ಅತಿ ಹೆಚ್ಚು ಓದುಗರನ್ನು ಹೊಂದಿರುವ CINIBUZZ ನಲ್ಲಿ ನಿಮ್ಮ ಸಿನಿಮಾದ ಕುರಿತ ಲೇಖನ / ಜಾಹೀರಾತು ಬೇಕಿದ್ದಲ್ಲಿ ಸಂಪರ್ಕಿಸಿ : 88615 99996

‘ಹುಲಿರಾಯ’ನ ಮೋಷನ್ ಪೋಸ್ಟರ್ ಅನಾವರಣ…

0

ಅರವಿಂದ್ ಕೌಶಿಕ್ ನಿರ್ದೇಶನದ ಮೂರನೇ ಚಿತ್ರ `ಹುಲಿರಾಯದ ಮೋಷನ್ ಪೋಸ್ಟರ್ ಬಿಡುಗಡೆಯಾಗಿದೆ. ಈ ಹಿಂದಿನ ಚಿತ್ರಗಳಲ್ಲಿಯೇ ಭಿನ್ನವಾದ ಹಾದಿಗಲ್ಲಿ ಗಮನ ಸೆಳೆದಿದ್ದ ಅವರು ಈ ಚಿತ್ರವನ್ನೂ ಕೂಡಾ ಅದಕ್ಕಿಂತಲೂ ವಿಶೇಷವಾಗಿಯೇ ರೂಪಿಸಿದ್ದಾರೆಂಬ ಸೂಚನೆಗಳೂ ಕೂಡಾ ಸ್ಪಷ್ಟವಾಗಿಯೇ ಹೊರ ಬಿದ್ದಿವೆ.

ಅರವಿಂದ್ ಕೌಶಿಕ್ ನಿರ್ದೇಶನದ ಮೂರನೇ ಚಿತ್ರ `ಹುಲಿರಾಯದ ಮೋಷನ್ ಪೋಸ್ಟರ್ ಬಿಡುಗಡೆಯಾಗಿದೆ. ಈ ಹಿಂದಿನ ಚಿತ್ರಗಳಲ್ಲಿಯೇ ಭಿನ್ನವಾದ ಹಾದಿಗಲ್ಲಿ ಗಮನ ಸೆಳೆದಿದ್ದ ಅವರು ಈ ಚಿತ್ರವನ್ನೂ ಕೂಡಾ ಅದಕ್ಕಿಂತಲೂ ವಿಶೇಷವಾಗಿಯೇ ರೂಪಿಸಿದ್ದಾರೆಂಬ ಸೂಚನೆಗಳೂ ಕೂಡಾ ಸ್ಪಷ್ಟವಾಗಿಯೇ ಹೊರ ಬಿದ್ದಿವೆ.
ಹುಲಿರಾಯ ಚಿತ್ರದ ವಿಶೇಷವಾದ ಮೋಷನ್ ಪೋಸ್ಟರ್ ಅನ್ನು ಹಿರಿಯ ಛಾಯಾಗ್ರಾಹಕರಾದ ಅಶೋಕ್ ಕಶ್ಯಪ್ ಅವರು ಬಿಡುಗಡೆಗೊಳಿಸಿದರು. ಈ ಚಿತ್ರದ ನಿರ್ದೇಶಕರಾದ ಅರವಿಂದ್ ಕೌಶಿಕ್ ಈ ಸಂದರ್ಭದಲ್ಲಿ ತಮ್ಮ ಸಿನಿ ಯಾನ, ಮಧ್ಯದಲ್ಲಿ ಬಂದೊದಗಿದ ನಾಲ್ಕೈದು ವರ್ಷಗಳ ಸುದೀರ್ಘ ವಿರಾಮ ಮುಂತಾದವುಗಳ ಬಗ್ಗೆ ಮನಬಿಚ್ಚಿ ಮಾತನಾಡಿದರು. ಅರವಿಂದ್ ನಂದಗೋಕುಲ ಎಂಬ ಧಾರಾವಾಹಿಯ ಮೂಲಕ ನಟರಾಗಿ ಬಣ್ಣದ ಲೋಕಕ್ಕೆ ಪಾದಾರ್ಪಣೆ ಮಾಡಿದವರು. ಅದಕ್ಕೆ ಸಂಪೂರ್ಣ ಸಹಕಾರ ನೀಡಿ ಈವತ್ತು ತಾವು ನಿರ್ದೇಶಕನಾಗಿ ಹೊರ ಹೊಮ್ಮಲು ಸಾಧ್ಯವಾಗಿಸಿದ Pಶಪ್‌ರನ್ನು ಗೌರವಿಸುತ್ತಲೇ ಅವರ ಕಡೆಯಿಂದಲೇ ಹುಲಿರಾಯ ಚಿತ್ರದ ಮೋಷನ್ ಪೋಸ್ಟರ್ ಅನ್ನು ಅನಾವರಣಗೊಳಿಸಿದರು.
