Browsing: ಹೇಗಿದೆ ಸಿನಿಮಾ?

cbn

ಮಾಸ್ ಲೀಡರ್ ಚಿತ್ರದ ವಿಚಾರದಲ್ಲಿ ಎಲ್ಲಾ ಅಂದುಕೊಂಡಂತೆಯೇ ಇದೆ! ಮನಸಿನ ತುಂಬಾ ಬರೀ ಕೋಮುದ್ವೇಷದ ವಿಷವನ್ನೇ ತುಂಬಿಕೊಂಡಿರೋ ಮನಸ್ಥಿತಿಯೊಂದರಿಂದ ಸಹಜ ಮನುಷ್ಯ ಪ್ರೇಮದ ಅಮೃತ ನಿರೀಕ್ಷಿಸಲು ಸಾಧ್ಯವೇ? ಮಾತೆತ್ತಿದರೆ ವಿಶ್ವಗುರು, ಭಾರತ, ದೇಶ ಪ್ರೇಮ ಅನ್ನುತ್ತಲೇ ಈ ನೆಲದ ಸಾಮರಸ್ಯ ಕದಡೋ ಕಸುಬಿನ ಚಕ್ರವರ್ತಿ ಕಾಲಿಟ್ಟ ಕಡೆ ಸಾಮರಸ್ಯದ ಹರಿಕೆ ಹುಟ್ಟೀತೆಂದು ನಿರೀಕ್ಷಿಸಲಾದೀತಾ? ಈ ವಿಚಾರದಲ್ಲಿ ಶಿವರಾಜ್ ಕುಮಾರ್ ಅಭಿನಯದ ಲೀಡರ್ ಚಿತ್ರದ ಬಗ್ಗೆ ಸಿನಿಬಜ್ ಈ ಹಿಂದೆ ಮಾಡಿದ್ದ…

Latest Posts

ಹೆಣ್ಣಿನ ಲೈಂಗಿಕತೆಯನ್ನು ಒಂದು ಸ್ವತಂತ್ರ ಭಾವವನ್ನಾಗಿ ಪರಿಗಣಿಸುವುದು ವಿರಳ. ಅದೇನಿದ್ದರೂ ಗಂಡಿನ ಲೈಂಗಿಕತೆಗೆ ಪೂರಕವಾಗಿಯೇ ಬಳಕೆ ಆಗಿದೆ. ’ಮದುವೆ’ ಎನ್ನುವ ಸಂಸ್ಥೆಯ ಚೌಕಟ್ಟಿನೊಳಗೆ ಮತ್ತು ಗಂಡ ಬಯಸಿದಾಗ ಮಾತ್ರ ಹೆಣ್ಣು ಅವನಿಗೆ ಸಹವರ್ತಿ ಆಗಿರುವುದು ’ಒಳ್ಳೆಯ’ ಹೆಣ್ಣಿನ ಲಕ್ಷಣ ಎನ್ನುವ ಮೌಲ್ಯವನ್ನು ಪ್ರತ್ಯಕ್ಷವಾಗಿ, ಪರೋಕ್ಷವಾಗಿ ವ್ಯವಸ್ಥೆ ನಮ್ಮೊಳಗೆ ಬೆಳೆಸುತ್ತಲೇ ಬಂದಿದೆ. ಹೆಣ್ಣಿನ ಲೈಂಗಿಕ ಸಾಮರ್ಥ್ಯದ ಸಾಧ್ಯತೆ ಮತ್ತು ಗಂಡಿನ ಮಿತಿ ಎರಡೂ ಹೆಣ್ಣಿನ ಲೈಂಗಿಕತೆಯನ್ನು ಗಂಡು ನೋಟ ಆತಂಕದಿಂದಲೇ ಗಮನಿಸಲು ಪ್ರೇರೇಪಿಸಿದೆ…

Latest Posts

ಲವರ್ ಬಾಯ್ ಅಜಯ್ ರಾವ್ ಒಂದೇ ಏಟಿಗೆ ಆಕ್ಷನ್ ಪಾತ್ರದಲ್ಲಿ ನಟಿಸಲು ಶುರು ಮಾಡಿದ್ದಾಗ ಬಹುತೇಕರು `ಆಕ್ಷನ್ ಸಿನಿಮಾ ಅಜಯ್‌ಗೆ ಹೊಂದುತ್ತಾ?’ ಅಂತಾ ಅನುಮಾನ ವ್ಯಕ್ತಪಡಿಸಿದ್ದರು. `ಧೈರ್ಯಂ’ ಸಿನಿಮಾನೋಡಿಬಂದವರು ಅಜಯ್ ರಾವ್ ಬದಲಾಗಿರುವ ರೀತಿ ಕಂಡು ನಿಜಕ್ಕೂ ಆಶ್ಚರ್ಯ ವ್ಯಕ್ತಪಡಿಸುವಂತಿದೆ. ಅಷ್ಟರ ಮಟ್ಟಿಗೆ ಅಜಯ್ ಮಾಸ್ ಹೀರೋ ಆಗಿ ಮಿಂಚಿದ್ದಾರೆ. ಇದೊಂದು ಪಕ್ಕಾ ಕಮರ್ಷಿಯಲ್ ಸಿನಿಮಾ. ಈ ಚಿತ್ರದ ನಿರ್ದೇಶಕ ಶಿವತೇಜಸ್ ಕಮರ್ಷಿಯಲ್ ಸಿನಿಮಾದ ಫಾರ್ಮುಲಾಗಳನ್ನು ಅರೆದು ಕುಡಿದವರಂತೆ `ಧೈರ್ಯಂ’…

