ಅತಿ ಹೆಚ್ಚು ಓದುಗರನ್ನು ಹೊಂದಿರುವ CINIBUZZ ನಲ್ಲಿ ನಿಮ್ಮ ಸಿನಿಮಾದ ಕುರಿತ ಲೇಖನ / ಜಾಹೀರಾತು ಬೇಕಿದ್ದಲ್ಲಿ ಸಂಪರ್ಕಿಸಿ : 88615 99996

ಮೆಲೋಡಿ ಹಾಡಿನ `ಕಿಡಿ!

0

ರೀಮೇಕ್ ಚಿತ್ರವಾದರೂ ಆರಂಭ ಕಾಲದಿಂದಲೂ ಕುತೂಹಲ ಕಾಯ್ದುಕೊಂಡಿರೊ ಚಿತ್ರ ಕಿಡಿ. ಕೋರಿಯೋಗ್ರಾಫರ್ ರಘು ಮೊದಲ ಸಲ ನಿರ್ದೇಶನ ಮಾಡಿರೋ ಈ ಚಿತ್ರದ ಆಡಿಯೋ ಮತ್ತು ಟ್ರೈಲರ್ ಇದೀಗ ಬಿಡುಗಡೆಗೊಂಡಿದೆ.
ಮಲೆಯಾಳಂನಲ್ಲಿ ಸೂಪರ್ ಹಿಟ್ಟಾಗಿದ್ದ ಕಲಿ ಚಿತ್ರದ ರೀಮೇಕ್ `ಕಿಡಿ. ಮಲೆಯಾಳದ ಸೂಪರ್ ಸ್ಟಾರ್ ಮಮ್ಮುಟಿ ಅವರ ಪುತ್ರ ಕಲಿಯಲ್ಲಿ ಮುಖ್ಯ ಪಾತ್ರ ನಿರ್ವಹಿಸಿದ್ದರು. ಆ ಪಾತ್ರವನ್ನಿಲ್ಲಿ ಭುವನ್ ಚಂದ್ರ ನಿರ್ವಹಿಸಿದ್ದಾರೆ. ಕಿರುತೆರೆ ನಟಿ ಪಲ್ಲವಿ ಈ ಚಿತ್ರದ ಮೂಲಕ ನಾಯಕಿಯಾಗಿ ಹೊರ ಹೊಮ್ಮಿದ್ದಾರೆ.
ಕೋಪ ಎಂಬುದನ್ನು ಬಹುತೇಕರು ಸಣ್ಣ ವಿಚಾರ ಅಂದುಕೊಂಡಿರುತ್ತಾರೆ. ಎಲ್ಲರ ನಿತ್ಯ ಬದುಕಿನ ಜೊತೆಗಾರನಂತಿರೋ ಈ ಕೋಪ ಯಾಮಾರಿದರೆ ಎಲ್ಲೆಲ್ಲಿಗೋ ಕೊಂಡೊಯ್ದು ಬಿಡುತ್ತದೆ. ಅಂಥಾದ್ದೇ ಭಿನ್ನವಾದ ಕಥಾ ಹಂದರ ಹೊಂದಿರೋ ಚಿತ್ರ ಕಿಡಿ. ಇದರಲ್ಲಿ ಭುವನ್ ಚಂದ್ರ ಕಿಡಿಕಾರುವ ನಿಗಿ ನಿಗಿ ಹುಡುಗನಾಗಿ ಕಾಣಿಸಿಕೊಂಡಿದ್ದಾರೆ.
ಇದುವರೆಗೂ ಅಖಂಡ ಹದಿನೈದು ವರ್ಷಗಳ ಕಾಲ ಕೋರಿಯೋಗ್ರಾಫರ್ ಆಗಿ ಕರ್ಯ ನಿರ್ವಹಿಸಿದ್ದವರು ರಘು. ಅವರೀಗ ಈ ಚಿತ್ರದ ಮೂಲಕ ನಿರ್ದೇಶಕನಾಗಿ ಅದೃಷ್ಟ ಪರೀಕ್ಷೆಗಿಳಿದಿದ್ದಾರೆ. ಮೂಡಿಗೆರೆಯ ಬಳಿ ಡಾಬಾದ ಸೆಟ್ ಹಾಕಿ ನಿರಂತರವಾಗಿ ಹದಿನೈದು ದಿನಗಳ ಕಾಲ ಚಿತ್ರೀಕರಣ ನಡೆಸಿ, ಒಂದು ಹಾಡನ್ನು ವಿದೇಶದಲ್ಲಿ ಚಿತ್ರಿಕರಿಸಿಕೊಳ್ಳುವ ಮೂಲಕ ಈ ಚಿತ್ರ ಅಂತಿಮ ಹಂತ ತಲುಪಿಕೊಂಡಿದೆ.
ಈ ಚಿತ್ರದ ಹಾಡುಗಳಿಗೆ ಎಮಿಲ್ ಸಂಗೀತ ಸಂಯೊಜನೆ ಮಾಡಿದ್ದಾರೆ. ವಿ.ನಾಗೇಂದ್ರಪ್ರಸಾದ್, ಕೆ.ಕಲ್ಯಾಣ್, ಲೋಕೇಶ್, ಕವಿರಾಜ್ ಸಹಿತ್ಯ ರಚನೆ ಮಾಡಿದ್ದಾರೆ. ವಸಂತ್ ರಾವ್ ಎಂ. ಕುಲಕರ್ಣಿ ಅವರ ಕಲಾನಿರ್ದೇಶನವಿದೆ, ಟಿ.ನಾಗರಾಜು ಮಲ್ಲಿಕಾರ್ಜುನ್, ಧನಂಜಯ್‌ರೊಂದಿಗೆ ಹಣ ಹೂಡಿ ನಿರ್ಮಿಸಿರುವ ಈ ಚಿತ್ರ ತೆರೆಗಾಣಲು ದಿನಗಣನೆ ಆರಂಭವಾಗಿದೆ.

Share.

Leave A Reply