ಅತಿ ಹೆಚ್ಚು ಓದುಗರನ್ನು ಹೊಂದಿರುವ CINIBUZZ ನಲ್ಲಿ ನಿಮ್ಮ ಸಿನಿಮಾದ ಕುರಿತ ಲೇಖನ / ಜಾಹೀರಾತು ಬೇಕಿದ್ದಲ್ಲಿ ಸಂಪರ್ಕಿಸಿ : 88615 99996

ಕೋಟಿ ಸುರಿದ ಜಾಕ್ ಮಂಜು ಬಚಾವಾಗ್ತಾರಾ?

0

ದುನಿಯಾ ವಿಜಿ ಅಭಿನಯದ `ಮಾಸ್ತಿಗುಡಿ ಚಿತ್ರದ ಬಗೆಗಿನ ನಿರೀಕ್ಷೆ ಮೊದಲ ದಿನವೇ ಹುಸಿಯಾಗಿದೆ. ಬೇರೇನೇ ತಕರಾರುಗಳಿದ್ದರೂ ನಾಗಶೇಖರ್‌ಗೆ ಸಿನಿಮಾ ಗ್ರಹಿಕೆ ಅದ್ಬುತವಾಗಿದೆ. ದೃಷ್ಯ ಕಟ್ಟೋದರಲ್ಲಿಯೂ ಆತ ಪರಿಣಿತ. ಹೀಗಿರೋವಾಗ ಪ್ರೇಮಕಥೆಗಳನ್ನು ಹೇಳುತ್ತಾ ಬಂದ ನಾಗಣ್ಣ ಒಂದು ಮಾಸ್ ಸಬ್ಜೆಕ್ಟಿನ ಮಾಸ್ತಿಗುಡಿಯನ್ನು ಬೆರಗಾಗುವಂತೆ ಮಾಡಿರುತ್ತಾರೆಂಬ ನಿರೀಕ್ಷೆ ಸಹಜವಾಗಿಯೇ ಇತ್ತು.
ಆದರೆ ಮಾಸ್ತಿಗುಡಿ ಅಂಥಾ ಅಗಾಧ ನಿರೀಕ್ಷೆಗಳನ್ನು ಪುಡಿಗಟ್ಟಿದೆ. ಚಿತ್ರ ನೋಡಿ ಬಂದ ವಿಜಿ ಅಬಿಮಾನಿಗಳೇ ನೆಗೆಟಿವ್ ಮಾತುಗಳನ್ನಾಡಲಾರಂಭಿಸಿದರು ನೋಡಿ? ಆಗ ನಾಗಶೇಖರ್ ಸಮೇತ ಇಡೀ ಚಿತ್ರ ತಂಡವೆ ತಲೆ ಕೆಡಿಸಿಕೊಂಡಿದೆ. ಒಂದು ಚೆಂದದ ಕಥೆಯನ್ನು ನಾಗಶೇಖರ್ ಕೆಲಸಕ್ಕೆ ಬಾರದ ವಿಚಾರಗಳನ್ನು ತುಂಬುವ ಹುಚ್ಚಿಗೆ ಬಿದ್ದು ಹಾಳುಗೆಡವಿದ್ದಾರೆಂಬ ಆರೋಪಗಳೇ ವ್ಯಾಪಕವಾಗಿ ಕೇಳಿ ಬಂದಿದ್ದೇ, ಇದೀಗ ಮಾಸ್ತಿಗುಡಿಗೆ ಕತ್ತರಿ ಪ್ರಯೋಗ ನಡೆದಿದೆ ಎಂಬ ಸುದ್ದಿಯ ಮೂಲಕ ಪರ್ಯಾವಸಾನ ಹೊಂದಿದೆ!
ಒಂದು ಮೂಲದ ಪ್ರಕಾರ ಚಿತ್ರತಂಡ ಇದೀಗ ಕತ್ತರಿ ಪ್ರಯೋಗಕ್ಕಾಗಿ ಚೆನೈನಲ್ಲಿ ಬೀಡು ಬಿಟ್ಟಿದೆ. ಇಲ್ಲಿ ಅನವಶ್ಯಕ ಅನ್ನಿಸುವಂಥಾ ದೃಷ್ಯಾವಳಿಗೆ ಕತ್ತರಿ ಹಾಕೋ ಕಾರ್ಯ ಭರದಿಂದ ನಡೆಯುತ್ತಿದೆ. ಇಂಥಾದ್ದೊಂದು ಬೆಳವಣಿಗೆಗೆ ಕಲೆಕ್ಷನ್ನಿಗೆ ತೀರಾ ಹೊಡೆತ ಬಿದ್ದಿರೋದೇ ಕಾರಣ ಎಂದೂ ಹೇಳಲಾಗುತ್ತಿದೆ.
ಹೀಗೆ ಕಲೆಕ್ಷನ್ನು ಡಲ್ಲಾದರೂ ನಿರ್ಮಾಪಕರು ಕೊಂಚ ಸೇಫಾಗಿದ್ದಾರೆ. ಯಾಕೆಂದರೆ ಜಾಕ್ ಮಂಜು ಭಯಾನಕ ಉತ್ಸಾಹದಿಂದ ಹತ್ತೂ ಮುಕ್ಕಾಲು ಕೋಟಿ ಕೊಟ್ಟು ಮಾಸ್ತಿಗುಡಿಯ ವಿತರಣಾ ಹಕ್ಕು ಖರೀದಿಸಿದ್ದರು. ಈ ಹಿಂದೆ ಅನೇಕ ಯಡವಟ್ಟು ಮಾಡಿಕೊಂಡು ಪಾಪರೆದ್ದಿದ್ದ ಮಂಜಣ್ಣ ಇತ್ತೀಚಿನ ವರ್ಷಗಳಲ್ಲಿ ಕೊಂಚ ಚೇತರಿಸಿಕೊಂಡಿದ್ದರು. ಇದೀಗ ಮಾಸ್ತಿಗುಡಿ ಕೊಟ್ಟ ಏಟಿಗೆ ಸಿಕ್ಕ ಮಂಜಣ್ಣನ ಸ್ಥಿತಿ ಅದೇನಾಗಲಿದೆಯೋ? ಒಟ್ಟಿನಲ್ಲಿ ಸಿನಿಮಾರಂಗ ಬಿಟ್ಟು ಬೇರೆ ಕೆಲಸ ನೋಡಿಕೊಳ್ಳುವ ಪರಿಸ್ಥಿತಿ ಬಾರದೇ ಇರಲಿ.

Share.

Leave A Reply