Browsing: ಪೆಟ್ಟಿ ಅಂಗಡಿ

Latest Posts

ಬಿಗ್‌ಬಾಸ್ ಶೋದಲ್ಲಿ ಸ್ಪರ್ಧಿಗಳಾಗಿದ್ದ ಭುವನ್ ಸಂಜನಾ ಮತ್ತು ಪ್ರಥಮ್ ನಟಿಸಿರೋ ವಾರಾಂತ್ಯದ ಧಾರಾವಾಹಿ ಸಂಜು ಮತ್ತು ನಾನು. ಕಿರುತೆರೆಯ ಮಟ್ಟಿಗೆ ಅದರಲ್ಲೂ ಕನ್ನಡದಲ್ಲಿ ಹೊಸತಾದ ಈ ಪ್ರಯೋಗ ಈಗಾಗಲೇ ಪ್ರೇಕ್ಷಕರನ್ನು ಹಿಡಿದಿಡುವಲ್ಲಿ ಯಶ ಕಂಡಿದೆ. ಪ್ರತೀ ಎಪಿಸೋಡಿನಲ್ಲಿಯೂ ಒಂದಲ್ಲಾ ಒಂದು ರೀತಿಯಲ್ಲಿ ಚಕಿತಗೊಳಿಸುತ್ತಿರೋ ಈ ಸೀರೀಸ್‌ನಲ್ಲಿ ಈ ವಾರಾಂತ್ಯದಲ್ಲಿ ಭಾರೀ ಟ್ವಿಸ್ಟ್ ಒಂದು ಕಾಣಿಸಿಕೊಳ್ಳಲಿದೆ. ಇದುವರೆಗೂ ಭುವನ್ ಮತ್ತು ಸಂಜನಾ ಪ್ರೇಮ ಸಲ್ಲಾಪಕ್ಕೆ ಪ್ರಥಮನೇ ಪದೇ ಪದೆ ಅಡ್ಡಿಯಾಗುತ್ತಿದ್ದಾನೆ ಅಂತಲೇ…

Latest Posts

ಜೀ ಕನ್ನಡ ವಾಹಿನಿಯ ವೀಕೆಂಡ್ ವಿಥ್ ರಮೇಶ್ ಕಾರ್ಯಕ್ರಮದ ಸಾಧಕರ ಸೀಟಿನಲ್ಲಿ ಈ ವಾರ ಹಿರಿಯ ರಾಜಕಾರಣಿ ದೇವೇಗೌಡರು ಕೂರಲಿದ್ದಾರೆ. ಈಗಾಗಲೇ ಈ ಕಾರ್ಯಕ್ರಮದ ಚಿತ್ರೀಕರಣವೂ ನಡೆದು ಹೋಗಿದೆ. ತಮ್ಮ ರಾಜಕೀಯ ನಡಾವಳಿಗಳಾಚೆಗೂ ಕರ್ನಾಟಕದ ತುಂಬೆಲ್ಲ ಗೌರವ ಉಳಿಸಿಕೊಂಡಿರುವವರು ದೇವೇಗೌಡರು. ಈವತ್ತಿಗೆ ಜೆಡಿಎಸ್ ಪಕ್ಷದ ವರಿಷ್ಠರಾಗಿ ಗುರುತಿಸಿಕೊಂಡಿರುವ ಇವರದ್ದು ಅಗಾಧವಾದ ಜೀವನಾನುಭವ. ದಿನದ ಇಪ್ಪತ್ನಾಲಕ್ಕು ಘಂಟೆಯೂ ರಾಜಕೀಯ ಚಿಂತನೆಯಲ್ಲಿ ತೊಡಗಿರುವ ರಾಜಕಾರಣಿಯೆಂಬ ಖ್ಯಾತಿಯನ್ನೂ ಹೊಂದಿರುವ ದೇವೇಗೌಡರು ಈ ಇಳೀ ವಯಸ್ಸಿನಲ್ಲಿಯೂ…

