ಅತಿ ಹೆಚ್ಚು ಓದುಗರನ್ನು ಹೊಂದಿರುವ CINIBUZZ ನಲ್ಲಿ ನಿಮ್ಮ ಸಿನಿಮಾದ ಕುರಿತ ಲೇಖನ / ಜಾಹೀರಾತು ಬೇಕಿದ್ದಲ್ಲಿ ಸಂಪರ್ಕಿಸಿ : 88615 99996

ಮತ್ತೆ ಒಂದಾಯ್ತು ಜಗ್ಗೇಶ್-ವಿಜಯಪ್ರಸಾದ್ ಜೋಡಿ!

0

`ನೀರ್‌ದೋಸೆ ಎನ್ನುವ ಚಿತ್ರ ಕನ್ನಡ ಚಿತ್ರರಂಗದಲ್ಲಿ ಸೃಷ್ಟಿಸಿದ ಸಂಚಲನ ಒಂದೆರಡಲ್ಲ. ಆ ಚಿತ್ರ ಆರಂಭಗೊಂಡಾಗಿನಿಂದ ಹಿಡಿದು ಬಿಡುಗಡೆಯ ನಂತರವೂ ಸುದ್ದಿಯಲ್ಲೇ ಇತ್ತು. ಈಗ ಮತ್ತದೇ `ನೀರ್‌ದೋಸೆಯ ಜೋಡಿ ಜಗ್ಗೇಶ್ ಮತ್ತು ವಿಜಯಪ್ರಸಾದ್ ಮತ್ತೊಂದು ಚಿತ್ರದಲ್ಲಿ ಒಂದಾಗಿದ್ದಾರೆ.
ಹೆಸರಲ್ಲೇ ವಿಶೇಷತೆಯನ್ನು ಹೊಂದಿರುವ `34-34 ಲೇಡೀಸ್ ಟೈಲರ್ ಚಿತ್ರದ ಚಿತ್ರೀಕರಣ ಇದೇ ಜುಲೈ 26ರ ರಿಂದ ಆರಂಭವಾಗಲಿದೆ. ಈ ಸಿನಿಮಾವನ್ನು ಮೇಘಧೂತ ಮೂವೀಸ್ ಸಂಸ್ಥೆ ನಿರ್ಮಿಸುತ್ತಿದೆ. ಈ ಚಿತ್ರದ ನಿರ್ಮಾಪಕರಾದ ರವಿಚಂದ್ರರೆಡ್ಡಿ, ಕೃಷ್ಣಮೂರ್ತಿ ಮತ್ತು ಸನತ್ ಕುಮಾರ್ ಅವರು ಈ ಹಿಂದೆ ಕೋಮಲ್ ನಾಯಕನಾಗಿ ನಟಿಸಿದ್ದ `ಡೀಲ್‌ರಾಜ ಸಿನಿಮಾವನ್ನು ನಿರ್ಮಿಸಿದ್ದರು. ಮೇಘಧೂತ್ ಮೂವೀಸ್ ಸಂಸ್ಥೆಯಲ್ಲಿ ನಿರ್ಮಾಣವಾಗುತ್ತಿರುವ ಎರಡನೇ ಚಿತ್ರವಾದರೂ “ಕನ್ನಡ ಚಿತ್ರರಂಗದಲ್ಲಿ ಮೈಲಿಗಲ್ಲು ಸೃಷ್ಟಿಸುವಂಥಾ ಸಾಕಷ್ಟು ಸಿನಿಮಾಗಳನ್ನು ನಿರ್ಮಿಸಬೇಕು, ತಮ್ಮ ನಿರ್ಮಾಣ ಸಂಸ್ಥೆಯನ್ನು ದೊಡ್ಡ ಮಟ್ಟಕ್ಕೆ ಬೆಳೆಸಬೇಕು” ಎಂದು ತೀರ್ಮಾನಿಸಿಯೇ ಸಂಸ್ಥೆಯನ್ನು ಆರಂಭಿಸಿದವರು.
