Browsing: ಪಾಪ್ ಕಾರ್ನ್

Latest Posts

ಕವಿತಾ ಲಂಕೇಶ್ ನಿರ್ದೇಶನದ `ಸಮ್ಮರ್ ಹಾಲಿಡೇಸ್ ಚಿತ್ರದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ನಟಿಸಲು ಒಪ್ಪಿಕೊಂಡ ಬಗ್ಗೆ ಭಾರೀ ಸುದ್ದಿಯಾಗಿತ್ತು. ಎಲ್ಲವೂ ಅಂದುಕೊಂಡಂತೆಯೇ ಆಗಿದ್ದರೆ ಈವತ್ತು ಸಿದ್ದರಾಮಯ್ಯನವರ ನಟನೆಯ ದೃಷ್ಯಾವಳಿಗಳ ಚಿತ್ರೀಕರಣವೂ ನಡೆಯಬೇಕಿತ್ತು. ಆದರೆ… ಕಾರಣಾಂತರಗಳಿಂದ ಅದರಲ್ಲಿ ಕೊಂಚ ಬದಲಾವಣೆಗಳಾಗಿವೆ. ಸಿದ್ದರಾಮಯ್ಯನವರ ಬಿಡುವಿರದ ಕೆಲಸ ಕಾರ್ಯಗಳ ಕಾರಣಗಳಿಂದ ಈ ಚಿತ್ರೀಕರಣ ಮುಂದಕ್ಕೆ ಹೋಗಿದೆ. ಇದೇ ಸೋಮವಾರದಂದು ಸಿದ್ದರಾಮಯ್ಯನವರು ಸಮ್ಮರ್ ಹಾಲಿಡೇಸ್ ಚಿತ್ರದಲ್ಲಿ ಕ್ಯಾಮೆರಾ ಎದುರಿಸಲಿದ್ದಾರೆ. ಕನ್ನಡ ಚಿತ್ರರಂಗದಲ್ಲಿ ಕ್ರಿಯಾಶೀಲ ನಿರ್ದೇಶಕಿಯಾಗಿ ಗುರುತಿಸಿಕೊಂಡಿರುವ ಕವಿತಾ…

Latest Posts

ವಿನಯದ ಲವಲೇಷವೂ ಇಲ್ಲದ ಆವಂತಿಕಾಗೆ ನಿರ್ಮಾಪಕ ಸೂರಪ್ಪ ಬಾಬು `ಹೇ ಸುಮ್ನಿರಮ್ಮಾ, ಯಾಕೊಳ್ಳೆ ಶಿಲ್ಪಾ ಶೆಟ್ಟಿಯಂಗಾಡ್ತೀಯ ಅಂತ ಗದರಿದ್ದರಂತೆ. ಯಾಕೋ ಚೇಂಬರ್ ನ ಮುಖ್ಯಸ್ಥರಿಗೆ ಕೊಟ್ಟ ಮಾತಿಗೇ ಉಲ್ಟಾ ಹೊಡೆದಿರೋ ಆವಂತಿಕಾ ತಾನು ಪ್ರಸಿದ್ಧ ನಟಿಯೆಂಬ ಭ್ರಮೆಯನ್ನು ತಲೆಗಂಟಿಸಿಕೊಂಡಂತಿದೆ! ರಾಜು ಕನ್ನಡ ಮೀಡಿಯಂ ಚಿತ್ರದಲ್ಲಿ ರಂಖಲು ಮಾಡಿಕೊಂಡು ಭಾರೀ ಸುದ್ದಿ ಮಾಡಿದ್ದಾಕೆ ಆವಂತಿಕಾ ಶೆಟ್ಟಿ. ಅವಂತಿಕಾಳ ರಂಗೀಲಾ ಸ್ಟೋರಿಯನ್ನು ಸಿನಿಬಜ಼್ ಬಯಲುಮಾಡಿತ್ತು. ನಿರ್ಮಾಪಕರ ವಿರುದ್ಧವೇ ದೂರು ಹಿಡಿದು ಕೋರ್ಟಿಗೆ ತಲುಪಿದ್ದ…

