Browsing: ಫೋಕಸ್

Latest Posts

ಮಿಸ್ಸಿಂಗ್ ಬಾಯ್ ಚಿತ್ರದಲ್ಲಿ ಬ್ಯುಸಿಯಾಗಿರುವ ನಿರ್ದೇಶಕ ರಘುರಾಮ್ ಅವರಿಗೀಗ ಮಾತೃ ವಿಯೋಗದ ಆಘಾತ ಬಂದೆರಗಿದೆ. ಅಮ್ಮನಿಂದ ಅನಿವಾರ್ಯವಾಗಿ ದೂರಾಗಿ ವಿದೇಶದ ಪಾಲಾದ ಹುಡುಗನೊಬ್ಬನ ಮನ ಕಲಕುವ ಕಥೆಯನ್ನು ಸಿನಿಮಾ ಮಾಡಿರುವ ರಘುರಾಮ್ ಅವರ ತಾಯಿ ಇತ್ತೀಚೆಗೆ ಮರಣ ಹೊಂದಿದ್ದಾರೆ. ಈ ಚಿತ್ರದ ಆರಂಭದಿಂದಲೂ ಅದರಲ್ಲಿಯೇ ಕಳೆದು ಹೋಗಿದ್ದವರು ರಘುರಾಮ್. `ಈ ಚಿತ್ರ ಜಗತ್ತಿನ ಎಲ್ಲ ತಾಯಂದಿರಿಗೆ ಅರ್ಪಣೆ’ ಅಂತಾ ಘೋಷಿಸಿದ್ದರು. ಬಿಡುಗಡೆಯಾಗಿರುವ ಟ್ರೈಲರ್ ಕೂಡಾ ಹಿಟ್ ಆಗಿ ಆ ಚಿತ್ರವನ್ನು…

Latest Posts

ಕವಿತಾ ಲಂಕೇಶ್ ನಿರ್ದೇಶನದ `ಸಮ್ಮರ್ ಹಾಲಿಡೇಸ್ ಚಿತ್ರದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ನಟಿಸಲು ಒಪ್ಪಿಕೊಂಡ ಬಗ್ಗೆ ಭಾರೀ ಸುದ್ದಿಯಾಗಿತ್ತು. ಎಲ್ಲವೂ ಅಂದುಕೊಂಡಂತೆಯೇ ಆಗಿದ್ದರೆ ಈವತ್ತು ಸಿದ್ದರಾಮಯ್ಯನವರ ನಟನೆಯ ದೃಷ್ಯಾವಳಿಗಳ ಚಿತ್ರೀಕರಣವೂ ನಡೆಯಬೇಕಿತ್ತು. ಆದರೆ… ಕಾರಣಾಂತರಗಳಿಂದ ಅದರಲ್ಲಿ ಕೊಂಚ ಬದಲಾವಣೆಗಳಾಗಿವೆ. ಸಿದ್ದರಾಮಯ್ಯನವರ ಬಿಡುವಿರದ ಕೆಲಸ ಕಾರ್ಯಗಳ ಕಾರಣಗಳಿಂದ ಈ ಚಿತ್ರೀಕರಣ ಮುಂದಕ್ಕೆ ಹೋಗಿದೆ. ಇದೇ ಸೋಮವಾರದಂದು ಸಿದ್ದರಾಮಯ್ಯನವರು ಸಮ್ಮರ್ ಹಾಲಿಡೇಸ್ ಚಿತ್ರದಲ್ಲಿ ಕ್ಯಾಮೆರಾ ಎದುರಿಸಲಿದ್ದಾರೆ. ಕನ್ನಡ ಚಿತ್ರರಂಗದಲ್ಲಿ ಕ್ರಿಯಾಶೀಲ ನಿರ್ದೇಶಕಿಯಾಗಿ ಗುರುತಿಸಿಕೊಂಡಿರುವ ಕವಿತಾ…