ಕಲರ್ ಸ್ಟ್ರೀಟ್

ಕಲರ‍್ಸ್ ಕನ್ನಡ ವಾಹಿನಿಯಲ್ಲಿ ಮೂಡಿ ಬರುತ್ತಿರುವ ಧಾರಾವಾಹಿಗಳೆಲ್ಲವೂ ಪ್ರೇಕ್ಷಕರಿಗೆ ಮೋಡಿ ಮಾಡುವಲ್ಲಿ ಯಶ ಕಂಡಿವೆ. ಅದರಲ್ಲಿಯೂ ವಿಶೇಷವಾಗಿ ‘ಗಾಂಧಾರಿ ಧಾರಾವಾಹಿ ತನ್ನದೇ ಆದ ಅಗಾಧ ಪ್ರೇಕ್ಷಕರನ್ನು ಸೃಷ್ಟಿಸಿಕೊಂಡಿದೆ. ದಿನದಿಂದ ದಿನಕ್ಕೆ ಕುತೂಹಲ ಕಾಯ್ದಿಟ್ಟುಕೊಂಡೇ ಸಾಗಿರೋ ಈ ಧಾರಾವಾಹಿ ಇದೀಗ ೩೭೫ ಕಂತುಗಳನ್ನು ಪೂರೈಸಿಕೊಂಡಿದೆ. ಈಗಿರುವ ಸ್ಪರ್ಧೆಯ ನಡುವೆ ಧಾರಾವಾಹಿಯೊಂದು ಇಷ್ಟು ಕಂತುಗಳನ್ನು ಯಶಸ್ವಿಯಾಗಿ ದಾಟಿಕೊಳ್ಳುವುದು ಸವಾಲಿನ ವಿಚಾರವೇ. ಇಡೀ ತಂಡದ ನಿರಂತರ ಪರಿಶ್ರಮದಿಂದ ಗಾಂಧಾರಿ ಧಾರಾವಾಹಿ ಪ್ರೇಕ್ಷಕರ ಮನಸಿಗೆ ಹತ್ತಿರಾಗಿದೆ.…

Latest Posts

ಇತ್ತೀಚಿನ ದಿನಗಳಲ್ಲಿ ಸಾಲು ಸಾಲಾಗಿ ಕಿರು ಚಿತ್ರಗಳು ತಯಾರಾಗುತ್ತಿವೆ. ಆದರೆ ಒಂದು ಚಿತ್ರದಷ್ಟೇ ಶ್ರದ್ಧೆಯಿಂದ, ಗುಣಮಟ್ಟದಿಂದ ಅಣಿಗೊಂಡು ಗಮನ ಸೆಳೆಯುವವುಗಳ ಸಂಖ್ಯೆ ವಿರಳ. ಆದರೆ ಇತ್ತೀಚೆಗಷ್ಟೇ ವಿಶೇಷ ಪ್ರದರ್ಶನ ಕಂಡು ಬಿಡುಗಡೆಗೆ ಸಜ್ಜಾಗಿರುವ ‘ಅವ್ಯಕ್ತ ಎಂಬ ಕಿರುಚಿತ್ರ ಇದೀಗ ಕಥೆ, ಗುಣ ಮಟ್ಟ ಸೇರಿದಂತೆ ಎಲ್ಲದರಲ್ಲಿಯೂ ಗಮನ ಸೆಳೆದಿದೆ. ಶಿವಮೊಗ್ಗದಲ್ಲಿ ಸಕ್ರಿಯವಾಗಿರುವ ‘ಹೊಂಗಿರಣ ರಂಗ ತಂಡದವರೇ ಸೇರಿ ತಯಾರಿಸಿರುವ ಅವ್ಯಕ್ತ ಕಿರುಚಿತ್ರವನ್ನು ಸಾಸ್ವೆಹಳ್ಳಿ ಸತೀಶ್ ನಿರ್ದೇಶನ ಮಾಡಿದ್ದಾರೆ. ಶಿವಕುಮಾರ ಮಾವಲಿ…

