ಅತಿ ಹೆಚ್ಚು ಓದುಗರನ್ನು ಹೊಂದಿರುವ CINIBUZZ ನಲ್ಲಿ ನಿಮ್ಮ ಸಿನಿಮಾದ ಕುರಿತ ಲೇಖನ / ಜಾಹೀರಾತು ಬೇಕಿದ್ದಲ್ಲಿ ಸಂಪರ್ಕಿಸಿ : 88615 99996

ಮುಸ್ಲಿಂ ಯಕ್ಷಗಾನ ಕಲಾವಿದನ ಕಥನ “ಬಣ್ಣ ಬಣ್ಣದ ಬದುಕು”

0

ಕರಾವಳಿ ಕರ್ನಾಟಕದ ಯಕ್ಷಗಾನ ಕಲಾವಿದನೊಬ್ಬನ ಜೀವನದ ಕಥೆಯನ್ನು ಒಳಗೊಂಡಿರುವ ಚಿತ್ರ ಬಣ್ಣ ಬಣ್ಣದ ಬದುಕು ಇದೇ ೧೯ ರಂದು ರಾಜ್ಯದ್ಯಂತ ಬಿಡುಗಡೆಯಾಗಲಿರುವ ಈ ಚಿತ್ರವನ್ನು ಕರಾವಳಿ ಭಾಗದ ಇಸ್ಮಾಯಿಲ್ ಮೂಡಶೆಡ್ಡೆ ನಿರ್ದೇಶನ ಮಾಡಿದ್ದಾರೆ. ಮುಂಬಯಿ ಮೂಡಲ ಜಗತ್ತಿನಲ್ಲಿ ಗುರುತಿಸಿಕೊಂಡಿರುವ ಕಲಾವಿದ ರವಿರಾಜಶೆಟ್ಟಿ ಈ ಚಿತ್ರದ ನಾಯಕನಾಗಿ ಕಾಣಿಸಿಕೊಂಡಿದ್ದಾರೆ. ಈಗಾಗಲೇ ಒಂದೆರಡು ತುಳು ಚಿತ್ರಗಳಲ್ಲಿ ಅಭಿನಯಿಸಿರುವ ರವಿರಾಜ ಶೆಟ್ಟಿ ಮೂಲತಃ ಮಲೆನಾಡಿನ ಪ್ರತಿಭೆ. ಆರಂಭದಲ್ಲಿ ಮುಸ್ಲಿಂ ಯುವಕನ ಪಾತ್ರ ಮಾಡೋದು ಹೇಗೆ ಎಂದು ಹೆದರಿದ್ದೆ. ಆದರೆ ಈ ಚಿತ್ರದ ಕಥೆ ನನ್ನನ್ನು ತುಂಬಾ ಆಕರ್ಷಿಸಿತು ಎಂದು ಹೇಳಿದರು.
ಚಿತ್ರದ ಬಿಡುಗಡೆಯ ಕುರಿತಂತೆ ನಡೆದ ಪತ್ರಿಕಾಗೋಷ್ಠಿಯಲ್ಲಿ ಬಣ್ಣ ಬಣ್ಣದ ಬದುಕು ಚಿತ್ರತಂಡ ತಮ್ಮ ಅನುಭವಗಳನ್ನು ಹಂಚಿಕೊಂಡಿತು.
ಈ ಚಿತ್ರಕ್ಕೆ ಆಕ್ಷನ್ ಕಟ್ ಹೇಳಿರುವ ಇಸ್ಮಾಯಿಲ್ ಮೂಡುಶೆಡ್ಡೆ ಮಾತನಾಡುತ್ತ ಕರಾವಳಿ ಭಾಗದ ಓರ್ವ ಮುಸ್ಲಿಂ ಯಕ್ಷಗಾನ ಕಲಾವಿದನ ಜೀವನದ ಕಥೆ. ಮಂಗಳೂರು ಭಾಗದಲ್ಲಿ ಕೋಮು ಗಲಭೆ ನಡೆಯುತ್ತಿದ್ದ ಸಮಯದಲ್ಲಿ ಮುಸ್ಲಿಂ ಕಲಾವಿದನಿಂದ ರಾಮ, ಕೃಷ್ಣನ ಪಾತ್ರಗಳನ್ನು ಮಾಡಲು ಬಿಡುವರೋ ಇಲ್ಲವೋ ಎಂಬುವುದನ್ನು ಹೇಳುವ ಕಥೆ ಈ ಚಿತ್ರದಲ್ಲಿದೆ. ಸಿನಿಮಾ ತುಂಬಾ ಚೆನ್ನಾಗಿ ಮೂಡಿಬಂದಿದೆ. ಅಲ್ಲದೆ ಈ ಥರದ ಸಿನಿಮಾಗಳನ್ನು ನಿರ್ಮಿಸಲು ನಿರ್ಮಾಪಕರ ಸಹಕಾರ ತುಂಬಾ ಮುಖ್ಯ. ಈ ಹಂತದಲ್ಲಿ ನಿರ್ಮಾಪಕ ಕೃಷ್ಣನಾಯ್ಕ ಅವರು ತುಂಬಾ ಸಪೋರ್ಟ್ ಮಾಡಿದರು. ಅಲ್ಲದೆ ಅವರು ನನ್ನ ಸ್ನೇಹಿತರು ಕೂಡ ಎಂದು ನಿರ್ದೇಶಕ ಇಸ್ಮಾಯಿಲ್ ಹೇಳಿದರು.