Latest Posts

ವಿನಯದ ಲವಲೇಷವೂ ಇಲ್ಲದ ಆವಂತಿಕಾಗೆ ನಿರ್ಮಾಪಕ ಸೂರಪ್ಪ ಬಾಬು `ಹೇ ಸುಮ್ನಿರಮ್ಮಾ, ಯಾಕೊಳ್ಳೆ ಶಿಲ್ಪಾ ಶೆಟ್ಟಿಯಂಗಾಡ್ತೀಯ ಅಂತ ಗದರಿದ್ದರಂತೆ. ಯಾಕೋ ಚೇಂಬರ್ ನ ಮುಖ್ಯಸ್ಥರಿಗೆ ಕೊಟ್ಟ ಮಾತಿಗೇ ಉಲ್ಟಾ ಹೊಡೆದಿರೋ ಆವಂತಿಕಾ ತಾನು ಪ್ರಸಿದ್ಧ ನಟಿಯೆಂಬ ಭ್ರಮೆಯನ್ನು ತಲೆಗಂಟಿಸಿಕೊಂಡಂತಿದೆ! ರಾಜು ಕನ್ನಡ ಮೀಡಿಯಂ ಚಿತ್ರದಲ್ಲಿ ರಂಖಲು ಮಾಡಿಕೊಂಡು ಭಾರೀ ಸುದ್ದಿ ಮಾಡಿದ್ದಾಕೆ ಆವಂತಿಕಾ ಶೆಟ್ಟಿ. ಅವಂತಿಕಾಳ ರಂಗೀಲಾ ಸ್ಟೋರಿಯನ್ನು ಸಿನಿಬಜ಼್ ಬಯಲುಮಾಡಿತ್ತು. ನಿರ್ಮಾಪಕರ ವಿರುದ್ಧವೇ ದೂರು ಹಿಡಿದು ಕೋರ್ಟಿಗೆ ತಲುಪಿದ್ದ…

Latest Posts

ಕನ್ನಡ ಚಿತ್ರರಂಗದಲ್ಲಿ ನಿರ್ದೇಶಕ, ಗೀತರಚನೆಗಾರರಾಗಿ ಪ್ರಸಿದ್ಧರಾಗಿರೋ ವಿ.ನಾಗೇಂದ್ರ ಪ್ರಸಾದ್ ಇದೀಗ ನಟನೆಯಲ್ಲಿಯೂ ಮಿಂಚುತ್ತಿದ್ದಾರೆ. ಇತ್ತೀಚೆಗೆ ಪ್ರೇಕ್ಷಕರನ್ನು ಆವರಿಸಿಕೊಂಡಿರೋ ಪತ್ತೇದಾರಿ ಪ್ರತಿಭಾ ಸೀರಿಯಲ್ಲಿನಲ್ಲಿಯೂ ಪಾತ್ರವೊಂದನ್ನು ನಿಭಾಯಿಸಿರುವ ನಾಗೇಂದ್ರ ಪ್ರಸಾದ್ ನಟನೆ ಎಲ್ಲರ ಮೆಚ್ಚುಗೆಗೆ ಪಾತ್ರವಾಗಿದೆ. ನಾಗೇಂದ್ರ ಪ್ರಸಾದ್ ರಚಿಸಿರುವ ಸಾವಿರಾರು ಚಿತ್ರಗೀತೆಗಳಿಗೆ ಅಭಿಮಾನಿ ಸಮೂಹವೇ ಸೃಷ್ಟಿಯಾಗಿದೆ. ಹಂಸಲೇಖಾರಂತ ಸಿನಿಮಾ ಸಾಹಿತ್ಯದ ದಿಗ್ಗಜ ಕೂಡಾ `ನಾಗೇಂದ್ರ ಪ್ರಸಾದ್ ನನ್ನ ಉತ್ತರಾಧಿಕಾರಿ’ ಅಂದಿದ್ದಿದೆ. ಪ್ರಾಕಾರ ಯಾವುದೇ ಆದರೂ ಅದನ್ನು ಜನಮೆಚ್ಚುವಂತೆ ಬರೆಯೋದು ನಾಗೇಂದ್ರ ಪ್ರಸಾದ್…

