Browsing: cbn

cbn

ಕಡೆಗೂ ರಿಯಲ್ ಸ್ಟಾರ್ ಉಪೇಂದ್ರ ಅಧಿಕೃತ ರಾಜಕೀಯ ಪ್ರವೇಶಕ್ಕೆ ಕ್ಷಣಗಣನೆ ಶುರುವಾಗಿದೆ. ನಾಳೆ ಬೆಳಗ್ಗೆ ಹನ್ನೊಂದು ಘಂಟೆಗೆ ಮಾಧ್ಯಮಗಳ ಮುಂದೆ ಹಾಜರಾಗಲಿರೋ ಉಪೇಂದ್ರ ತಮ್ಮ ರಾಜಕೀಯ ನಡೆಯ ಕುರಿತಾಗಿ ನಿಖರವಾದ ಮಾಹಿತಿ ನೀಡಲಿದ್ದಾರೆ. ಅಷ್ಟಕ್ಕೂ ಉಪೇಂದ್ರ ರಾಜಕೀಯ ಪ್ರವೇಶದ ಬಗ್ಗೆ ಗುಲ್ಲುಗಳೇಳೋದು ಇದೇ ಮೊದಲೇನಲ್ಲ. ಕಳೆದ ಬಾರಿ ವಿಧಾನಸಭಾ ಚುನಾವಣೆ ನಡೆದಾಗಲೇ ಉಪೇಂದ್ರ ರಾಜಕೀಯ ಪ್ರವೇಶ ಮಾಡಿ ಒಂದು ಕ್ಷೇತ್ರದಿಂದ ಸ್ಪರ್ಧಿಸಿಯೇ ಬಿಡುತ್ತಾರೆಂಬ ವಾತಾವರಣ ಸೃಷ್ಟಿಯಾಗಿತ್ತು. ಆದರೀಗ ಅಂಥಾ ಗೊಂದಲಗಳೆಲ್ಲ…

cbn

ಮಾಸ್ ಲೀಡರ್ ಚಿತ್ರದ ವಿಚಾರದಲ್ಲಿ ಎಲ್ಲಾ ಅಂದುಕೊಂಡಂತೆಯೇ ಇದೆ! ಮನಸಿನ ತುಂಬಾ ಬರೀ ಕೋಮುದ್ವೇಷದ ವಿಷವನ್ನೇ ತುಂಬಿಕೊಂಡಿರೋ ಮನಸ್ಥಿತಿಯೊಂದರಿಂದ ಸಹಜ ಮನುಷ್ಯ ಪ್ರೇಮದ ಅಮೃತ ನಿರೀಕ್ಷಿಸಲು ಸಾಧ್ಯವೇ? ಮಾತೆತ್ತಿದರೆ ವಿಶ್ವಗುರು, ಭಾರತ, ದೇಶ ಪ್ರೇಮ ಅನ್ನುತ್ತಲೇ ಈ ನೆಲದ ಸಾಮರಸ್ಯ ಕದಡೋ ಕಸುಬಿನ ಚಕ್ರವರ್ತಿ ಕಾಲಿಟ್ಟ ಕಡೆ ಸಾಮರಸ್ಯದ ಹರಿಕೆ ಹುಟ್ಟೀತೆಂದು ನಿರೀಕ್ಷಿಸಲಾದೀತಾ? ಈ ವಿಚಾರದಲ್ಲಿ ಶಿವರಾಜ್ ಕುಮಾರ್ ಅಭಿನಯದ ಲೀಡರ್ ಚಿತ್ರದ ಬಗ್ಗೆ ಸಿನಿಬಜ್ ಈ ಹಿಂದೆ ಮಾಡಿದ್ದ…

cbn

ಒಂದು ಸಾಮಾಜಿಕ ಸಮಸ್ಯೆ ಬಂದಾಗ ಅದಕ್ಕೆ ಮಿಡಿಯೋದು ತಮ್ಮ ಕರ್ತವ್ಯ ಎಂಬ ಕಾಳಜಿ ಸಿನಿಮಾ ಜಗತ್ತಿನಲ್ಲಿ ಅಪರೂಪ. ಆದರೆ ಒಂದು ಘಟನೆ ಸದ್ದು ಮಾಡಿದಾಗ ಕೂತಲ್ಲೇ ಅದನ್ನು ಕಮರ್ಷಿಯಲ್ಲಾಗಿ ಸ್ಕ್ಯಾನು ಮಾಡಿ ಅದರ ಬಗೆಗೊಂದು ಸಿನಿಮಾ ಮಾಡ್ತೇನೆ ಅಂತ ಬಿಟ್ಟಿ ಮೈಲೇಜು ಪಡೆಯೋ ಪಂಟರುಗಳ ಸಂಖ್ಯೆಗೇನೂ ಇಲ್ಲಿ ಕೊರತೆಯಿಲ್ಲ! ಅಂಥಾ ಪಂಟರುಗಳಲ್ಲೊಬ್ಬರಾದ ನಿರ್ದೇಶಕ ಎಎಂಆರ್ ರಮೇಶ್ ಮತ್ತೆ ಅಖಾಡಕ್ಕಿಳಿದಿದ್ದಾರೆ. ಅವರ ಕೈಲಿ ಸದ್ಯಕ್ಕಿರೋ ಅಸ್ತ್ರ ಇತ್ತೀಚೆಗೆ ಪರಪ್ಪನ ಅಗ್ರಗಾರದ ಅಂದಾದುಂದಿಗಳನ್ನು…

