ಅತಿ ಹೆಚ್ಚು ಓದುಗರನ್ನು ಹೊಂದಿರುವ CINIBUZZ ನಲ್ಲಿ ನಿಮ್ಮ ಸಿನಿಮಾದ ಕುರಿತ ಲೇಖನ / ಜಾಹೀರಾತು ಬೇಕಿದ್ದಲ್ಲಿ ಸಂಪರ್ಕಿಸಿ : 88615 99996

ಮಾ. ಚಂದ್ರು @ ಶಿವನಪಾದ

0

ಮಾ. ಚಂದ್ರು ಏನಾದರೊಂದು ಹೊಸದು ಮಾಡುತ್ತಲೇ ಇರ್ತಾರೆ. ಲೂಸ್ ಮಾದ ಯೋಗಿ ಅಭಿನಯದ ಬಂಗಾರಿ ಅಲ್ಲದೇ ತಮಿಳು ಚಿತ್ರವನ್ನು ನಿರ್ದೇಶಿಸಿದ್ದ ಚಂದ್ರು ಈದೀಗ ಮತ್ತೊಂದು ಹೊಸ ಚಿತ್ರ ‘ಶಿವನ ಪಾದ’ ಎಂಬ ಚಿತ್ರವನ್ನು ಕಥೆ, ಚಿತ್ರಕಥೆ, ಸಂಭಾಷಣೆ ಬರೆದು ನಿರ್ದೇಶನ ಮಾಡುತ್ತಿದ್ದಾರೆ. ಮುಂದಿನ ತಿಂಗಳು ೨೪ ರಂದು ಚಿತ್ರದ ಮಹೂರ್ತ ನಡೆಯಲಿದೆ. ೧೪ ಪ್ರಮುಖ ಪಾತ್ರಗಳ ಸುತ್ತ ನಡೆಯುವ ಒಂದು ಜರ್ನಿಯ ಕಥೆ ಇದಾಗಿದ್ದು, ಸಸ್ಪೆನ್ಸ್ ಥ್ರಿಲ್ಲರ್ ಜೊತೆಗೆ ಹಾರರ್ ಟಚ್ ಕೂಡ ಈ ಚಿತ್ರಕ್ಕಿದೆ. ಬೆಂಗಳೂರು, ಮೈಸೂರು, ಸಾಗರ ಹಾಗೂ ತಲಕಾಡು ಸುತ್ತಮುತ್ತ ಚಿತ್ರೀಕರಣ ನಡೆಸಲಾಗುವುದು. ಹುಲಿರಾಯ, ಉಡುಂಬ ಖ್ಯಾತಿಯ ಚಿರಶ್ರೀ ನಾಯಕಿಯಾಗಿ ಅಭಿನಯಿಸಲಿದ್ದಾರೆ.
ಸ್ಟಾರ್ ಪೂರ್ವ ಫಿಲಂಸ್ ಲಾಂಛನದಲ್ಲಿ ಟಿ. ಮಂಜುನಾಥ್ ನಿರ್ಮಿಸುತ್ತಿರುವ ಈ ಚಿತ್ರಕ್ಕೆ ನಂದಕುಮಾರ್ ಛಾಯಾಗ್ರಹಣ, ವೀರ್ ಸಮರ್ಥ್ ಸಂಗೀತ, ವಿಜಯ್ ಭರಮಸಾಗರ ಸಾಹಿತ್ಯ, ಅರ್ಜುನ್ (ಕಿಟ್ಟಿ) ಸಂಕಲನ, ಮಾಸ್ ಮಾದ ಸಾಹಸವಿದೆ. ಆನಂದ್, ಕೃಷ್ಣಕುಮಾರ್, ಚಿರಶ್ರೀ, ಮಮತಾರಾಹುತ್ ತಾರಾಗಣವಿದ್ದು ಹೆಚ್.ಟಿ. ಸಾಂಗ್ಲಿಯಾನ ಪ್ರಮುಖ ಪಾತ್ರವೊಂದರಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಉಳಿದ ತಾರಾಗಣದ ಹಾಗೂ ತಾಂತ್ರಿಕ ವರ್ಗದ ಆಯ್ಕೆ ನಡೆಯುತ್ತಿದೆ.

Share.

Leave A Reply