ಅತಿ ಹೆಚ್ಚು ಓದುಗರನ್ನು ಹೊಂದಿರುವ CINIBUZZ ನಲ್ಲಿ ನಿಮ್ಮ ಸಿನಿಮಾದ ಕುರಿತ ಲೇಖನ / ಜಾಹೀರಾತು ಬೇಕಿದ್ದಲ್ಲಿ ಸಂಪರ್ಕಿಸಿ : 88615 99996

ಸ್ಯಾಂಡಲ್‌ವುಡ್‌ಗೊಂದು ಕಲರ್‌ಫುಲ್ `ರಾಟೆ

0

`ರಂಕಲ್‌ರಾಟೆ ಟೈಟಲ್‌ನ ಚಿತ್ರವೊಂದು ಸದ್ದಿಲ್ಲದೆ ತಯಾರಾಗಿ ಬಿಡುಗಡೆಗೆ ಸಿದ್ಧವಾಗಿದೆ. ಇತ್ತೀಚಿಗೆ ಬಿಡುಗಡೆಯಾದ ಚಿತ್ರದ ಟ್ರೈಲರ್ ಮತ್ತ ಹಾಡುಗಳು ಸ್ಯಾಂಡಲ್‌ವುಡ್‌ನಲ್ಲಿ ಸಂಚಲನವನ್ನುಂಟುಮಾಡುವ ಎಲ್ಲಾ ಲಕ್ಷಣಗಳನ್ನು ಹೊಂದಿದೆ. ಅಂದಹಾಗೆ ಇದು ಸ್ಪೋರ್ಟ್ಸ್ ಜಾನರ್‌ನ ಸಿನ್ಮಾ. ಬಾಲಿವುಡ್‌ನಲ್ಲಿ ತಯಾರಾದ ಸ್ಪೋರ್ಟ್ಸ್ ಬೇಸ್ಡ್ ಚಿತ್ರಗಳು ಯಾವುವು.. ಎಂಬ ಪ್ರಶ್ನೆಗೆ, `ಲಗಾನ್,`ಎಮ್ ಎಸ್ ಧೋನಿ, `ಸುಲ್ತಾನ್, `ಮೇರಿಕೋಮ್, `ಭಾಗ್ ಮಿಲ್ಕಾ ಭಾಗ್.. ಹೀಗೆ ಸಾಲು ಸಾಲು ಸೂಪರ್‌ಹಿಟ್ ಚಿತ್ರಗಳ ಪಟ್ಟಿಯೇ ಕಣ್ಣ ಮುಂದೆ ಹಾದು ಹೋಗುತ್ತದೆ. ಅದೇ ಸ್ಯಾಂಡಲ್‌ವುಡ್ನಲ್ಲಿ!.. ಜನಮಾನಸದಲ್ಲಿ ನೆಲೆನಿಂತ ಒಂದೇ ಒಂದೂ ಸ್ಪೋರ್ಟ್ಸ್ ಬೇಸ್ಡ್ ಚಿತ್ರ ಇದ್ದರೆ ಕೇಳಿ. ಈಗ ಈ ಕೊರತೆಯನ್ನು ನೀಗಿಸಲು, ನಿರ್ಮಾಪಕ ಬೈಸಾನಿ ಸತೀಶ್ ಕುಮಾರ್ `ರಂಕಲ್ ರಾಟೆ ಎಂಬ ಚಿತ್ರವನ್ನು ತಯಾರಿಸಿ ಬಿಡುಗಡೆಗೆ ಮುಂದಾಗಿದ್ದಾರೆ. ಚಿತ್ರದ ನಿರ್ದೇಶಕ, ರಂಗಭೂಮಿ ಕಲಾವಿದ/ನಿರ್ದೇಶಕರಾದ ಗೋಪಿ ಕೆರೂರ್‌ರವರಿಗಿದು ಚೊಚ್ಚಲ ಚಿತ್ರ. `ಎಲ್ರಿಗೂ ಕಾಲ ಬರುತ್ತೆ ಅನ್ನುವ ಟ್ಯಾಗ್‌ಲೈನ್ ಚಿತ್ರಕ್ಕೆ ಹೆಚ್ಚು ಸೂಕ್ತ, ಕಾರಣ ನಿರ್ದೇಶಕ ಗೋಪಿ ಕಳೆದ ಎರಡು ದಶಕಗಳಿಂದ ಕನ್ನಡದ ಘಟಾನುಘಟಿ ನಿರ್ದೇಶಕರ ಜೊತೆ ವಿವಿಧ ವಿಭಾಗಗಳಲ್ಲಿ ಕೆಲಸ ಮಾಡಿದ್ದರೂ, ಇವರ ಸಿನ್ಮಾ ಪ್ರೀತಿಯನ್ನು ಜನತೆಯ ಮುಂದಿಡಲು ಫಿಲ್ಮ್‌ಇಂಡಸ್ಟ್ರಿಯ ಆಳ-ಅಗಲ ಗೊತ್ತಿಲ್ಲದ ಬೈಸಾನಿ ಸತೀಶ್ ಬರಬೇಕಾಯಿತು. ಇಲ್ಲಿ, ಪ್ರತಿಭೆ ಇದ್ದ ನಿರ್ದೇಶಕರುಗಳಿಗೆ ಜಾಗವಿಲ್ಲ, ನಿz ಶಕ ಜಸ್ಟ್ ಒಬ್ಬ ಉತ್ತಮ ಮ್ಯಾನೆಜರ್ ಆಗಿದ್ದರೆ ಸಾಕು.. ಪ್ರೊಡ್ಯೂಸರ್ ಮಾತಿನ ಮಂಟಪಕ್ಕೆ ಶಿಲಾನ್ಯಾಸ ಮಾಡಿ ಬಿಡುತ್ತಾರೆ! ಜೊತೆಗೆ ಅಪರೂಪಕ್ಕೆ ಬೈಸಾನಿಯಂತವರೂ ಇರುತ್ತಾರೆ.