Latest Posts

ದಂಡುಪಾಳ್ಯ! ಈ ಊರಿನಿಂದ ಬದುಕಿಗಾಗಿ ಬೆಂಗಳೂರಿಗೆ ಸೇರಿದ ಒಂದು ಗುಂಪು. ಹಾಗೆ ಸಿಲಿಕಾನ್ ಸಿಟಿಗೆ ಕಾಲಿಟ್ಟ ಈ ಕುಟುಂಬದ ಮೇಲೆ ಬಿದ್ದಿದ್ದು ಬರೋಬ್ಬರಿ ಎಂಭತ್ತಕ್ಕೂ ಅಧಿಕ ಕೇಸುಗಳು. ಕಳ್ಳತನ, ದರೋಡೆ, ಅತ್ಯಾಚಾರ, ಸರಣಿ ಕೊಲೆಗಳು… ಒಂದು ಗ್ಯಾಂಗು ಇಷ್ಟೊಂದು ದೊಡ್ಡ ಮಟ್ಟದಲ್ಲಿ ಅಪರಾಧವೆಸಗಲು ಸಾಧ್ಯವಾ? ಇಂಥದ್ದೊಂದು ಪ್ರಶ್ನೆ ಇವತ್ತಿಗೂ ಜೀವಂತವಾಗೇ ಇದೆ. ಹೀಗಿರುವಾಗಲೇ ನಾಲ್ಕು ವರ್ಷಗಳ ಹಿಂದೆ ದಂಡುಪಾಳ್ಯ ಅನ್ನೋದೊಂದು ಸಿನಿಮಾ ತೆರೆಗೆ ಬಂದಿತ್ತು. ಆ ಸಿನಿಮಾ ಪಕ್ಕಾ ಪೊಲೀಸ್…

Latest Posts

ಭಿನ್ನ ಸಿನಿಮಾಗಳೇ ಹಾಗೇ ದಿಢೀರನೆ ತೆರೆ ಮೇಲೆ ಬಂದು, ಯಾವ ಸೂಚನೆಯೂ ಕೊಡದೆ ನೋಡುಗರನ್ನು ಅಚ್ಚರಿಗೀಡುಮಾಡುತ್ತವೆ. ಬಹುಶಃ ಅಂಥಾ ಸಿನಿಮಾಗಳ ಗೊಂಚಲಿಗೆ ಸೇರುವ ಮತ್ತೊಂದು ಚಿತ್ರ `ಒಂದು ಮೊಟ್ಟೆಯ ಕತೆ’. ಬಹುಶಃ ಈ ಸಿನಿಮಾದಲ್ಲಿ ಕಾಣಿಸಿಕೊಂಡಿರುವ ಬಹುತೇಕ ಕಲಾವಿದರು ಮತ್ತು ತಾಂತ್ರಿಕ ವರ್ಗದವರು ಹೊಸಬರೇ ಆಗಿರುವುದರಿಂದ ಅಂತಾ ಪ್ರಚಾರವೂ ಇಲ್ಲದೇ ಇಂಥದ್ದೊಂದು ಸಿನಿಮಾ ತಯಾರಾಗುತ್ತಿದೆ ಅನ್ನೋ ಸುಳಿವೂ ಇಲ್ಲದೆ ನಿರ್ಮಾಣವಾಗಿತ್ತು. ಯಾವಾಗ ಅದಾಗಲೇ ತಯಾರಾಗಿದ್ದ ಸಿನಿಮಾಕ್ಕೆ ಯುವ ನಿರ್ದೇಶಕ ಪವನ್…