Latest Posts

ಬಹುಶಃ ಕನ್ನಡ ಕಿರುತೆರೆಯಲ್ಲಿ ಮೂಡಿಬಂದಿರುವ ಕೆಲವೇ ಮೌಲಿಕ ಟೀವಿ ಶೋಗಳಲ್ಲಿ ವೀಕೆಂಡ್ ವಿತ್ ರಮೇಶ್ ಅಗ್ರಸ್ಥಾನವನ್ನು ಪಡೆದಿದೆ. ರಮೇಶ್ ಅರವಿಂದ್ ಸಾರಥ್ಯದಲ್ಲಿ ಜನಮನ ಗೆದ್ದಿರುವ ‘ವೀಕೆಂಡ್ ವಿಥ್ ರಮೇಶ್ ಕಾರ್ಯಕ್ರಮವನ್ನು ಈಗ ಒಳಗೊಳಗೇ ಪೂರ್ವಾಗ್ರಹಪೀಡಿತ ಮನಸುಗಳು ಹಿಡಿತಕ್ಕೆ ತೆಗೆದುಕೊಳ್ಳುತ್ತಿವೆಯಾ? ಹೀಗೊಂದು ಪ್ರಶ್ನೆ ಕನ್ನಡ ಚಿತ್ರರಂಗದ ಬಹುಬೇಡಿಕೆಯ ಸಂಗೀತ ನಿರ್ದೇಶಕ ಹರಿಕೃಷ್ಣರ ಆಪ್ತ ವಲಯ ಮತ್ತು ಅಭಿಮಾನಿ ವಲಯದಲ್ಲಿ ತಣ್ಣಗೆ ಹರಿದಾಡುತ್ತಿದೆ! ಇದಕ್ಕೆ ಕಾರಣ ಇಲ್ಲದಿಲ್ಲ. ಈವತ್ತು ವೀಕೆಂಡ್ ವಿಥ್ ರಮೇಶ್…

Latest Posts

ದೇಶಾದಂತ ಅತ್ಯಾಚಾರ, ಅತ್ಯಾಚಾರ ಯತ್ನದಂಥಾ ಘಟನಾವಳಿಗಳು ಆಗಾಗ ಸುದ್ದಿಯಾಗುತ್ತಲೇ ಇರುತ್ತವೆ. ಇಂಥಾ ಘಟನಾವಳಿಗಳನ್ನು ರಣ ಹದ್ದುಗಳಂತೆ ಮೇಲೆ ಬಿದ್ದು ವರದಿ ಮಾಡೋ ಮಾಧ್ಯಮಗಳಿಗೆ ಇದು ಟಿಆರ್‌ಪಿ ತಂದುಕೊಡೋ ಸರಕು. ಸಭ್ಯ ಮುಖವಾಡದ ಸಮಾಜಕ್ಕದು ಆ ಕ್ಷಣದ ಚರ್ಚೆಯ ವಸ್ತು. ಆದರೆ ಇಂಥಾ ಘಟನೆಗಳ ಕೇಂದ್ರಬಿಂದುವಾದ ಹೆಣ್ಣುಮಕ್ಕಳ ಬದುಕೇನಾಗುತ್ತೆ? ಹೆತ್ತವರ ಪಾಡೇನಾಗುತ್ತೆ ಎಂಬುದರತ್ತ ಮಾಧ್ಯಮಗಳ ಕ್ಯಾಮೆರಾವಾಗಲಿ, ಈ ಸಮಾಜದ ಮನಸ್ಥಿತಿಗಳಾಗಲಿ ಆಲೋಚಿಸೋದಿಲ್ಲ. ಆದರೆ, ‘ಅಮೂರ್ತ ಎಂಬ ಅಚ್ಚುಕಟ್ಟಾದೊಂದು ಕಿರುಚಿತ್ರ ಅತ್ಯಾಚಾರ ಯತ್ನಕ್ಕೀಡಾದ…