ಕಳೆದ ಹಲವಾರು ತಿಂಗಳಿಂದ ಗ್ಯಾಂಗ್ರಿನ್‌ನಿಂದ ಬಳಲುತ್ತಿರುವ ನಟ ಸತ್ಯಜಿತ್ ಕೂಡ ಈ ಚಿತ್ರದಲ್ಲಿ ಅಭಿನಯಿಸಿದ್ದಾರೆ. ಈ ಚಿತ್ರದಲ್ಲಿ ಹಿರಿಯ ನಟ ಸತ್ಯಜಿತ್ ಬಹುಮುಖ್ಯ ಪಾತ್ರವೊಂದರಲ್ಲಿ ಕಣಿಸಿಕೊಂಡಿದ್ದಾರೆ. ಈ ಚಿತ್ರದ ಚಿತ್ರೀಕರಣ ಮುಕ್ತಾಯಗೊಂಡ ನಂತರ ಸತ್ಯಜಿತ್ ಅನಾರೋಗ್ಯಕ್ಕೆ ತುತ್ತಾಗಿ ತಮ್ಮ ಕಾಲನ್ನು ಕಳೆದುಕೊಳ್ಳಬೇಕಾಯಿತು. ಈ ಸಂದರ್ಭದಲ್ಲಿ ಚಿತ್ರದ ನಿರ್ಮಾಪಕ ಕೃಷ್ಣ ನಾಯಕ್ ಅವರು ಸತ್ಯಜಿತ್ ಅವರ ವೈದ್ಯಕೀಯ ಖರ್ಚಿಗೆಂದು ಎರಡೂವರೆ ಲಕ್ಷ ರುಪಾಯಿಗಳನ್ನು ಆಸ್ಪತ್ರೆಗೆ ಕಟ್ಟಿದ್ದರಂತೆ. ಇದನ್ನು ಸ್ಮರಿಸಿದ ಸತ್ಯಜಿತ್ ಈ ಚಿತ್ರದ ನಿರ್ಮಾಪಕರಾದ ಕೃಷ್ಣಾ ನಾಯಕ್ ನನ್ನ ಪಾಲಿನ ದೇವರು ಎಂದು ನುಡಿದರು.
ಮತ್ತೊಬ್ಬ ಹಿರಿಯ ನಟ ಹೊನ್ನವಳ್ಳಿ ಕೃಷ್ಣ ಮಾತನಾಡಿ ಸಿನಿಮಾ ತುಂಬಾ ಚೆನ್ನಾಗಿ ಬಂದಿದೆ. ನಿರ್ಮಾಪಕರು ತುಂಬಾ ಸಹಕಾರ ನೀಡಿದರು. ಅಲ್ಲಿನ ಜನ ಕೂಡ ತಮ್ಮ ಮನೆಯವರ ಥರ ಎಲ್ಲಾ ಕಲಾವಿದರನ್ನು ಆತ್ಮೀಯತೆಯಿಂದ ನೋಡಿಕೊಂಡರು ಎಂದು ಹೇಳಿದರು. ಚಿತ್ರದಲ್ಲಿ ನಾಯಕನ ತಂಗಿಯ ಪಾತ್ರದಲ್ಲಿ ಕಾಣಿಸಿಕೊಂಡಿರುವ ನಟಿ ರಿಯಾ ತನ್ನ ಪಾತ್ರದ ಬಗ್ಗೆ ಹೇಳಿಕೊಂಡರು. ಅನಾರೋಗ್ಯದ ಕಾರಣ ನಿರ್ಮಾಪಕ ಕೃಷ್ಣನಾಯ್ಕ ಅವರು ಪತ್ರಿಕಾಗೋಷ್ಠಿಯಲ್ಲಿ ಹಾಜರಿರಲಿಲ್ಲ. ಕಿರುತೆರೆ ನಟಿ ಅಪೂರ್ವಶ್ರೀ ಚಿತ್ರದಲ್ಲಿ ನಾಯಕನ ತಾಯಿಯ ಪಾತ್ರ ನಿರ್ವಹಿಸಿದ್ದಾರೆ. ತುಳು ನಟಿ ಅನ್ವಿತಾ ಸಾಗರ ಈ ಚಿತ್ರದ ನಾಯಕಿ ಉಳಿದ ಪಾತ್ರವರ್ಗಗಳಲ್ಲಿ ರಮೇಶ್ ಭಟ್, ಗೋಪಿನಾಥ್‌ಭಟ್ ಅಭಿನಯಿಸಿದ್ದಾರೆ. ಯಕ್ಷಗಾನ ಗಾಯಕ ಸತೀಶ್‌ಶೆಟ್ಟಿ ಈ ಚಿತ್ರದಲ್ಲಿ ಒಂದು ಹಾಡನ್ನು ಹಾಡಿದ್ದಾರೆ. ಶ್ರೀ ಮುತ್ತುರಾಮ್ ಕ್ರಿಯೇಷನ್ಸ್ ಅಡಿಯಲ್ಲಿ ಕೃಷ್ಣನಾಯ್ಕ ಅವರು ನಿರ್ಮಿಸಿರುವ ಈ ಚಿತ್ರದ ಕಥೆ, ಚಿತ್ರಕಥೆ, ಸಂಭಾಷಣೆ ಬರೆದು ಇಸ್ಮಾಯಿಲ್ ಮೂಡುಶೆಡ್ಡೆ ಅವರು ನಿರ್ದೇಶನ ಮಾಡಿದ್ದಾರೆ.

 

Share.

Leave A Reply