Latest Posts

“ರಂಕಲ್‌ರಾಟೆ ಚಿತ್ರದಲ್ಲಿ ನಾನು ನಟಿಸಿದ್ದೇನೆ ಎಂದು ಈ ಮಾತು ಹೇಳುತ್ತಿಲ್ಲ, ಒಬ್ಬ ರಂಗಭೂಮಿಯನ್ನು ಮೆಟ್ಟಿಲಾಗಿಸಿಕೊಂಡು ಆತನದೇ ಕತೆಯನ್ನು ಮನಮುಟ್ಟುವಂತೆ ಪ್ರೇಕ್ಷಕರಿಗೆ ತಲುಪಿಸುವ ಪ್ರಾಮಾಣಿಕ ಪ್ರಯತ್ನ ಮಾಡಿರುವ ಗೋಪಿಯ ಸಾಹಸದ ಬಗ್ಗೆ ನನಗೆ ಮೆಚ್ಚುಗೆಯಿದೆ. ಇದೊಂದು ರೀತಿಯಲ್ಲಿ `ರಂಗಭೂಮಿ ಚಿತ್ರ.. ಯಾಕೆಂದ್ರೆ ಚಿತ್ರತಮಡದಲ್ಲಿರುವ ಬಹುಪಾಲು ನಟರು-ಟೆಕ್ನೀಷಿಯನ್ಸ್ ರಂಗಭೂಮಿಯಿಂದ ಬಂದವರು.. `ಬಂದವರು ಅನ್ನೋದಕ್ಕಿಂತ ರಂಗಭೂಮಿಯನ್ನು ಜೀವಿಸಿದವರು.. ಈ ಕ್ಷಣಕ್ಕೂ ಜೀವಿಸುತ್ತಿರುವವರು. ಕನ್ನಡ ಚಿತ್ರರಂಗದಲ್ಲಿ ಒಂದು ಪ್ಯಾರಲಲ್ ಆದ ಮಾರ್ಗ ಸಿದ್ಧವಾಗಿದೆ. ರಂಕಲ್‌ರಾಟೆ ಕೂಡ…

Latest Posts

ಕಲಾ ಸಾಮ್ರಾಟ್ ಎಸ್ ನಾರಾಯಣ್ ಬೇರೆ ಭಾಷೆಯ ಚಿತ್ರಗಳನ್ನು ಕನ್ನಡಕ್ಕೆ ರೀಮೇಕ್ ಮಾಡೋದರಲ್ಲಿ ಮಾತ್ರವಲ್ಲ, ಸುಳಿವೇ ಸಿಗದಂತೆ ಮೆತ್ತಗೆ ಭಟ್ಟಿ ಇಳಿಸೋದರಲ್ಲಿಯೂ ಕಲಾಕಾರರೇ. ಇದೀಗ ಬಿಡುಗಡೆಯ ಹೊಸ್ತಿಲಲ್ಲಿರುವ `ಪಂಟ ಚಿತ್ರ ಕೂಡಾ ಕದ್ದ ಸರಕೆಂಬುದನ್ನು ಅದರ ಟ್ರೈಲರ್ ಜಾಹೀರು ಮಾಡಿದೆ. ಈ ಹಿಂದೆ ಲಕ್ಷ್ಮಣ ಚಿತ್ರದ ಮೂಲಕ ಭರವಸೆ ಹುಟ್ಟಿಸಿದ ಹುಡುಗ, ಸಚಿವ ರೇವಣ್ಣ ಅವರ ಪುತ್ರ ಅನೂಪ್. ಮೊದಲ ಚಿತ್ರದಲ್ಲಿಯೇ ಅನೂಪ್ ಗಮನ ಸೆಳೆದಿದ್ದ. ಆತನಿಗೆ ಹೀರೋ ಆಗಿ…