Latest Posts

ಕನ್ನಡ ಚಿತ್ರರಂಗದಲ್ಲಿ ನಿರ್ದೇಶಕ, ಗೀತರಚನೆಗಾರರಾಗಿ ಪ್ರಸಿದ್ಧರಾಗಿರೋ ವಿ.ನಾಗೇಂದ್ರ ಪ್ರಸಾದ್ ಇದೀಗ ನಟನೆಯಲ್ಲಿಯೂ ಮಿಂಚುತ್ತಿದ್ದಾರೆ. ಇತ್ತೀಚೆಗೆ ಪ್ರೇಕ್ಷಕರನ್ನು ಆವರಿಸಿಕೊಂಡಿರೋ ಪತ್ತೇದಾರಿ ಪ್ರತಿಭಾ ಸೀರಿಯಲ್ಲಿನಲ್ಲಿಯೂ ಪಾತ್ರವೊಂದನ್ನು ನಿಭಾಯಿಸಿರುವ ನಾಗೇಂದ್ರ ಪ್ರಸಾದ್ ನಟನೆ ಎಲ್ಲರ ಮೆಚ್ಚುಗೆಗೆ ಪಾತ್ರವಾಗಿದೆ. ನಾಗೇಂದ್ರ ಪ್ರಸಾದ್ ರಚಿಸಿರುವ ಸಾವಿರಾರು ಚಿತ್ರಗೀತೆಗಳಿಗೆ ಅಭಿಮಾನಿ ಸಮೂಹವೇ ಸೃಷ್ಟಿಯಾಗಿದೆ. ಹಂಸಲೇಖಾರಂತ ಸಿನಿಮಾ ಸಾಹಿತ್ಯದ ದಿಗ್ಗಜ ಕೂಡಾ `ನಾಗೇಂದ್ರ ಪ್ರಸಾದ್ ನನ್ನ ಉತ್ತರಾಧಿಕಾರಿ’ ಅಂದಿದ್ದಿದೆ. ಪ್ರಾಕಾರ ಯಾವುದೇ ಆದರೂ ಅದನ್ನು ಜನಮೆಚ್ಚುವಂತೆ ಬರೆಯೋದು ನಾಗೇಂದ್ರ ಪ್ರಸಾದ್…

Latest Posts

ಕಲಾ ಸಾಮ್ರಾಟ್ ಎಸ್ ನಾರಾಯಣ್ ಬೇರೆ ಭಾಷೆಯ ಚಿತ್ರಗಳನ್ನು ಕನ್ನಡಕ್ಕೆ ರೀಮೇಕ್ ಮಾಡೋದರಲ್ಲಿ ಮಾತ್ರವಲ್ಲ, ಸುಳಿವೇ ಸಿಗದಂತೆ ಮೆತ್ತಗೆ ಭಟ್ಟಿ ಇಳಿಸೋದರಲ್ಲಿಯೂ ಕಲಾಕಾರರೇ. ಇದೀಗ ಬಿಡುಗಡೆಯ ಹೊಸ್ತಿಲಲ್ಲಿರುವ `ಪಂಟ ಚಿತ್ರ ಕೂಡಾ ಕದ್ದ ಸರಕೆಂಬುದನ್ನು ಅದರ ಟ್ರೈಲರ್ ಜಾಹೀರು ಮಾಡಿದೆ. ಈ ಹಿಂದೆ ಲಕ್ಷ್ಮಣ ಚಿತ್ರದ ಮೂಲಕ ಭರವಸೆ ಹುಟ್ಟಿಸಿದ ಹುಡುಗ, ಸಚಿವ ರೇವಣ್ಣ ಅವರ ಪುತ್ರ ಅನೂಪ್. ಮೊದಲ ಚಿತ್ರದಲ್ಲಿಯೇ ಅನೂಪ್ ಗಮನ ಸೆಳೆದಿದ್ದ. ಆತನಿಗೆ ಹೀರೋ ಆಗಿ…

