ಅತಿ ಹೆಚ್ಚು ಓದುಗರನ್ನು ಹೊಂದಿರುವ CINIBUZZ ನಲ್ಲಿ ನಿಮ್ಮ ಸಿನಿಮಾದ ಕುರಿತ ಲೇಖನ / ಜಾಹೀರಾತು ಬೇಕಿದ್ದಲ್ಲಿ ಸಂಪರ್ಕಿಸಿ : 88615 99996

ಗೋಲ್ಡನ್ ಸ್ಟಾರ್ ಹೊಸಾ ಚಿತ್ರ ಆರೆಂಜ್!

0

ಗೋಲ್ಡನ್ ಸ್ಟಾರ್ ಗಣೇಶ್ ನಟನೆಯ ಮುಗುಳುನಗೆ ಚಿತ್ರದ ಬಗ್ಗೆ ಜ್ವರದಂಥಾ ಕೌತುಕ ಏರಿಕೊಂಡಿದೆ. ಮುಂಗಾರುಮಳೆಯಂಥಾ ಹಿಟ್ ಸಿನಿಮಾ ಕೊಟ್ಟ ಯೋಗರಾಜ ಭಟ್ ನಿರ್ದೇಶನದ ಈ ಚಿತ್ರದ ಹಾಡುಗಳಿಗಾಗಿಯೂ ಪ್ರೇಕ್ಷಕರ ವಲಯದಲ್ಲೊಂದು ತಹ ತಹ ಶುರುವಾಗಿದೆ. ಇಂಥಾ ಹೊತ್ತಿನಲ್ಲಿಯೇ ಗಣೇಶ್ ಮತ್ತೊಂದಷ್ಟು ಹೊಸಾ ಚಿತ್ರಗಳಿಗೂ ಸರಣಿಯೋಪಾದಿಯಲ್ಲಿ ಕಮೀಟಾಗುತ್ತಿದ್ದಾರೆ!
ಗಣೇಶ್ ಸದ್ಯ ಹೊಸದಾಗಿ ನಟಿಸಲು ಒಪ್ಪಿಕೊಂಡಿರೋ ಚಿತ್ರ ‘ಆರೆಂಜ್!
ಅಂದಹಾಗೆ ಈ ಹಿಂದೆ ಝೂಮ್ ಎಂಬ ಚಿತ್ರ ನಿರ್ದೇಶನ ಮಾಡಿದ್ದ ಪ್ರಶಾಂತ್ ರಾಜ್ ಎರಡನೇ ಸಲ ಈ ಚಿತ್ರದ ಮೂಲಕ ಗಣೇಶ್ ಜೊತೆಯಾಗಿದ್ದಾರೆ. ಜೋಶ್ವ ಶ್ರೀಧರ್ ಅವರು ಈ ಚಿತ್ರಕ್ಕೆ ಸಂಗೀತ ನಿರ್ದೇಶನ ಮಾಡಲಿದ್ದಾರೆ. ಜುಲೈ ಎರಡನೇ ತಾರೀಕಿನಂದು ಗಣೇಶ್ ಅವರ ಹುಟ್ಟಹಬ್ಬ ಇದೆಯಲ್ಲಾ? ಅಂದೇ ಈ ಚಿತ್ರದ ಟೈಟಲ್ ಲಾಂಚ್ ಮಾಡಲೂ ಚಿತ್ರ ತಂಡ ಪ್ಲಾನು ಮಾಡಿದೆಯಂತೆ.
ಸದ್ಯ ಗಣೇಶ್ ಭಟ್ಟರ ಮುಗುಳು ನಗೆ ಚಿತ್ರದ ಚಿತ್ರೀಕರಣ ಮುಗಿಸಿಕೊಂಡು ಸಿಂಪಲ್ ಸುನಿ ನಿರ್ದೇಶನದ ಚಮಕ್ ಚಿತ್ರೀಕರಣದಲ್ಲಿ ಬ್ಯುಸಿಯಾಗಿದ್ದಾರೆ. ಚಮಕ್ ಚಿತ್ರೀಕರಣ ಸಂಪೂರ್ಣವಾದ ಮೇಲೆ ಆರೆಂಜ್ ಅನ್ನು ಕೈಗೆತ್ತಿಕೊಳ್ಳುತ್ತಾರಂತೆ!

Share.

Leave A Reply