ಇನ್ನು `೩೪-೩೪ ಲೇಡೀಸ್ ಟೈಲರ್ ಚಿತ್ರಕ್ಕೆ ವಿಜಯ್ ಪ್ರಸಾದ್ ಅವರ ಸಿನಿಮಾಗಳಲ್ಲಿನ ಖಾಯಂ ತಂತ್ರಜ್ಞರೇ ಇಲ್ಲೂ ಕಾರ್ಯನಿರ್ವಹಿಸುತ್ತಿದ್ದಾರೆ. ಅನೂಪ್ ಸಿಳೀನ್ ಅವರ ಸಂಗೀತ, ಸುರೇಶ್ ಅರಸ್ ಸಂಕಲನ, ಹೊಸ್ಮನೆ ಮೂರ್ತಿ ಕಲಾನಿರ್ದೇಶನ ಮತ್ತು ಮುರಳಿ ಅವರ ನೃತ್ಯ ನಿರ್ದೇಶನ ಈ ಚಿತ್ರಕ್ಕಿದೆ. ಯೋಗರಾಜ್ ಭಟ್ ಮತ್ತು ವಿಜಯಪ್ರಸಾದ್ ಹಾಡುಗಳನ್ನು ರಚಿಸಿದ್ದಾರೆ. ಇನ್ನು ಕಥೆ, ಚಿತ್ರಕತೆ, ಸಂಭಾಷಣೆ ಮತ್ತು ನಿರ್ದೇಶನದ ಜವಾವ್ದಾರಿ ವಿಜಯಪ್ರಸಾದ್ ಅವರದ್ದು.
ಜಗ್ಗೇಶ್ ಅವರು ನಾಯಕನಾಗಿ ನಟಿಸುತ್ತಿರುವ ಈ ಚಿತ್ರಕ್ಕೆ ನಾಯಕಿಯ ಶೋಧ ನಡೆಯುತ್ತಿದೆ. ಉಳಿದ ಪಾತ್ರಗಳಲ್ಲಿ ವೀಣಾ ಸುದಂರ್, ವೆಂಕಟರಾವ್ ಸೇರಿದಂತೆ ರಂಗಭೂಮಿ ಅನೇಕ ಕಲಾವಿದರು `34-34 ಲೇಡೀಸ್ ಟೈಲರ್ ಚಿತ್ರದಲ್ಲಿ ಭಾಗಿಯಾಗಲಿದ್ದಾರೆ.
ಮೈಸೂರು ಮತ್ತು ಶ್ರೀರಂಗಪಟ್ಟಣದ ಸುತ್ತಮುತ್ತ ೬೫ ದಿನಗಳ ಕಾಲ ಒಂದೇ ಹಂತದಲ್ಲಿ ಚಿತ್ರೀಕರಣ ನಡೆಸುವುದು ಚಿತ್ರತಂಡದ ಯೋಜನೆ. ಮಾತ್ರವಲ್ಲದೆ, ಆದಷ್ಟು ಬೇಗ ಸಿನಿಮಾವನ್ನು ತೆರೆಗೆ ತರುವುದಾಗಿ ನಿರ್ಮಾಪಕ ರವಿಚಂದ್ರ ರೆಡ್ಡಿ ಭರವಸೆ ನೀಡಿದ್ದಾರೆ.
ಜಗ್ಗೇಶ್ ಮತ್ತು ವಿಜಯಪ್ರಸಾದ್ ಕನ್ನಡ ಚಿತ್ರರಂಗದ ಅಪರೂಪದ ಕಾಂಬಿನೇಷನ್ ಮತ್ತು ಪ್ರತಿಭಾವಂತ ಜೋಡಿ ಅನ್ನೋದು ಎಲ್ಲರಿಗೂ ಗೊತ್ತಿರೋ ವಿಚಾರ. ನೀರ್‌ದೋಸೆ ಸಿನಿಮಾದಲ್ಲಿ ನೋಡುಗರನ್ನು ಮೋಡಿ ಮಾಡಿದ್ದ ಈ ಜೋಡಿ ಈಗ `ಲೇಡೀಸ್ ಟೈಲರ್ ಜೊತೆ ಸೇರಿದ್ದಾರೆ. ಮನರಂಜನೆಯ ಜೊತೆಗೆ ಗಂಭೀರವಾದ ಕಥಾವಸ್ತುವನ್ನು ಕಟ್ಟಿಕೊಡೋದು ವಿಜಯ ಪ್ರಸಾದ್ ಅವರ ಶೈಲಿ; ನವರಸಗಳೊಂದಿಗೆ ಪಾತ್ರಗಳಿಗೆ ಜೀವ ತುಂಬುವುದು ಜಗ್ಗೇಶ್ ಅವರ ರೀತಿ. ಇನ್ನು `೩೪-೩೪ ಲೇಡೀಸ್ ಟೈಲರ್ ಕೆಲಸ ಶುರು ಮಾಡೋದೊಂದೇ ಬಾಕಿ…

Share.

Leave A Reply