Latest Posts

ಗೋಲ್ಡನ್ ಸ್ಟಾರ್ ಗಣೇಶ್ ಮಡದಿ ಶಿಲ್ಪಾರ ರಾಜಕೀಯ ಆಸಕ್ತಿಯ ಬಗೆಗಾಗಲಿ, ಅವರು ಮುಂಬರುವ ವಿಧಾನಸಭಾ ಚುನಾವಣೆಯಲ್ಲಿ ರಾಜರಾಜೇಶ್ವರಿ ನಗರ ಕ್ಷೇತ್ರದಿಂದ ಕಣಕ್ಕಿಳಿಯುವ ತಯಾರಿ ನಡೆಸುತ್ತಿರೋದರ ಬಗೆಗಾಗಲಿ ರಹಸ್ಯಗಳೇನೂ ಇಲ್ಲ. ಆದರೆ ಅದು ಸಾಧ್ಯವಾಗುತ್ತದಾ ಅಂತೊಂದು ಸಂಶಯ ಸಹಜವಾಗಿಯೇ ಇತ್ತು. ಆದರೆ ತಮ್ಮ ಚುರುಕಿನ ನಡಾವಳಿಯಿಂದಲೇ ಎಲ್ಲರ ಗಮನ ಸೆಳೆದಿರುವ ಶಿಲ್ಪಾ ಗಣೇಶ್ ಅವರಿಗೆ ಮುಂಬರುವ ವಿಧಾನಸಭಾ ಚುನಾವಣೆಯಲ್ಲಿ ರಾಜರಾಜೇಶ್ವರಿ ನಗರ ಕ್ಷೇತ್ರದಿಂದಲೇ ಬಿಜೆಪಿ ಟಿಕೇಟು ಸಿಗುವ ಎಲ್ಲ ಲಕ್ಷಣಗಳೂ ಇವೆ.…

Latest Posts

ಈ ಹಿಂದೆ ಬಂಗಾರಿ ಚಿತ್ರವನ್ನು ನಿರ್ದೇಶಿಸಿದ್ದ ಮಾ ಚಂದ್ರು ಬಹಳ ದಿನಗಳ ನಂತರ ಇದೀಗ ಮತ್ತೊಂದು ಚಿತ್ರವನ್ನು ಕೈಗೆತ್ತಿಕೊಂಡಿದ್ದಾರೆ. ಸಸ್ಪೆನ್ಸ್, ಥ್ರಿಲ್ಲರ್ ಕಥೆ ಹೊಂದಿದ ಶಿವನಪಾದ’ ಚಿತ್ರದ ಮುಹೂರ್ತ ಸಮಾರಂಭ ಕಳೆದ ಸೋಮವಾರ ಕಂಠೀರವ ಸ್ಟುಡಿಯೋದಲ್ಲಿ ನೆರವೇರಿತು. ನಿವೃತ್ತ ಪೊಲೀಸ್ ಅಧಿಕಾರಿ ಹೆಚ್.ಟಿ. ಸಾಂಗ್ಲಿಯಾನ ಈ ಚಿತ್ರದ ಮೂಲಕ ಪುನಃ ಕಲಾವಿದನಾಗಿ ಬಣ್ಣ ಹಚ್ಚುತ್ತಿದ್ದಾರೆ. ಒಬ್ಬ ಪೊಲೀಸ್ ಅಧಿಕಾರಿಯಾಗಿಯೇ ಅವರು ಚಿತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಶಿವನ ಪಾದ ಉತ್ತರ ಕರ್ನಾಟಕ ಏರಿಯಾದಲ್ಲಿರುವ…