cbn

ದಿನಕರ್ ತೂಗುದೀಪ ನಿರ್ದೇಶನದ ಹೊಸಾ ಚಿತ್ರ life ಜೊತೆ ಒಂದು selfie ಬಗೆಗೀಗ ಭಾರೀ ನಿರೀಕ್ಷೆಗಳು ಹುಟ್ಟಿಕೊಂಡಿವೆ. ಈ ಚಿತ್ರದಲ್ಲಿ ಲವ್ಲಿ ಸ್ಟಾರ್ ಪ್ರೇಮ್ ಮತ್ತು ಪ್ರಜ್ವಲ್ ದೇವರಾಜ್ ಮುಖ್ಯಭೂಮಿಕೆಯಲ್ಲಿ ಇರಲಿದ್ದಾರೆ ಎಂಬ ಬಗ್ಗೆ ಸಿನಿಬಜ್ ಈ ಹಿಂದೆಯೇ ವರದಿ ಮಾಡಿತ್ತು. ಆದರೆ ಸಹೋದರ ದಿನಕರ್ ನಿರ್ದೇಶನದ ಈ ಚಿತ್ರಕ್ಕೆ ಚಾಲೆಂಜಿಂಗ್ ಸ್ಟಾರ್ ದರ್ಶನ್ ಒಪ್ಪಿಗೆ ಕೊಟ್ಟಿದ್ದಾರಾ ಅಂತೊಂದು ಪ್ರಶ್ನೆ ಸಹಜವಾಗಿಯೇ ಹುಟ್ಟಿಕೊಂಡಿದೆ! ಇನ್ನೂ ಸರಿಯಾದೊಂದು ಬ್ರೇಕ್ ಸಿಗದೆ ತೊಳಲಾಡುತ್ತಿರೋ ಪ್ರೇಮ್…

cbn

ಬಿಗ್ ಬಾಸ್ ಶೋನಲ್ಲಿ ವಿನ್ನರ್ ಆಗಿದ್ದೇ ಆಗಿದ್ದು ತುಕಾಲಿ ಪ್ರಥಮ್ ತಾನು ಮಹಾನ್ ಸೆಲೆಬ್ರಿಟಿ ಎಂಬ ಭ್ರಮೆಯನ್ನು ತಲೆಗೇರಿಸಿಕೊಂಡು ಮೆರೆದಾಡುತ್ತಿದ್ದಾನೆ. ಅದೇ ಭ್ರಮೆ ನಿತ್ತರಿಸಿಕೊಳ್ಳಲಾರದ ಹಂತ ತಲುಪಿದಾಗ ಅವರಿವರ ತೊಡೆ ಕಚ್ಚಿ ವಿಕಾರವಾಗಿ ವರ್ತಿಸಲಾರಂಭಿಸಿರೋ ಪ್ರಥಮನದ್ದು ಹೋದಲ್ಲೆಲ್ಲಾ ನಖರಾ ಆಟಗಳೇ… ಇಂಥಾ ಪ್ರಥಮ್‌ಗೆ ನಿರೂಪಕ ಅಕುಲ್ ಬಾಲಾಜಿ ಮೂತಿ ಮೇಲೆ ಬಾರಿಸಿ ಅವಾಜು ಹಾಕಿದರಾ? ಇಂಥಾದ್ದೊಂದು ಸುದ್ದಿ ಇದೀಗ ಎಲ್ಲೆಡೆ ಹರಿದಾಡುತ್ತಿದೆ. ಅಕುಲ್ ಬಾಲಾಜಿ `ಸೂಪರ್ ಟಾಕ್ ಟೈಮ್ ಎಂಬೊಂದು…