Latest Posts

ಗೋಲ್ಡನ್ ಸ್ಟಾರ್ ಗಣೇಶ್ ಮಡದಿ ಶಿಲ್ಪಾರ ರಾಜಕೀಯ ಆಸಕ್ತಿಯ ಬಗೆಗಾಗಲಿ, ಅವರು ಮುಂಬರುವ ವಿಧಾನಸಭಾ ಚುನಾವಣೆಯಲ್ಲಿ ರಾಜರಾಜೇಶ್ವರಿ ನಗರ ಕ್ಷೇತ್ರದಿಂದ ಕಣಕ್ಕಿಳಿಯುವ ತಯಾರಿ ನಡೆಸುತ್ತಿರೋದರ ಬಗೆಗಾಗಲಿ ರಹಸ್ಯಗಳೇನೂ ಇಲ್ಲ. ಆದರೆ ಅದು ಸಾಧ್ಯವಾಗುತ್ತದಾ ಅಂತೊಂದು ಸಂಶಯ ಸಹಜವಾಗಿಯೇ ಇತ್ತು. ಆದರೆ ತಮ್ಮ ಚುರುಕಿನ ನಡಾವಳಿಯಿಂದಲೇ ಎಲ್ಲರ ಗಮನ ಸೆಳೆದಿರುವ ಶಿಲ್ಪಾ ಗಣೇಶ್ ಅವರಿಗೆ ಮುಂಬರುವ ವಿಧಾನಸಭಾ ಚುನಾವಣೆಯಲ್ಲಿ ರಾಜರಾಜೇಶ್ವರಿ ನಗರ ಕ್ಷೇತ್ರದಿಂದಲೇ ಬಿಜೆಪಿ ಟಿಕೇಟು ಸಿಗುವ ಎಲ್ಲ ಲಕ್ಷಣಗಳೂ ಇವೆ.…

Latest Posts

ಅಜೆಯ್ ರಾವ್ ಮೊದಲ ಬಾರಿ ಆಕ್ಷನ್ ಹೀರೋ ಆಗಿ ಕಾಣಿಸಿಕೊಳ್ಳುತ್ತಿರುವ `ಧೈರ್ಯಂ ಚಿತ್ರ ಈಗಾಗಲೇ ನಾನಾ ರೀತಿಯಲ್ಲಿ ಗಮನ ಸೆಳೆದಿದೆ. ಪ್ರೇಕ್ಷಕರಲ್ಲೊಂದು ಕುತೂಹಲ ಕಾಯ್ದುಕೊಂಡಿರುವ ಈ ಚಿತ್ರ ಮುಂದಿನ ತಿಂಗಳು ರಾಜ್ಯಾದ್ಯಂತ ತೆರೆ ಕಾಣಲಿದೆ. ಶಿವತೇಜಸ್ ನಿರ್ದೇಶನದ ಎರಡನೇ ಚಿತ್ರ ಧೈರ್ಯಂ. ಇದರ ಹಾಡುಗಳು ಈಗಾಗಲೇ ಹಿಟ್ ಆಗಿವೆ ಟ್ರೈಲರ್ ಕೂಡಾ ಯೂಟ್ಯೂಬ್‌ನಲ್ಲಿ ಜನಪ್ರಿಯಗೊಂಡು ಸಾಮಾಜಿಕ ಜಾಲ ತಾಣಗಳಲ್ಲಿ ಟಾಕ್ ಕ್ರಿಯೇಟ್ ಮಾಡಿವೆ. ಇದರಲ್ಲಿ ಅಜೇಯ್ ರಾವ್ ಅವರ ಡಿಫರೆಂಟ್…

1 2 3 53