ಕಲರ್ ಸ್ಟ್ರೀಟ್

ಕಾಮಿಡಿ ಕಿಲಾಡಿಗಳು ಖ್ಯಾತಿಯ ಲೊಕೇಶ್‌ಕುಮಾರ್ ಈಗ ಚಲನಚಿತ್ರವೊಂದರಲ್ಲಿ ನಾಯಕನಾಗಿ ಕಾಣಿಸಿಕೊಳ್ಳುತ್ತಿದ್ದಾರೆ. `ನಾವೇ ಭಾಗ್ಯವಂತರು’ ಎಂಬ ಹೆಸರಿನ ಚಿತ್ರದ ಮುಹೂರ್ತ ಸಮಾರಂಭ ಕಳೆದವಾರ ನೆರವೇರಿತು. ಮೂರು ಜನ ನಾಯಕರು, ಮೂರು ನಾಯಕಿಯರನ್ನೊಳಗೊಂಡ ಈ ಚಿತ್ರಕ್ಕೆ ಎಂ. ಹರಿಕೃಷ್ಣ ಕಥೆ, ಚಿತ್ರಕಥೆ ಬರೆದು ನಿರ್ದೇಶನ ಮಾಡುತ್ತಿದ್ದಾರೆ. ಕಳೆದ ೨೨ ವರ್ಷಗಳಿಂದ ಚಿತ್ರರಂಗದಲ್ಲಿ ತೊಡಗಿಸಿಕೊಂಡಿರುವ ಇವರು `ಮಂಗಾಟ’ ಚಿತ್ರಕ್ಕೆ ಹಾಗೂ ಕೆಲ ಧಾರಾವಾಹಿಗಳಿಗೂ ಅಲ್ಲದೇ ಆಡ್ ಫಿಲ್ಮ್‌ಗಳಿಗೂ ಛಾಯಾಗ್ರಹಕರಾಗಿ ಕೆಲಸ ಮಾಡಿದ್ದಾರೆ. ನಿರ್ದೇಶಕರಾಗಿ ಇದೇ…

Latest Posts

ಮಾಜಿ ನಾಯಕನಟಿಯರು ಪೋಷಕ ಪಾತ್ರಗಳಲ್ಲಿ ಕಾಣಿಸಿಕೊಳ್ಳೋದು ಈ ವರೆಗೂ ನಡೆದುಕೊಂಡುಬಂದ ಸಂಪ್ರದಾಯ. ಈಗ ಪೋಷಕ ನಟಿಯರಾಗಿ ಗುರುತಿಸಿಕೊಂಡು, ವರ್ಷಗಟ್ಟಲೇ ಅದನ್ನೇ ಮಾಡಿಕೊಂಡಿದ್ದವರು ಹೀರೋಯಿನ್ ಆಗುವ ಹೊಸ ವರಸೆ ಶುರುವಾಗಿದೆ. ಧಾರಾವಾಹಿ ನಟಿ ಎನಿಸಿಕೊಂಡಿದ್ದವರೆಲ್ಲಾ ಚಿತ್ರರಂಗದಲ್ಲಿ ಹೀರೋಯಿನ್ ಆಗಿ ಹೆಸರು ಮಾಡಿರೋವಾಗ ನಾವ್ಯಾಕೆ ಪ್ರಮುಖ ಪಾತ್ರಧಾರಿಗಳಾಗಬಾರದು ಅಂತಾ ಹಠಕ್ಕೆ ಬಿದ್ದವರಂತೆ ಮಮತಾ ರಾಹುತ್, ಭೂಮಿಕಾರಂಥ ನಟಿಯರು ಸಣ್ಣ ಪುಟ್ಟ ಸಿನಿಮಾಗಳಾದರೂ ಒಂದರ ಹಿಂದೊಂದು ಸಿನಿಮಾಗಳಲ್ಲಿ ನಾಯಕಿ ಪಾತ್ರಗಳನ್ನು ಪಡೆದುಕೊಳ್ಳುತ್ತಿದ್ದಾರೆ. ಬಹುಶಃ ಇದೇ…

1 2 3 92