ಇದೇ ಸಂದರ್ಭದಲ್ಲಿ ಇದೀಗ ನಾಯಕ ನಟನಾಗಿ ಬೇಡಿಕೆಯಲ್ಲಿರುವ ಅನೀಶ್ ತೇಜೇಶ್ವರ್ ಕೂಡಾ ಹಾಜರಿದ್ದರು. ಅನೀಶ್ ತಮ್ಮನ್ನು ನಾಯಕ ನಟನಾಗಿ ಪರಿಚಯಿಸಿದ ಇದೇ ಅರವಿಂದ ಕೌಶಿಕ್ ನಿರ್ದೇಶನದ ನಮ್ ಏರಿಯಾಲ್ ಒಂದಿನ ಚಿತ್ರದ ಗುಂಗಿಗೆ ಜಾರಿ ಅದರ ಪಾರ್ಟ್ ೨ ಮಾಡಬೇಕೆಂಬ ಇಂಗಿತವನ್ನೂ ವ್ಯಕ್ತಪಡಿಸಿದರು. ನಮ್ ಏರಿಯಾಲ್ ಒಂದಿನ ಚಿತ್ರದ ಡೈಲಾಗುಗಳನ್ನು ಹೇಳುವ ಮೂಲಕ ಚಿತ್ರತಂಡಕ್ಕೆ ಶುಭ ಕೋರಿದರು.
ಆ ನಂತರದಲ್ಲಿ ತೆರೆದುಕೊಂಡಿದ್ದ ಹುಲಿರಾಯ ಕಥೆ ಹುಟ್ಟಿದ ಬಗೆ ಮತ್ತು ಚಿತ್ರೀಕರಣದ ನಾನಾ ಮಜಲುಗಳು. ಏನಾದರೂ ಹೊಸತನ್ನು ಮಾಡಬೇಕೆಂಬ ಹಂಬಲ ಹೊಂದಿದ್ದ ಈ ಚಿತ್ರದ ನಾಯಕ ಬಾಲು ನಾಗೇಂದ್ರ ಮತ್ತು ಅರವಿಂದ ಕೌಶಿಕ್ ಸೇರಿಕೊಂಡು ಕಂಡ ಕನಸು ಹುಲಿರಾಯ. ಅರವಿಂದ್ ಬಾಲು ಅವರನ್ನೇ ಗಮನದಲ್ಲಿಟ್ಟುಕೊಂಡು ಈ ಚಿತ್ರದ ಕಥೆ ಮಾಡಿಕೊಂಡಿದ್ದರಂತೆ. ಆದರೆ ಚಿತ್ರವನ್ನು ಮಾಡೇ ಬಿಡುವ ನಿರ್ಧಾರಕ್ಕೆ ಬಂದರಾದರೂ ನಿರ್ಮಾಪಕರಿನ್ನೂ ಸಿಕ್ಕಿರಲಿಲ್ಲ. ಆಗ ಈ ಚಿತ್ರದ ಅಂತರಾಳ ಜಾಹೀರು ಮಾಡುವಂಥಾ ಒಂದು ಚೆಂದದ ಟೀಸರ್ ಸೃಷ್ಟಿಸಿದ ಈ ತಂಡ ಅದನ್ನಿಟ್ಟುಕೊಂಡು ನಿರ್ಮಾಪಕರ ತಲಾಷಿನಲ್ಲಿದ್ದಾಗ ಸಿಕ್ಕವರು ಕೆ.ಎನ್ ನಾಗೇಶ್.