`ರಂಕಲ್ ರಾಟೆಯ ಅಟ್ರಾಕ್ಷನ್ ಅಂದ್ರೆ ಬಾಲಿವುಡ್ ಸಿಂಗರ್ ಸುಖ್ವಿಂದರ್ ಸಿಂಗ್ ಮತ್ತು ಕೈಲಾಶ್ ಕೇರ್. ಈಗಾಗಲೇ ಬಾಲಿವುಡ್‌ನಲ್ಲಿ ಸ್ಪೋರ್ಟ್ಸ್ ಬೇಸ್ಡ್ ಚಿತ್ರಗಳಲ್ಲಿ ಸುಖ್ವಿಂದರ್ ಗಾನ ಡಿಫಾಲ್ಟ್ ಎಂಬಂತಾಗಿದೆ. `ಸ್ಲಂ ಡಾಗ್ ಮಿಲಿಯನರ್ನ `ಜೈ ಹೋ ಹಾಡಿನಿಂದ ಹಿಡಿದು `ಚಕ್‌ದೇಇಂಡಿಯಾದ ಟೈಟಲ್ ಟ್ರಾಕ್‌ನವರೆಗೆ, ಸುಖ್ವಿಂದರ್ ಹಾಡಿದ ಅಷ್ಟೂ ಹಾಡುಗಳು ಪ್ರೊಡ್ಯುಸರ್‌ಗೆ ಸುಖ ತಂದುಕೊಟ್ಟಿದೆ. ಇನ್ನು ಕೈಲಾಶ್ ಕೇರ್ `ರಂಕಲ್‌ರಾಟೆಗೆ ಹಾಡಿರುವ ಪ್ಯಾತೋ ಟ್ರ್ಯಾಕ್ ಇಲ್ಲಿವರೆಗೆ ಕನ್ನಡದಲ್ಲಿ ಬಂದಿರುವ ಮದರ್ ಸೆಂಟಿಮೆಂಟ್ ಸಾಂಗ್‌ಗಳ ಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿ ನಿಲ್ಲುತ್ತದೆ. ಕಾರಣ ಕೈಲಾಶ್ ವಾಯ್ಸು.. ಅವಿನಾಶ್-ಶ್ರೀರಾಮ್‌ರವರ ಸಂಗೀತ.. ಎನ್.ಎಸ್.ಮನ್ವರ್ಷಿ ಸಾಹಿತ್ಯ.. ಪ್ರವೀಣ್.ಎಮ್.ಪ್ರಭುರವರ ಕ್ಯಾಮಾರಾ ಕೈಚಳಕ. ಈಗಾಗಲೇ ಚಿತ್ರದ ಸಾಂಗ್&ಟ್ರೈಲರ್‌ಗಳನ್ನು ನೋಡಿ ಸುಧಾಮೂರ್ತಿಯವರು `ಕನ್ನಡದಲ್ಲಿ ಸ್ಪೋರ್ಟ್ಸ್ ಬೇಸ್ಡ್ ಚಿತ್ರಗಳಿಗೆ ಈ ಚಿತ್ರ ಮಾದರಿಯಾಗಲಿದೆ ಎಂದು ಮೆಚುಗೆ ವೈಕ್ತಪಡಿಸಿದ್ದಾರೆ. ರಂಗಭೂಮಿ/ಚಿತ್ರನಟರಾದ ಕೃಷ್ಣಮೂರ್ತಿ ಕವತ್ತಾರ್ ಅವರನ್ನೊಬ್ಬರು ಬಿಟ್ಟರೆ, ಉಳಿದಂತೆ ಚಿತ್ರದಲ್ಲಿ ನಟರಾಗಿ/ಟೆಕ್ನಿಷಿಯನ್ಸ್ ಆಗಿ ಹಲುವು ಪ್ತತಿಭೆಗಳು ಕನ್ನಡಿರ ಮುಂದೆ ಬರಲಿದ್ದಾರೆ. ಈ ಮೂಲಕ ರಂಗಭೂಲಿಯಿಂದ ಮೊಳೆತ ಒಂದಷ್ಟು ಪ್ರತಿಭೆಗಳು `ರಂಕಲ್ ರಾಟೆಯನ್ನು ನೆಪವಾಗಿಸಿಕೊಂಡು ಹೆಮ್ಮರವಾಗುವ ಎಲ್ಲಾ ಸಾಧ್ಯತೆಯನ್ನು ಎತ್ತಿ ತೋರಿಸಿದೆ.

Share.

Leave A Reply