ಅತಿ ಹೆಚ್ಚು ಓದುಗರನ್ನು ಹೊಂದಿರುವ CINIBUZZ ನಲ್ಲಿ ನಿಮ್ಮ ಸಿನಿಮಾದ ಕುರಿತ ಲೇಖನ / ಜಾಹೀರಾತು ಬೇಕಿದ್ದಲ್ಲಿ ಸಂಪರ್ಕಿಸಿ : 88615 99996

ಆದಿ ಪುರಾಣ ಶುರುವಾಯ್ತು…

0

ಕಳೆದ ಹನ್ನೆರೆಡು ವರ್ಷಗಳಿಂದ ಸಂಕಲನಕಾರರಾಗಿದ್ದ ಮೋಹನ್ ಕಾಮಾಕ್ಷಿ “ಆದಿ ಪುರಾಣ” ಚಿತ್ರದಿಂದ ನಿರ್ದೇಶಕರಾಗುತ್ತಿದ್ದಾರೆ. ಈ ಹಿಂದೆ “ಮೆಲೋಡಿ” ಮತು “ಪ್ರೀತಿ ಕಿತಾಬು” ಚಿತ್ರ ನಿರ್ಮಿಸಿದ್ದ ಶಮಂತ್ ಕೆ ರಾವ್ ಈ ಚಿತ್ರ ನಿರ್ಮಿಸುತ್ತಿದ್ದಾರೆ. ಕ್ರೇಜಿಸ್ಟಾರ್ ರವಿಚಂದ್ರನ್ ಸಹೋದರ ಬಾಲಾಜಿ ಕ್ಲಾಪ್ ಮಾಡುವ ಮೂಲಕ  “ಆದಿ ಪುರಾಣ” ಚಿತ್ರಕ್ಕೆ ಕಳೆದ ಶುಕ್ರವಾರ ರಾಜರಾಜೇಶ್ವರಿ ನಗರದ ಶ್ರೀ ರಾಘವೇಂದ್ರ ಸ್ವಾಮಿಗಳ ಮಠದಲ್ಲಿ ಅಧಿಕೃತ ಚಾಲನೆ ದೊರೆಯಿತು. ರಾಷ್ಟ್ರಪ್ರಶಸ್ತಿ ವಿಜೇತ ಛಾಯಾಗ್ರಾಹಕರಾದ ಶ್ರೀ ಹೆಚ್.ಎಂ. ರಾಮಚಂದ್ರ ಚಿತ್ರಕ್ಕೆ ಕ್ಯಾಮೆರಾ ಚಾಲನೆ ಮಾಡಿದರು. ಚಿತ್ರರಂಗದ ಹಿರಿಯ ಕಲಾವಿದರು ಮತ್ತು ಗಣ್ಯರು ಚಿತ್ರದ ಮುಹೂರ್ತ ಸಮಾರಂಭಕ್ಕೆ ಆಗಮಿಸಿ ಚಿತ್ರತಂಡಕ್ಕೆ ಶುಭ ಕೋರಿದರು. “ಆದಿ ಪುರಾಣ” ರೊಮ್ಯಾಂಟಿಕ್ ಕಾಮಿಡಿ ಚಿತ್ರವಾಗಿದ್ದು ಪ್ರೇಕ್ಷಕರನ್ನು ಕಚಗುಳಿಯಿಡುವ ಸಂಭಾಷಣೆ ಮತ್ತು ಹೊಸತನದ ನಿರೂಪಣೆಯ ಚಿತ್ರಕಥೆಯಿಂದ ರಂಜಿಸಲಿದೆ ಅನ್ನೋದು ನಿರ್ದೇಶಕರ ಭರವಸೆಯ ಮಾತು.