Latest Posts

ನೋ ಡೌಟ್! ಇದು ತಮಿಳು ಚಿತ್ರದಿಂದ ಕದ್ದಿರುವ ಸರಕು ಮಾತ್ರವಲ್ಲ, ಯಥಾವತ್ತು ನಕಲು… ಎಸ್. ನಾರಾಯಣ್ ನಿರ್ದೇಶನದ `ಪಂಟ’ ಚಿತ್ರ ಗೌತಮ್ ವಾಸುದೇವ ಮೆನನ್ ನಿರ್ಮಾಣದ `ರಾಜತಂದಿರಂ’ ರಿಮೇಕ್ ಇರಬಹುದು ಅನ್ನೋ ಅನುಮಾನವನ್ನು ಸಿನಿಬಜ಼್ ಮೊನ್ನೆಯೇ ವ್ಯಕ್ತಪಡಿಸಿತ್ತು. ಸಿನಿಮಾ ನೋಡಿಬಂದ ನಂತರ ಅನುಮಾನ ನಿಜವಾಗಿದೆ. ಎಲ್ಲೋ ಒಂದೆರಡು ಸಣ್ಣ ಪುಟ್ಟ ಬದಲಾವಣೆಯನ್ನು ಹೊರತುಪಡಿಸಿ ರಾಜತಂದಿರಂ ಚಿತ್ರವನ್ನು ಮಕ್ಕಿಕಾಮಕಿ ಭಟ್ಟಿ ಇಳಿಸಿದ್ದಾರೆ. ನಾಣಿ ಜೆರಾಕ್ಸ್ ಮಾಡೋದರಲ್ಲಿ ನಿಸ್ಸೀಮ ಅನ್ನೋ ವಿಚಾರ ಎಲ್ಲರಿಗೂ…

Latest Posts

ಇಷ್ಟು ದಿನ ಸಾಕಷ್ಟು ಸಿನಿಮಾಗಳಲ್ಲಿ ನಟಿಸಿದ್ದರೂ ಪೂರ್ಣ ಪ್ರಮಾಣದ ಮಾಸ್ ಹೀರೋ ಆಗಿ ಲಾಂಚ್ ಆಗುವ ಉದ್ದೇಶದಿಂದ ನಟ ಪ್ರದೀಪ್ ತೀರಾ ಮುತುವರ್ಜಿ ವಹಿಸಿ ರೂಪಿಸಿರುವ ಸಿನಿಮಾ ಟೈಗರ್. ಜೊತೆಗೆ ಮಾವ ಕೆ. ಶಿವರಾಮ್ ಮತ್ತು ಅಳಿಯ ಪ್ರದೀಪ್ ಒಟ್ಟಿಗೇ ತೆರೆ ಹಂಚಿಕೊಂಡಿರೋದು ವಿಶೇಷ. ಇಷ್ಟು ದಿನ ಅದಾಗಲೇ ಸ್ಟಾರ್ ಎನಿಸಿಕೊಂಡ ನಟರನ್ನು ನಿರ್ದೇಶಿಸಿದ್ದ ಮತ್ತು ಬಹುಪಾಲು ರಿಮೇಕ್ ಸಿನಿಮಾಗಳಿಗೆ ಹೆಸರಾದ ನಿರ್ದೇಶಕ ನಂದಕಿಶೋರ ಈ ಚಿತ್ರವನ್ನು ನಿರ್ದೇಶಿಸಿದ್ದಾರೆ. ಪ್ರದೀಪ್…

Latest Posts

ಗೋಲ್ಡನ್ ಸ್ಟಾರ್ ಗಣೇಶ್ ಪೊಲೀಸ್ ಗೆಟಪ್‌ನಲ್ಲಿ ಕಾಣಿಸಿಕೊಂಡಿರುವ ಪಟಾಕಿ ಸಿನಿಮಾ ತೆರೆಗೆ ಬಂದಿದೆ. ತೆಲುಗಿನ `ಪಟಾಸ್’ ಚಿತ್ರದ ರಿಮೇಕ್ `ಪಟಾಕಿ’. ತಮಿಳಿನಲ್ಲೂ ಸಹ ಈ ಚಿತ್ರ `ಮೊಟ್ಟ ಸಿವ ಕೆಟ್ಟ ಸಿವ’ ಹೆಸರಿನಲ್ಲಿ ತೆರೆಕಂಡಿದೆ. ತೆಲುಗು ಮತ್ತು ತಮಿಳಿನಲ್ಲಿ ಭರ್ಜರಿ ಯಶಸ್ಸು ಕಂಡಿರುವ ಕಾರಣಕ್ಕೇ `ಪಟಾಕಿ’ಯ ಬಗ್ಗೆ ಕುತೂಹಲ ಹೆಚ್ಚಿತ್ತು. ಜೊತೆಗೆ ಈ ಚಿತ್ರ ಟ್ರೇಲರ್ ಕೂಡಾ ಸಾಕಷ್ಟು ಸೌಂಡು ಮಾಡಿತ್ತು. ದಾಯಾದಿ ಕಲಹ, ಅಪ್ಪ-ಮಗನ ಸಂಬಂಧದ ಜೊತೆಗೆ ಒಬ್ಬ…

1 2 3 10