ಅತಿ ಹೆಚ್ಚು ಓದುಗರನ್ನು ಹೊಂದಿರುವ CINIBUZZ ನಲ್ಲಿ ನಿಮ್ಮ ಸಿನಿಮಾದ ಕುರಿತ ಲೇಖನ / ಜಾಹೀರಾತು ಬೇಕಿದ್ದಲ್ಲಿ ಸಂಪರ್ಕಿಸಿ : 88615 99996

ಧೈರ್ಯಂ ಹಾಡುಗಳು ಬರಲಿವೆ!

0


ಇದುವರೆಗೂ ಕೃಷ್ಣ ಸೀರೀಸ್ ಚಿತ್ರಗಳ ಲವರ್ ಬಾಯ್ ಆಗಿಯೇ ಬ್ರ್ಯಾಂಡ್ ಆಗಿದ್ದವರು ಅಜೇಯ್ ರಾವ್. ಇದಿಗ ಅವರು ಏಕಾಏಕಿ ಮಾಸ್ ಲುಕ್ಕಿನಲ್ಲಿ ಕಾಣಿಸಿಕೊಂಡಿದ್ದಾರೆ. ಅಂದ ಹಾಗೆ ಅಜೇಯ್ ಇಂಥಾದ್ದೊಂದು ಡಿಫರೆಂಟ್ ಗೆಟಪ್ಪಿನಲ್ಲಿ ಕಾಣಿಸಿಕೊಂಡಿರೋದು ‘ಧೈರ್ಯಂ ಚಿತ್ರದಲ್ಲಿ. ಎಲ್ಲ ಕೆಲಸ ಕಾರ್ಯಗಳನ್ನೂ ಮಗಿಸಿಕೊಂಡಿರೋ ಈ ಚಿತ್ರದ ಆಡಿಯೋ ಬಿಡುಗಡೆಗೀಗ ದಿನಗಣನೆ ಆರಂಭವಾಗಿದೆ!
ಸಾಮಾನ್ಯವಾಗಿ ಒಂದು ಇಮೇಜಿಗೆ ಒಗ್ಗಿಕೊಂಡ ನಟರನ್ನು ಹಠಾತ್ತನೆ ಬೇರೊಂದು ಇಮೇಜಿನಲ್ಲಿ ತೋರಿಸೋದು ಭಲೇ ರಿಸ್ಕಿನ ವಿಚಾರ. ಅದು ಗೊತ್ತಿದ್ದು ಇಂತಾದ್ದೊಂದು ಸಕಾರಾತ್ಮಕ ಸಾಹಸಕ್ಕೆ ಕೈ ಹಾಕಿರುವವರು ನಿರ್ದೆಶಕ ಶಿವ ತೇಜಸ್!
ಲವರ್ ಬಾಯ್ ಅಜೇಯ್ ರಾವ್ ಮಾಸ್ ಲುಕ್ಕಿಗೂ ಒಗ್ಗಿಕೊಳ್ಳುತ್ತಾರೆ ಎಂಬ ನಿರ್ದೇಶಕರ ಭರವಸೆ ಆರಂಭದಲ್ಲಿಯೇ ನಿಜವಾಗಿತ್ತು. ಯಾಕೆಂದರೆ, ಈ ಚಿತ್ರಕ್ಕಾಗಿ ಮಾಡಲಾಗಿದ್ದ ಫೋಟೋಶೂಟಿನಲ್ಲಿ ಅಜೇಯ್ ಸಖತ್ತಾಗಿಯೇ ಮಿಂಚಿದ್ದರು. ಇದಕ್ಕಾಗಿ ಅವರು ಸಾಕಷ್ಟು ದೇಹ ದಂಡನೆ ಮಾಡಿ ಒಗ್ಗಿಕೊಂಡಿರುವ ಶ್ರಮವೂ ಸ್ಪಷ್ಟವಾಗಿಯೇ ಕಾಣಿಸಿತ್ತು. ಹೀಗಿರೋದರಿಂದಲೇ ಈ ಫೋಟೋಗಳು ಸಾಮಾಜಿಕ ಜಾಲ ತಾಣಗಳಲ್ಲಿ ವೈರಲ್ ಆಗಿದ್ದವು.
ಅಂದಹಾಗೆ ಈ ಚಿತ್ರ ಚಿತ್ರೀಕರಣವನ್ನೆಲ್ಲ ಸಂಪೂರ್ಣವಾಗಿ ಮುಗಿಸಿಕೊಂಡಿದೆ. ಒಂದು ಚೆಂದದ ಥ್ರಿಲ್ಲರ್ ಕಥೆಯನ್ನು ಅಜೇಯ್ ಬೆರಗಾಗುವಂತೆ ನಿರ್ವಹಿಸಿದ್ದಾರೆಂಬ ಮೆಚ್ಚುಗೆ ಚಿತ್ರ ತಂಡದಲ್ಲಿದೆ. ಕೆ ರಾಜು ಅವರು ನಿರ್ಮಾಣ ಮಾಡಿರುವ ಈ ಚಿತ್ರ ಈಗಾಗಲೇ ಸಾಕಷ್ಟು ಕುತೂಹಲ, ನಿರೀಕ್ಷೆ ಹುಟ್ಟು ಹಾಕಿದೆ. ಅಜೇಯ್ ರಾವ್‌ಗೆ ಧೈರ್ಯಂ ಚಿತ್ರದ ಮೂಲಕ ಭರ್ಜರಿ ಗೆಲುವೊಂದು ಸಿಕ್ಕಿ ಅವರ ಈ ವರೆಗಿನ ಇಮೇಜು ಬದಲಾಗಬಹುದೆಂಬ ನಿರೀಕ್ಷೆಯೂ ಇದೆ.

Share.

Leave A Reply