cbn

ಕನ್ನಡ ಚಿತ್ರರಂಗದಲ್ಲಿ ವೈವಿಧ್ಯಮಯ ಪಾತ್ರಗಳಲ್ಲಿ ಕಾಣಿಸಿಕೊಂಡು ಅಭಿಮಾನದಾಚೆಗೂ ಆದರಕ್ಕೆ ಪಾತ್ರರಾಗಿರುವವರು ಹ್ಯಾಟ್ರಿಕ್ ಹೀರೋ ಶಿವರಾಜ್‌ಕುಮಾರ್. ಇವರ ಬಹು ನಿರೀಕ್ಷಿತ ಲೀಡರ್ ಚಿತ್ರದ ಬಿಡುಗಡೆಗೆ ಹತ್ತಿರವಾಗುತ್ತಿದೆ. ಆದರೆ ಈ ಚಿತ್ರದ ಕಥೆ, ಚಿತ್ರಕಥೆ, ಸಂಭಾಷಣೆಯಲ್ಲಿ ಚಕ್ರವರ್ತಿ ಸೂಲಿಬೆಲೆ ಪಾಲ್ಗೊಂಡ ಸುದ್ದಿ ಕುತೂಹಲ ಮತ್ತು ಗುಮಾನಿಗಳನ್ನು ಒಟ್ಟೊಟ್ಟಿಗೇ ಸೃಷ್ಟಿಸಿದೆ. ಯಾಕೆಂದರೆ, ಸೂಲಿಬೆಲೆ ಒಂದು ಪಂಥದ ವಿಚಾರಧಾರೆಯ ಕಟ್ಟರ್ ಪ್ರತಿಪಾದಕ. ಅದಕ್ಕೂ ಮಿಗಿಲಾಗಿ ಇದು ಬಾಂಗ್ಲಾ ವಲಸಿಗರ ಬಗೆಗಿನ ಕಥಾ ವಸ್ತು ಹೊಂದಿರೋದರಿಂದ ಸೂಲಿಬೆಲೆಯವರ…

cbn

ರಾಕಿಂಗ್ ಸ್ಟಾರ್ ಯಶ್ ಹೆಸರು ಇದೀಗ ಮತ್ತೊಂದು ವಂಚನೆ ಪ್ರಕರಣದಲ್ಲಿ ಕೇಳಿ ಬಂದಿದೆ. ಹಾಗಂತ ಇದು ಯಶ್ ಅವರೇ ನೇರವಾಗಿ ಭಾಗಿಯಾಗಿರುವ ಹಗರಣ ಅಂತಂದುಕೊಳ್ಳಬೇಕಿಲ್ಲ. ಸಿನಿಮಾ ಹಂಚಿಕೆ ಮತ್ತು ಚೀಟಿ ಹೆಸರಲ್ಲಿ ವಂಚನೆಯ ಸಂಬಂಧವಾಗಿ ವಂಚನೆಯ ಆರೋಪ ಹೊತ್ತಿ ನಿಂತಿರುವಾಕೆ ಯಶ್ ಅವರ ಚಿಕ್ಕಮ್ಮ ಎಂದು ಹೇಳಲಾಗುತ್ತಿರುವ ಪದ್ಮಲತಾ! ಇತ್ತೀಚೆಗಷ್ಟೇ ಹೆಸರಿನ ಮೂಲಕವೇ ಕುತೂಹಲ ಹುಟ್ಟಿಸಿದ್ದ ಕತ್ರಿಗುಪ್ಪೆ ಕಟಿಂಗ್ ಶಾಪ್ ಎಂಬ ಚಿತ್ರದ ನಿರ್ದೇಶಕ ಪ್ರಖ್ಯಾತ್ ಗೌಡ ಯಶ್ ಚಿಕ್ಕಮ್ಮ…

cbn

`ನಾನು ಹಿಮಾಲಯಕ್ಕೆ ಹೋಗಿ ಓಶೋ ಅವರ ತಂತ್ರ, ಧ್ಯಾನ ಕಲಿತು ಬಂದಿದೀನಿ. ಇಂಥಾ ಮೆಡಿಟೆಷನ್ನುಗಳ ಬಗ್ಗೆ ಕ್ಲಾಸು ಮಾಡ್ತಿದೀನಿ. ಹಿಮಾಲಯದಲ್ಲಿಯೇ ಬ್ಲಾಕ್ ಮ್ಯಾಜಿಕ್ ಕೂಡಾ ಕಲಿತು ಬಂದಿದೀನಿ. ನಂಗೆ ಕಾಟ ಕೊಟ್ಟೋರೆಲ್ಲ ಹಾಳಾಗಿ ಹೋಗಿದ್ದಾರೆ. ಅವರ ಮನೆ ಮಂದಿಯೆಲ್ಲಾ ರಕ್ತ ಕಾರಿಕೊಂಡು ಪ್ರಾಣ ಬಿಡ್ತಾರೆ… ಅಂತ ನೆಟಿಗೆ ಮುರಿದು ಧುಮು ದುಮು ಅಂದಿರೋ ನಯನಾ ಕೃಷ್ಣಾಳ ಮುಖದಲ್ಲಿ ಅದೇಕೋ ಹಳೇ ವರಸೆಗಳೇ ಹಣಕಿ ಹಾಕಿ ನಕ್ಕಂತಾಗಿದೆ. ಆಕೆ ಇಂಥಾ ಆಟ…

1 2 3 22