ಎಲ್ಲ ಹೊಸ ಪ್ರತಿಭೆಗಳನ್ನು ಒಟು ಗೂಡಿಸಿ ಹೊಸ ತಂಡ ಕಟ್ಟಿದ್ದಾರೆ ನಿರ್ದೇಶಕ ಮೋಹನ್ ಕಾಮಾಕ್ಷಿ. ಶಶಾಂಕ್ ಚಿತ್ರಕ್ಕೆ ನಾಯಕರಾಗಿದ್ದು, ಅಹಲ್ಯ ಸುರೇಶ್ ಮತ್ತು ಮೋಕ್ಷ ಕುಶಾಲ್ ನಾಯಕಿಯರಾಗಿ ನಟಿಸುತ್ತಿದ್ದಾರೆ. ನಾಯಕ ನಾಯಕಿಯರನ್ನು ಹೊರತುಪಡಿಸಿ ಅನುಭವಿ ಕಲಾವಿದರಾದ ರಂಗಾಯಣ ರಘು, ನಾಗೇಂದ್ರ ಶಾ, ಕರಿಸುಬ್ಬು, ವತ್ಸಲಾ ಮೋಹನ್ ಮತಿ ತರ ರಂಗಭೂಮಿಯ ಕಲಾವಿದರು ಚಿತ್ರದ ತಾರಾಗಣದಲ್ಲಿದ್ದಾರೆ.
ರಂಗಭೂಮಿಯ ಹಿನ್ನೆಲೆಯಿರುವ ವಿಕ್ರಮ್ ವಸಿಷ್ಟ, ಚಂದನ ಹಾಗು ಖ್ಯಾತ ಸಿತಾರ್ ವಾದಕಿ ಶೃತಿ ಕಾಮತ್‌ರವರ ಪುತ್ರ ಸಿದ್ಧಾರ್ಥ್ ಕಾಮತ್ ಈ ಚಿತ್ರಕ್ಕೆ ಸಂಗೀತ ನೀಡಿದ್ದಾರೆ. ಹಲವಾರು ಹಿರಿಯ ಛಾಯಾಗ್ರಾಹಕರಿಗೆ ಸಹಾಯಕರಾಗಿ ಕೆಲಸ ಮಾಡಿರುವ ಗುರುಪ್ರಸಾದ್ ಈ ಚಿತ್ರದ ಮೂಲಕ ಸ್ವತಂತ್ರ ಛಾಯಾಗ್ರಾಹಕರಾಗುತಿ ದ್ದಾರೆ. ಮೋಹನ್ ಕಾಮಾಕ್ಷಿ ಮತು ಮಹೇಂದ್ರ ರಾವ್ ಚಿತ್ರಕ್ಕೆ ಹಾಸ್ಯಭರಿತ ಚಿತ್ರಕಥೆ ಮತು ಸಂಭಾಷಣೆ ಬರೆದಿದ್ದಾರೆ. “ಆದಿ ಪುರಾಣ” ಚಿತ್ರವು ಹಾಸ್ಯದ ಜೊತೆಜೊತೆಗೆ ಫ಼ಿಲಾಸಫ಼ಿಯೂ ಒಳಗೊಂಡಿದೆ. ಜುಲೈ ೩ರಿಂದ ಚಿತ್ರೀಕರಣ ಆರಂಭವಾಗಲಿದ್ದು ಮೂವತ್ತೈದು ದಿನಗಳ ಕಾಲ ಬಹುತೇಕ ಚಿತ್ರೀಕರಣ ಬೆಂಗಳೂರಿನ ಆಸುಪಾಸಿನಲ್ಲೇ ನಡೆಯಲಿದೆ. ಒಂದು ಹಾಡನ್ನು ಕೆ.ಆರ್.ಎಸ್. ಬ್ಯಾಕ್‌ವಾಟರ್‍ಸ್ ನಲಿ ರುವ ದೇವಸ್ಥಾನದಲಿ ಚಿತ್ರೀಕರಿಸುವ ಯೋಚನೆಯಲ್ಲಿದೆ.

Share.

Leave A Reply