ಅತಿ ಹೆಚ್ಚು ಓದುಗರನ್ನು ಹೊಂದಿರುವ CINIBUZZ ನಲ್ಲಿ ನಿಮ್ಮ ಸಿನಿಮಾದ ಕುರಿತ ಲೇಖನ / ಜಾಹೀರಾತು ಬೇಕಿದ್ದಲ್ಲಿ ಸಂಪರ್ಕಿಸಿ : 88615 99996

ಮುಂದಿನ ತಿಂಗಳು ಧೈರ್ಯಂ

0

ಅಜೆಯ್ ರಾವ್ ಮೊದಲ ಬಾರಿ ಆಕ್ಷನ್ ಹೀರೋ ಆಗಿ ಕಾಣಿಸಿಕೊಳ್ಳುತ್ತಿರುವ `ಧೈರ್ಯಂ ಚಿತ್ರ ಈಗಾಗಲೇ ನಾನಾ ರೀತಿಯಲ್ಲಿ ಗಮನ ಸೆಳೆದಿದೆ. ಪ್ರೇಕ್ಷಕರಲ್ಲೊಂದು ಕುತೂಹಲ ಕಾಯ್ದುಕೊಂಡಿರುವ ಈ ಚಿತ್ರ ಮುಂದಿನ ತಿಂಗಳು ರಾಜ್ಯಾದ್ಯಂತ ತೆರೆ ಕಾಣಲಿದೆ.
ಶಿವತೇಜಸ್ ನಿರ್ದೇಶನದ ಎರಡನೇ ಚಿತ್ರ ಧೈರ್ಯಂ. ಇದರ ಹಾಡುಗಳು ಈಗಾಗಲೇ ಹಿಟ್ ಆಗಿವೆ ಟ್ರೈಲರ್ ಕೂಡಾ ಯೂಟ್ಯೂಬ್‌ನಲ್ಲಿ ಜನಪ್ರಿಯಗೊಂಡು ಸಾಮಾಜಿಕ ಜಾಲ ತಾಣಗಳಲ್ಲಿ ಟಾಕ್ ಕ್ರಿಯೇಟ್ ಮಾಡಿವೆ. ಇದರಲ್ಲಿ ಅಜೇಯ್ ರಾವ್ ಅವರ ಡಿಫರೆಂಟ್ ಗೆಟಪ್ ಕೂಡಾ ಮುಖ್ಯವಾಗಿ ನಿರೀಕ್ಷೆ ಹುಟ್ಟಿಸಿದೆ.
ದಾವಣಗೆರೆಯಲ್ಲಿ ವೈದ್ಯರಾಗಿದ್ದುಕೊಂಡೇ ಅಪಾರವಾದ ಸಿನಿಮಾ ಪ್ರೀತಿ ಹೊಂದಿರುವ ಡಾ.ಕೆ ರಾಜು ಈ ಚಿತ್ರಕ್ಕೆ ಹಣ ಹೂಡಿದ್ದಾರೆ.
ಅಂದಹಾಗೆ, ಈ ಚಿತ್ರ ನಾನಾ ವಿಶೇಷತೆಗಳನ್ನು ಕುತೂಹಲಗಳನ್ನು ಒಳಗಿಟ್ಟುಕೊಂಡಿದೆ. ಇದುವರೆಗೂ ಲವರ್ ಬಾಯ್ ಆಗಿ ಕಾಣಿಸಿಕೊಂಡಿದ್ದ ಅಜೇಯ್ ರಾವ್ ಇಲ್ಲಿ ಪಕ್ಕಾ ಆಕ್ಷನ್ ಲುಕ್ಕಿನಲ್ಲಿ ಕಾಣಿಸಿಕೊಂಡಿದ್ದಾರೆ. ಸಮಾಜಮುಖಿ ಮನಸ್ಥಿತಿಯ ಹುಡುಗನೊಬ್ಬ ದುಷ್ಟ ಶಕ್ತಿಗಳ ವಿರುದ್ಧ ಹೋರಾಡಬೆಕಾದ ಸನ್ನಿವೇಶ ಬಂದಾಗ ಎದುರಾಗೋ ಸಮಕಷ್ಟ, ಸವಾಶಲುಗಳು ಮತ್ತು ಅದನ್ನು ಹೇಗೆ ಧೈರ್ಯ ಎಂಬ ಅಸ್ತ್ರದಿಂದ ಎದುರಿಸುತ್ತಾನೆಂಬ ರೋಚಕ ಕಥಾ ಹಂದರವನ್ನು ಈ ಚಿತ್ರ ಹೊಂದಿದೆಯಂತೆ.
ಇನ್ನೊಂದು ವಿಶೇಷವೆಂದರೆ, ಖ್ಯಾತ ಖಳನಟ ರವಿಶಂಕರ್ ಈ ಚಿತ್ರದಲ್ಲಿ ಭ್ರಷ್ಟ ಪೊಲೀಸ್ ಅಧಿಕಾರಿಯಾಗಿ ಕಾಣಿಸಿಕೊಂಡಿದ್ದಾರೆ. ರವಿಶಂಕರ್ ಜೊತೆಗೆ ಅಜೇಯ್ ರಾವ್ ಜಬರ್ದಸ್ತಾಗಿ ಫೈಟಿಂಗ್ ಸೀನುಗಳಲ್ಲಿ ಮಿಂಚಿದ್ದಾರಂತೆ. ಇದೂ ಸೇರಿದಂತೆ ಅಜೇಯ್ ರಾವ್ ಅವರನ್ನು ಕಲ್ಪಿಸಿಕೊಳ್ಳಲೂ ಆಗದಂಥಾ ರೋಚಕ ಸಾಹಸ ಸನ್ನಿವೇಶಗಳೂ ಚಿತ್ರದ ತುಂಬಾ ಯಥೇಚ್ಚವಾಗಿದೆಯಂತೆ.
ಒಟ್ಟಾರೆಯಾಗಿ ಆರಂಭದಿಂದಲೂ ಕುತೂಹಲ ಹುಟ್ಟಿಸಿರೋ ಈ ಚಿತ್ರ ಇದೀಗ ಹಾಡು ಮತ್ತು ಟ್ರೈಲರ್ ಮೂಲಕ ಮತ್ತಷ್ಟು ಸದ್ದು ಮಾಡುತ್ತಿದೆ. ಎಲ್ಲ ಕೆಲಸ ಕಾರ್ಯಗಳನ್ನು ಮುಗಿಸಿಕೊಂಡಿರೋ ಚಿತ್ರತಂಡ ಮುಂದಿನ ತಿಂಗಳು ಚಿತ್ರವನ್ನು ತೆರೆಗೆ ತರಲು ಮುಹೂರ್ತ ನಿಗಧಿ ಮಾಡಿಕೊಂಡಿದೆ.

Share.

Leave A Reply