ಅತಿ ಹೆಚ್ಚು ಓದುಗರನ್ನು ಹೊಂದಿರುವ CINIBUZZ ನಲ್ಲಿ ನಿಮ್ಮ ಸಿನಿಮಾದ ಕುರಿತ ಲೇಖನ / ಜಾಹೀರಾತು ಬೇಕಿದ್ದಲ್ಲಿ ಸಂಪರ್ಕಿಸಿ : 88615 99996

ಸಾನಿಯಾ ಒಳ ಉಡುಪಿನ ಮೇಲೆ ವರ್ಮಾ ಕಣ್ಣು!

0

ನಿರ್ದೇಶಕ ರಾಂ ಗೋಪಾಲ್ ವರ್ಮಾಗೆ ನಿಜಕ್ಕೂ ತಲೆ ಕೆಟ್ಟಿದ್ಯಾ? ಹೀಗೊಂದು ಸಂದೇಹ ಒಂದು ಕಾಲದಲ್ಲಿ ವರ್ಮಾರನ್ನು ಆರಾಧಿಸುತ್ತಿದ್ದವರಲ್ಲಿಯೂ ಹುಟ್ಟಿಕೊಂಡಿದೆ. ಇದಕ್ಕೆ ಕಾರಣವಾಗಿರೋದು ಈತ ಸರಣಿಯೋಪಾದಿಯಲ್ಲಿ ಮಾಡಿಕೊಳ್ಳುತ್ತಿರೋ ವಿವಾದಗಳು.

ರೀಸೆಂಟಾಗಿ ಬಾಹುಬಲಿ ಚಿತ್ರದ ವಿಚಾರವಾಗಿ ವಿನಾ ಕಾರಣ ಕನ್ನಡಿಗರನ್ನು ಕೆರಳಿಸಿದ್ದ ವರ್ಮಾ ಕಾಕದೃಷ್ಟಿ ಇದೀಗ ಪ್ರಸಿದ್ದ ಟಿನ್ನಿಸ್ ತಾರೆ ಸಾನಿಯಾ ಮಿರ್ಜಾಳ ಒಳ ಉಡುಪಿನ ಮೇಲೆ ಒಕ್ಕರಿಸಿಕೊಂಡಿದೆ!
ವಿಚಾರ ಏನಂದ್ರೆ, ತಮ್ಮ ಹೊಸಾ ಚಿತ್ರ `ಮೇರಿ ಭೇಟಿ ಸನ್ನಿ ಲಿಯೋನ್ ಬನ್ ನಾ ಚಾಹ್ತಾ ಹೈ ಚಿತ್ರದ ಪ್ರಚಾರದಲ್ಲಿ ಭಾರೀ ಬ್ಯುಸಿಯಾಗಿದ್ದಾರೆ. ಸದರಿ ಚಿತ್ರದ ಪ್ರಮೋಷನ್ನಿನಲ್ಲಿ ಉತ್ಸಾಹ ತೋರುತ್ತಿರೋ ವರ್ಮಾ ಏಕಾಏಕಿ ಟೆನಿಸ್ ಆಡುವ ಭಂಗಿಯಲ್ಲಿರುವ ಸಾನಿಯಾಳ ಒಳ ಉಡುಪು ಕಾಣುವ ಫೋಟೋವೊಂದನ್ನು ಟ್ವಿಟರ್‌ನಲ್ಲಿ ಹರಿಬಿಟ್ಟಿದ್ದಾರೆ.
ವರ್ಮಾ ತನ್ನ ಚಿತ್ರದ ಕಥೆಗೆ ಪೂರಕವಾಗಿ ಈ ಚಿತ್ರವನ್ನು ಹಾಕಿಕೊಂಡಿದ್ದರೂ ಅದು ಹಾಲಿ ಟೆನಿಸ್ ತಾರೆಯ ಚಿತ್ರ, ಅದನ್ನು ಕೆಲ ಕಿಡಿಗೇಡಿಗಳು ಈ ಹಿಂದೆ ಸಾಮಾಜಿಕ ಜಲ ತಾಣಗಳಲ್ಲಿ ಹರಿಬಿಟ್ಟಿದ್ದರು, ತಾನೀಗ ಅಂಥಾದ್ದೇ ಪೊರ್ಕಿ ಕೆಲಸ ಮಾಡಿದ್ದೇನೆಂಬ ಕನಿಷ್ಠ ಖಬರೂ ವರ್ಮಾಗಿದ್ದಂತಿಲ್ಲ.
ಒಟ್ಟಾರೆಯಾಗಿ, ವೋಡ್ಕಾ ಏಟಿನಲ್ಲಿ ಈ ವರ್ಮಾ ಇನ್ನೂ ಅದೇನೇನು ಮಾಡಲಿದ್ದಾರೋ…

Share.

Leave A Reply