ಅತಿ ಹೆಚ್ಚು ಓದುಗರನ್ನು ಹೊಂದಿರುವ CINIBUZZ ನಲ್ಲಿ ನಿಮ್ಮ ಸಿನಿಮಾದ ಕುರಿತ ಲೇಖನ / ಜಾಹೀರಾತು ಬೇಕಿದ್ದಲ್ಲಿ ಸಂಪರ್ಕಿಸಿ : 88615 99996

ಲವರ್ ಬಾಯ್ ಅಜೇಯ್ ರಾವ್ ಆಕ್ಷನ್ ಮೂಡ್!

0

ತಮ್ಮ ಹೆಸರು ಕೇಳಿದಾಕ್ಷಣ ಲವರ್ ಬಾಯ್ ಎಂಬ ವಿಶೇಷಣವೂ ನೆನಪಾಗುವಷ್ಟರ ಮಟ್ಟಿಗೆ ಇಮೇಜು ಸೃಷ್ಟಿಸಿಕೊಂಡವರು ಅಜೇಯ್ ರಾವ್. ಸಾಮಾನ್ಯವಾಗಿ ಆರಂಭದಿಂದ ಒಂದು ಇಮೇಜಿನ ಪಾತ್ರ ಕ್ಲಿಕ್ಕಾದರೆ ನಂತರ ಅಂಥಾದ್ದೇ ಪಾತ್ರಗಳ ಮೂಲಕ ಕಟ್ಟಿ ಹಾಕೋದು ಚಿತ್ರರಂಗದಲ್ಲಿ ಮಾಮೂಲು. ಆದರೆ ಅಂಥಾ ಇಮೇಜನ್ನು ಕೊಂಚ ಬ್ರೇಕ್ ಮಾಡಿ ಬೇರೆ ಗೆಟಪ್ಪಿನಲ್ಲಿ ಅವತರಿಸೋದಕ್ಕೂ ಗುಂಡಿಗೆ ಇರಲೇಬೇಕು. ಆ ವಿಚಾರದಲ್ಲಿ ಅಜೇಯ್ ರಾವ್ ಅವರ ‘ಧೈರ್ಯಂ ಅನ್ನು ಮೆಚ್ಚಲೇ ಬೇಕು!
ಇದೀಗ ತೆರೆ ಕಾಣಲು ಸನ್ನದ್ಧವಾಗಿರೋ ಧೈರ್ಯಂ ಚಿತ್ರದಲ್ಲಿ ಅಜೇಯ್ ಪಕ್ಕಾ ಮಾಸ್ ಲುಕ್ಕಲ್ಲಿ ಕಾಣಿಸಿಕೊಂಡಿದ್ದಾರೆಂಬ ವಿಚಾರ ಈಗಾಗಲೇ ಜಾಹೀರಾಗಿದೆ. ಅಜೇಯ್ ಈ ಚಿತ್ರದಲ್ಲಿ ಮಾಸ್ ಪಾತ್ರ ನಿಭಾಯಿಸುತ್ತಾರೆಂಬ ಸುದ್ದಿ ಕೇಳಿದೇಟಿಗೆ ಒಳಗೊಳಗೇ ಕೊಂಕಾಡಿದ್ದವರೂ ಕೂಡಾ ಇತ್ತೀಚೆಗೆ ಬಿಡುಗಡೆಯಾದ ಚಿತ್ರದ ಟ್ರೈಲರ್ ನೋಡಿ ಥಂಡಾ ಹೊಡೆದಿದ್ದಾರೆ. ಯಾಕೆಂದರೆ, ಅದರಲ್ಲಿಯೇ ಅಜೇಯ್ ತಾನು ಮಾಸ್ ಲುಕ್ಕಿಗೂ ಸೈ ಎಂಬುದನ್ನು ಸಾಬೀತುಪಡಿಸಿದ್ದಾರೆ.
ಅಜೇಯ್ ರಾವ್ ಅವರನ್ನು ಲವರ್ ಬಾಯ್ ಆಗಿಯೇ ಒಪ್ಪಿಕೊಂಡಿರೋ ಅಭಿಮಾನಿಗಳು ಮಾಸ್ ಲುಕ್ಕಿಗೆ ಹೇಗೆ ಪ್ರತಿಕ್ರಿಯಿಸುತ್ತಾರೆಂಬುದಕ್ಕೂ ಟ್ರೈಲರ್ಗೆ ಸಿಕ್ಕ ಅಭೂತಪೂರ್ವ ಪ್ರತಿಕ್ರಿಯೆ ಉತ್ತರ ನೀಡಿದೆ. ಅಭಿಮಾನಿ ಬಳಗವೂ ಅಜೇಯ್ರ ಖಡಕ್ ಲುಕ್ ಮತ್ತು ರಗಡ್ ಡೈಲಾಗ್ ಡೆಲಿವರಿ ಕಂಡು ಹುಚ್ಚೆದ್ದಿದ್ದಾರೆ. ಆದ್ದರಿಂದಲೇ ಈ ಟ್ರೈಲರ್ ಸಾಮಾಜಿಕ ಜಾಲ ತಾಣಗಳಲ್ಲಿ ಭಾರೀ ವೈರಲ್ ಆಗಿ ಸಂಚನ ಸೃಷ್ಟಿಸಿತ್ತು.
ಇದೀಗ ಈ ಚಿತ್ರ ಈ ವಾರ ತೆರೆ ಕಾಣುತ್ತಿದೆ. ಅಜೇಯ್ ರಾವ್ ಈ ವರೆಗೂ ಹಿಟ್ ಚಿತ್ರಗಳನ್ನು ಕೊಟ್ಟಿದ್ದಾರೆ. ಆದರೂ ಅವರಿಗಿದು ಹೊಸಾ ಬಗೆಯ ಕುತೂಹಲ ಬೆರೆತ ನಿರೀಕ್ಷೆಯ ಕಾಲ…

Share.

Leave A Reply