Latest Posts

ಕನ್ನಡ ಕಿರುತೆರೆಯಲ್ಲಿ ಅಡುಗೆ ಕಾರ್ಯಕ್ರಮವೊಂದು ೧೦೦೦ ಕಂತುಗಳನ್ನು ಯಶಸ್ವಿಯಾಗಿ ಪೂರೈಸುವುದು ಸಾಮಾನ್ಯದ ಮಾತೇನಲ್ಲ. ಅಂಥಾ ಸಂಭ್ರಮಕ್ಕೆ ಕಾರಣವಾದದ್ದು ಜೀ ವಾಹಿನಿಯ ಯಶಸ್ವೀ ಕುಕಿಂಗ್ ಷೋ ಒಗ್ಗರಣೆ ಡಬ್ಬಿ. ನಿರೂಪಕ ಮುರಳಿ ನಡೆಸಿಕೊಡುತ್ತಿರುವ ಈ ಕಾರ್ಯಕ್ರಮದಲ್ಲಿ ಪ್ರಮುಖವಾಗಿ ನಾಡಿನ ಗೃಹಿಣಿಯರು, ಕಲಾವಿದೆಯರು ಅಲ್ಲದೆ ಪಂಚತಾರಾ ಹೋಟೆಲ್‌ಗಳಲ್ಲಿ ಅಡುಗೆ ತಯಾರಿಸುವ ಕುಕ್‌ಗಳು, ಆರೋಗ್ಯಕರ ಅಡುಗೆ ತಯಾರಿಸುವ ಆಯುರ್ವೇದ ಪಂಡಿತರು, ಹೀಗೆ ನಾನಾ ವಿಧದ ನಳಪಾಕ ಪ್ರವೀಣರು ತಮ್ಮ ರುಚಿಕರವಾದ ಹೊಸ ರೀತಿಯ ಅಡುಗೆಗಳನ್ನು…

Latest Posts

ಹಿರಿಯನಟ ಶ್ರೀನಿವಾಸ ಮೂರ್ತಿ ಅವರ ಪುತ್ರ ನವೀನ್ ಕೃಷ್ಣ ಕನ್ನಡ ಚಿತ್ರರಂಗದಲ್ಲಿ ಒಬ್ಬ ನಟ, ಸಂಬಷಣೆಕಾರ ಹಾಗೂ ನಿರ್ದೇಶಕನಾಗಿಯೂ ಗುರ್ತಿಸಿಕೊಂಡವರು. ಈಗ ಅವರು ಮೊದಲಬಾರಿಗೆ ಕಿರುತೆರೆಯಲ್ಲಿ ಅಪರಾಧ ತನಿಖಾ ಧಾರಾವಾಹಿಯೊಂದರ ಸಾರಥ್ಯ ವಹಿಸಿಕೊಂಡಿದ್ದಾರೆ. ಅದರ ಹೆಸರು ಪತ್ತೇದಾರಿ ಪ್ರತಿಭಾ. ಕಾಮಿಡಿ ಕಿಲಾಡಿಗಳು ಮೂಲಕ ಕರ್ನಾಟಕದ ಕಿರುತೆರೆ ವೀಕ್ಷಕರ ಮನೆ-ಮನಗಳನ್ನು ತಲುಪಿದ್ದ ಜೀ ಕನ್ನಡ ವಾಹಿನಿ ಇತ್ತೀಚೆಗಷ್ಟೇ ವೀಕೆಂಡ್ ವಿಥ್ ರಮೇಶ್‌ನಂಥ ಅತಿಥಿಗಳ ಮನದಾಳದ ನೆನಪುಗಳನ್ನು ಮರುಕಳಿಸುವಂಥ ಕಾರ್ಯಕ್ರಮ ಆರಂಭಿಸಿತ್ತು. ಈಗ…

1 2 3 9