ಅತಿ ಹೆಚ್ಚು ಓದುಗರನ್ನು ಹೊಂದಿರುವ CINIBUZZ ನಲ್ಲಿ ನಿಮ್ಮ ಸಿನಿಮಾದ ಕುರಿತ ಲೇಖನ / ಜಾಹೀರಾತು ಬೇಕಿದ್ದಲ್ಲಿ ಸಂಪರ್ಕಿಸಿ : 88615 99996

ಧೈರ್ಯಂ ಈ ವಾರ ತೆರೆಗೆ

0

ಶಿವತೇಜಸ್ ನಿರ್ದೇಶನದ ಎರಡನೇ ಚಿತ್ರ ಧೈರ್ಯಂ. ವೈದ್ಯರಾಗಿದ್ದುಕೊಂಡೇ ಅಪಾರವಾದ ಸಿನಿಮಾ ಪ್ರೀತಿ ಹೊಂದಿರುವ ಡಾ.ಕೆ ರಾಜು ಈ ಚಿತ್ರಕ್ಕೆ ಹಣ ಹೂಡಿದ್ದಾರೆ. ಅಂದಹಾಗೆ, ಈ ಚಿತ್ರ ನನಾ ವಿಶೇಷತೆಗಳನ್ನು ಕುತೂಹಲಗಳನ್ನು ಒಳಗಿಟ್ಟುಕೊಂಡಿರುವ ಧೈರ್ಯಂ ಇದೇ ವಾರ ತೆರೆಗೆ ಬರುತ್ತಿದೆ. ಇದುವರೆಗೂ ಲವರ್ ಬಾಯ್ ಆಗಿ ಕಾಣಿಸಿಕೊಂಡಿದ್ದ ಅಜೇಯ್ ರಾವ್ ಈ ಚಿತ್ರದಲ್ಲಿ ಪಕ್ಕಾ ಆಕ್ಷನ್ ಲುಕ್ಕಿನಲ್ಲಿ ಕಾಣಿಸಿಕೊಂಡಿದ್ದಾರೆ. ಸಮಾಜಮುಖಿ ಮನಸ್ಥಿತಿಯ ಹುಡುಗನೊಬ್ಬ ದುಷ್ಟ ಶಕ್ತಿಗಳ ವಿರುದ್ಧ ಹೋರಾಡಬೆಕಾದ ಸನ್ನಿವೇಶ ಬಂದಾಗ ಎದುರಾಗೋ ಸಂಕಷ್ಟ, ಸವಾಲುಗಳು ಮತ್ತು ಅದನ್ನು ಹೇಗೆ ಧೈರ್ಯ ಎಂಬ ಅಸ್ತ್ರದಿಂದ ಎದುರಿಸುತ್ತಾನೆಂಬ ರೋಚಕ ಕಥಾ ಹಂದರವನ್ನು ಈ ಚಿತ್ರ ಹೊಂದಿದೆ.
ಇನ್ನೊಂದು ವಿಶೇಷವೆಂದರೆ, ಖ್ಯಾತ ಖಳನಟ ರವಿಶಂಕರ್ ಈ ಚಿತ್ರದಲ್ಲಿ ಪೊಲೀಸ್ ಅಧಿಕಾರಿಯಾಗಿ ಕಾಣಿಸಿಕೊಂಡಿದ್ದಾರೆ. ರವಿಶಂಕರ್ ಜೊತೆಗೆ ಅಜೇಯ್ ರಾವ್ ಜಬರ್ದಸ್ತಾಗಿ ಫೈಟಿಂಗ್ ಸೀನುಗಳಲ್ಲಿ ಮಿಂಚಿದ್ದಾರಂತೆ.
ಅಜಯ್ ರಾವ್ ಜೊತೆಗೆ ಅದಿತಿ ಪ್ರಭುದೇವ ನಾಯಕಿಯಾಗಿ ನಟಿಸಿದ್ದಾರೆ. ಶೇಖರ್ ಚಂದ್ರ ಛಾಯಾಗ್ರಹಣ, ಎಮಿಲ್ ಸಂಗೀತ, ಕೆ.ಎಂ ಪ್ರಕಾಶ್ ಸಂಕಲನ, ರವಿವರ್ಮ ಸಾಹಸ, ಕಲೈ ನೃತ್ಯ ನಿರ್ದೇಶನ ಈ ಚಿತ್ರಕ್ಕಿದೆ. ಈ ಹಿಂದೆ ನೆನಪಿರಲಿ ಪ್ರೇಮ್ ಮುಖ್ಯ ಭೂಮಿಕೆಯಲ್ಲಿದ್ದ ಮಳೆ ಚಿತ್ರದ ಮೂಲಕ ನಿರ್ದೇಶಕರಾಗಿ ಹೊರ ಹೊಮ್ಮಿ ಗಮನ ಸೆಳೆದಿದ್ದವುರು ಶಿವತೇಜಸ್. ಧೈರ್ಯಂ ಶಿವತೇಜಸ್ ನಿರ್ದೇಶನದ ಎರಡನೇ ಚಿತ್ರ. ಈ ಚಿತ್ರ ಈಗಾಗಲೇ ಬಹಳಷ್ಟು ನಿರೀಕ್ಷೆ ಹುಟ್ಟಿಸಿದೆ. ಒಟ್ಟಾರೆಯಾಗಿ ಆರಂಭದಿಂದಲೂ ಕುತೂಹಲ ಹುಟ್ಟಿಸಿರೋ ಈ ಚಿತ್ರ ಈ ವಾರ ತೆರೆಗೆ ಬರುತ್ತಿದೆ.

Share.

Leave A Reply