ಕೆ.ಎನ್ ನಾಗೇಶ್ ಅವರು ಈ ಹಿಂದೆ ಅರವಿಂದ್ ಕೌಶಿಕ್ ನಮ್ ಏರಿಯಾಲ್ ಒಂದಿನ ಚಿತ್ರ ಮಾಡುವ ಹೊತ್ತಿಂದಲೇ ಪರಿಚಿತರಾದವರು. ಹೇಳಿ ಕೇಳಿ ಹೊಸಾ ಬಗೆಯ ಒಂದು ಚಿತ್ರ ಮಾಡಲೇಬೇಕೆಂಬ ತುಡಿತ ಹೊಂದಿದ್ದ ಅವರು ಹುಲಿರಾಯನ ಖದರ್ ಹೊಂದಿದ್ದ ಟೀಸರ್ ನೋಡಿದವರೇ ಮರು ಮಾತಿಲ್ಲದೇ ಹಣ ಹೂಡಲು ಒಪ್ಪಿಕೊಂಡಿದ್ದರು. ಅದಾದ ನಂತರ ಒಂದೇ ವೇಗದಲ್ಲಿ ಶುರುವಾದ ಹುಲಿರಾಯನ ಶೂಟಿಂಗ್ ಈಗ ಸಂಪೂರ್ಣವಾಗಿ ಮುಕ್ತಾಯಗೊಂಡು ಇದೀಗ ಚಿತ್ರ ಪೋಸ್ಟ್ ಪ್ರೊಡಕ್ಷನ್ ಹಂತದಲ್ಲಿದೆ.
ಅಂದಹಾಗೆ ನಿರ್ದೇಶಕ ಅರವಿಂದ್ ಕೌಶಿಕ್ ಅವರು ಹುಲಿರಾಯ ಕಥೆಯ ಸಣ್ಣ ಎಳೆಯನ್ನಷ್ಟೇ ಕುತೂಹಲಕರವಾಗಿ ಹೊರ ಬಿಟ್ಟಿದ್ದಾರೆ. ಹುಲಿ ಕಾಡಿನಲ್ಲಿ ಸ್ವಚ್ಛಂದವಾಗಿ ಓಡಾಡಿಕೊಂಡಿರುವ ಪ್ರಾಣಿ. ಒಂದು ವೇಳೆ ಅದೇ ಹುಲಿ ಬೆಂಗಳೂರಿನಂಥಾ ಸಿಟಿಗೆ ಬರುವಂತಾದರೆ ಏನಾಗ ಬಹುದು, ಎಂತೆಂಥಾ ಅನಾಹುತಗಳಾದೀತೆಂಬ ಎಳೆಯೊಂದಿಗೆ ಬೆಂಗಳೂರಿನಂಥಾ ಮಹಾ ನಗರಿಗಳ ಜಂಜಡ, ಒತ್ತಡಗಳನ್ನ ಬೇರೆಯದ್ದೇ ರೀತಿಯಲ್ಲಿ ಹೇಳುವ ಭಿನ್ನ ಪ್ರಯತ್ನ ಈ ಚಿತ್ರದಲ್ಲಿದೆಯಂತೆ. ಈ ಕಥಾ ವಸ್ತು ಇನ್ನು ಹತ್ತದಿನೈದು ವರ್ಷವಾದರೂ ಸವಕಲಾಗದಂಥಾದ್ದೆಂಬುದು ನಿರ್ದೇಶಕರ ಭರವಸೆ. ಈಗಾಗಲೇ ದುನಿಯಾ ಸೂರಿ ಸೇರಿದಂತೆ ಸಾಕಷ್ಟು ನಿರ್ದೇಶಕರ ಅನೇಕ ಸಿನಿಮಾಗಳಲ್ಲಿ ಪಾತ್ರ ನಿರ್ವಹಿಸುತ್ತಾ ಉತ್ತಮ ಕಲಾವಿದ ಎಂಬ ಪ್ರಶಂಸೆಗೆ ಪಾತ್ರವಾಗಿರುವ ಬಾಲು ನಾಗೇಂದ್ರ ಹುಲಿರಾಯ ಚಿತ್ರದ ಮೂಲಕ ಪೂರ್ಣಪ್ರಮಾಣದ ನಾಯಕನಗಿ ಪರಿಚಯಗೊಳ್ಳುತ್ತಿದ್ದಾರೆ. ರಂಗಭೂಮಿ ಹಿನ್ನೆಲೆಯ ಬಾಲು ನಾಗೇಂದ್ರ ಅವರಿಗೆ `ಹುಲಿರಾಯ’ ಯಶಸ್ಸು ನೀಡೇನೀಡುತ್ತದೆ ಎನ್ನುವ ನಂಬಿಕೆ ಇದೆಯಂತೆ.
ಈ ಭಿನ್ನವಾದ ಮೂವತೈದು ಸೆಕೆಂಡುಗಳ ಮೋಷನ್ ಪೋಸ್ಟರ್ ಮಾಡಿದವರು ಸಂತೋಷ್ ರಾಧಾಕೃಷ್ಣನ್. ಈಗಾಗಲೇ ವಿಎಫ್‌ಎಕ್ಸ್ ಕಲಾವಿದರಾಗಿ ಸುಮಾರು ಇಪ್ಪತ್ತೆಂಟು ಸಿನಿಮಾಗಳಿಗೆ ಕಾರ್ಯನಿರ್ವಹಿಸಿರುವ ಸಂತೋಷ್ ಆನಂದರ್ ರಾಮ್ ಸದ್ಯ ಕನ್ನಡ ಚಿತ್ರರಂಗದಲ್ಲಿ ಹೆಸರು ಮಾಡಿರುವ ಗ್ರಾಫಿಕ್ಸ್ ಕಲಾವಿದೆ. ಅವರೇ ಸೃಷ್ಟಿಸಿದ್ದ ಉಳಿದವರು ಕಂಡಂತೆ, ಕಿರಿಕ್ ಪಾರ್ಟಿ ಸೇರಿದಂತೆ ಅನೇಕ ಚಿತ್ರಗಳ ಗ್ರಾಫಿಕ್ಸ್ ಕೆಲಸ ಎಲ್ಲರ ಮೆಚ್ಚುಗೆಗೆ ಪಾತ್ರವಾಗಿತ್ತು. ಈಗ ಹುಲಿರಾಯ ಚಿತ್ರಕ್ಕೂ ಸಂತೋಷ್ ಮಾಂತ್ರಿಕ ಟಚ್ ನೀಡಿದ್ದಾರೆ. ಈ ಎಲ್ಲದರ ನಡುವೆ ಈಗ ಬಿಡುಗಡೆಯಾಗಿರುವ ಮೋಷನ್ ಪೋಸ್ಟರ್ ಪ್ರತಿಯೊಂದು ಪಾತ್ರಗಳ ಹೊಳಹನ್ನೂ ನೀಡುತ್ತಲೇ ಕುತೂಹಲ ಹುಟ್ಟಿಸುವಲ್ಲಿ ಚಿತ್ರತಂಡ ಯಶ ಕಂಡಿದೆ.

Share.

Leave A Reply