್ಥ ನಿರ್ದೇಶನದ ಈ ಚಿತ್ರ ಗಳಿಕೆಯಲ್ಲಿಯೂ ದಾಖಲೆ ಬರೆದಿತ್ತು. ಆ ಮೂಲಕವೇ ಪ್ರೇಕ್ಷಕರನ್ನೂ ಆವರಿಸಿಕೊಂಡಿದ್ದ ಈ ಚಿತ್ರ ಇಂದು ಸಂಜೆ ೬ ಘಂಟೆಗೆ ಜೀ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗಲಿದೆ.
ಒಂದು ಸಾಮಾಜಿಕ ಕಥಾ ವಸ್ತುವನ್ನು ಮನ ಮುಟ್ಟುವಂತೆ ನಿರೂಪಣೆ ಮಾಡೋ ಮೂಲಕ ನಿರ್ದೇಶಕ ಜಯತೀರ್ಥ ಕೂಡಾ ಗೆದ್ದಿದ್ದರು. ಇದೆಲ್ಲದರಾಚೆಗೆ ಈ ಚಿತ್ರ ನೀನಾಸಂ ಸತೀಶ್ ಪಾಲಿಗೆ ಮಹತ್ವದ್ದು. ಈ ಚಿತ್ರದ ಮೂಲಕವೇ ಅವರು ಇದೀಗ ಮತ್ತೆ ದೊಡ್ಡ ಮಟ್ಟದ ಗೆಲುವಿನ ನಾಗಾಲೋಟಕ್ಕೆ ಸಜ್ಜಾಗಿದ್ದಾರೆ.
ತಮ್ಮ ಬದುಕಿಗೆ ಮಹತ್ವದ ತಿರುವು ನೀಡಿದ ಈ ಚಿತ್ರ ಇಂದು ಜೀ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿರೋದರ ಬಗ್ಗೆ ಖುದ್ದು ಸತೀಶ್ ಕೂಡಾ ಖುಷಿಗೊಂಡಿದ್ದಾರೆ. ಈ ಚಿತ್ರ ಯಶಸ್ವಿಯಾದೇಟಿಗೆ ಸತೀಶ್ ಬ್ಯುಸಿಯಾಗಿದ್ದಾರೆ. ಒಂದರ ಹಿಂದೊಂದರಂತೆ ಚಿತ್ರಗಳನ್ನು ಒಪ್ಪಿಕೊಂಡಿದ್ದಾರೆ. ಬ್ಯೂಟಿಫುಲ್ ಮನಸುಗಳು ಚಿತ್ರ ತೆರೆ ಕಾಣುವ ಮುಂಚೆ ಇದ್ದದ್ದಕ್ಕೂ, ಈ ಘಳಿಗೆಗೂ ನೀನಾಸಂ ಸತೀಶ್ ವೃತ್ತಿ ಜೀವನದಲ್ಲಿ ಮಹತ್ವದ ಬದಲಾವಣೆಗಳಾಗಿವೆ.
ಇಂದು ಸತೀಶ್ ಅವರ ಬ್ಯೂಟಿಫುಲ್ ಮನಸುಗಳನ್ನು ಜೀ ಕನ್ನಡ ವಾಹಿನಿಯಲ್ಲಿ ಎಲ್ಲರೂ ಕಣ್ತುಂಬಿಕೊಳ್ಳಬಹುದು.

Share.

Leave A Reply