ಅತಿ ಹೆಚ್ಚು ಓದುಗರನ್ನು ಹೊಂದಿರುವ CINIBUZZ ನಲ್ಲಿ ನಿಮ್ಮ ಸಿನಿಮಾದ ಕುರಿತ ಲೇಖನ / ಜಾಹೀರಾತು ಬೇಕಿದ್ದಲ್ಲಿ ಸಂಪರ್ಕಿಸಿ : 88615 99996

ಸೂಜಿದಾರ ಪೋಣಿಸಲು ಹರಿಪ್ರಿಯಾ ರೆಡಿ!

0

ನೀರ್ ದೋಸೆ ಸಿನಿಮಾದಲ್ಲಿ ಮೈಚಳಿಬಿಟ್ಟು ನಟಿಸಿದ್ದ ಹರಿಪ್ರಿಯಾ ಪ್ರಮುಖ ಪಾತ್ರದಲ್ಲಿ ನಟಿಸುತ್ತಿರುವ ಸಿನಿಮಾವೊಂದು ಆರಂಭವಾಗುತ್ತಿದೆ. ಈ ಚಿತ್ರದ ಹೆಸರು ‘ಸೂಜಿದಾರ!
ಹೆಸರು ಕೇಳಿದ ‘ಇದೂ ಕೂಡಾ ಡಬಲ್ ಮೀನಿಂಗ್ ಸಿನಿಮಾನಾ? ಅಂತಾ ಪಡ್ಡೆಗಳ ಉಬ್ಬು ನೆಟ್ಟಗಾಗಬಹುದು. ಆದರೆ ಈ ಚಿತ್ರ ಇವತ್ತಿನ ಕಾಲಘಟ್ಟದಲ್ಲಿ ಏನೇನೂ ಅಲ್ಲದ ಹೆಣ್ಣುಮಗಳೊಬ್ಬಳು ದೊಡ್ಡ ಮಟ್ಟದಲ್ಲಿ ಹೆಸರು ಮಾಡಿ ಗುರುತಿಸಿಕೊಳ್ಳಬೇಕು ಅನ್ನೋ ಕಥೆ ಇದರಲ್ಲಿದೆಯಂತೆ.
ಈ ವರೆಗೆ ರಂಗಭೂಮಿಯಲ್ಲಿ ಸಾಕಷ್ಟು ಕೃಷಿ ಮಾಡಿರುವ ಮೌನೇಶ್ ಬಡಿಗೇರ್ ಈ ಚಿತ್ರವನ್ನು ನಿರ್ದೇಶಿಸುತ್ತಿದ್ದಾರೆ. ಯಶ್ ಶೆಟ್ಟಿ ಎನ್ನುವ ಹೊಸ ಹುಡುಗ ನಾಯಕನಾಗಿ ಎಂಟ್ರಿ ಕೊಡುತ್ತಿದ್ದಾರೆ. ಇನ್ನು ಪ್ರಧಾನ ಪಾತ್ರದಲ್ಲಿ ಹರಿಪ್ರಿಯಾ ಕಾಣಿಸಿಕೊಳ್ಳಲಿದ್ದಾರೆ. ಇದೇ ತಿಂಗಳ ಇಪ್ಪತ್ತೆರಡರಿಂದ ಸೂಜಿಗೆ ದಾರ ಪೋಣಿಸೋ ಕಾಯಕ ಶುರುವಾಗುತ್ತಿದೆ.

Share.

Leave A Reply