Browsing: ಕಲರ್ ಸ್ಟ್ರೀಟ್

Latest Posts

ಹ್ಯಾಟ್ರಿಕ್ ಹೀರೋ ಡಾ. ಶಿವರಾಜ್ ಕುಮಾರ್ ನಟನೆಯಲ್ಲಿ ಬಂದಿದ್ದ `ಜನುಮದ ಜೋಡಿ’ ಸಿನಿಮಾದಲ್ಲಿನ `ಕೋಲುಂಡೆ ಜಂಗಮದೇವ…’ ಹಾಡು ಯಾರಿಗೆ ತಾನೆ ಗೊತ್ತಿಲ್ಲ. ಆ ಹಾಡಿಗೆ ದನಿಯಾಗಿದ್ದ ಗಾಯಕ ಎಲ್.ಎನ್ ಶಾಸ್ತ್ರಿ ತೀವ್ರತರವಾದ ಅನಾರೋಗ್ಯಕ್ಕೀಡಾಗಿದ್ದಾರೆ. ಸಿನಿಮಾ ಮತ್ತು ಸಂಗೀತವನ್ನೇ ಉಸಿರಾಗಿಸಿಕೊಂಡಿದ್ದ ಶಾಸ್ತ್ರಿ ಅವರನ್ನು ಹೈರಾಣು ಮಾಡಿರುವುದು ಮಾರಣಾಂತಿಕ ಕರುಳು ಕ್ಯಾನ್ಸರ್. ಎಲ್.ಎನ್ ಶಾಸ್ತ್ರಿ ಅವರನ್ನು ತಿಂಗಳುಗಳ ಹಿಂದೆಯೇ ಅನಾರೋಗ್ಯ ಬಾಧಿಸಿತ್ತು. ಆರಂಭದಲ್ಲಿ ಇದನ್ನು ಜಾಂಡೀಸ್ ಅಂತಲೇ ಭಾವಿಸಲಾಗಿತ್ತು. ಆದರೆ ಇದೀಗ ಕರುಳು…

Latest Posts

`ಕನ್ನಡಪ್ರಭ’ದ ಸಿನಿಮಾ ಪತ್ರಕರ್ತ ಆರ್. ಕೇಶವಮೂರ್ತಿ ಅವರ `ಗೇಟ್ ಕೀಪರ್ ಪುಸ್ತಕ ಲೋಕಾರ್ಪಣೆಗೊಂಡಿದೆ. ಸಿನಿಮಾ ಎಂಬುದು ಕೇವಲ ಮನೋರಂಜನಾ ಮಾಧ್ಯಮ ಎಂಬುದರಾಚೆಗೆ, ಸಿನಿಮಾದ ಮೂಲಕವೇ ಆಯಾ ಭಾಗದ ಬದುಕುಗಳನ್ನು ಅನಾವರಣೊಳಿಸೋ ಪ್ರಯತ್ನವಾಗಿ ಹೊರ ಬಂದಿರೋ ಈ ಪುಸ್ತಕ ಜಗತ್ತಿನ ಕ್ಲಾಸಿಕಲ್ ಸಿನಿಮಾ ಲೋಕದಲ್ಲಿ ರಸವತ್ತಾದ ಯಾನ ಮಾಡಿಸುವಂಥಾ ಹೂರಣ ಹೊಂದಿದೆ. ಕನ್ನಡದ ಜತೆಗೆ ಬೆಂಗಾಲಿ, ಹಿಂದಿ, ಮರಾಠಿ, ಗುಜರಾತಿ, ಮಲಯಾಳಂ, ಇರಾನ್, ಕೊರಿಯಾ, ಫ್ರೆಂಚ್, ಇಟಲಿ, ಚೈನಾ, ಜಪಾನ್, ಬ್ರೆಜಿಲ್…

Latest Posts

ನಟಿ ಪೂಜಾ ಗಾಂಧಿಯ ದೋಖಾ ಧಾರಾವಾಹಿಗೆ ರಂಗು ರಂಗಾದ ಎಪಿಸೋಡುಗಳು ಸೇರ್ಪಡೆಯಾಗೋ ಎಲ್ಲ ಲಕ್ಷಣಗಳೂ ಸ್ಪಷ್ಟವಾಗಿ ಗೋಚರಿಸಲಾರಂಭಿಸಿವೆ. ಸಾಮಾನ್ಯವಾಗಿ ಒಂದು ಮಿಕ ಸಿಕ್ಕಾಕ್ಷಣ ಒಂದಷ್ಟು ಸಿನಿಮಾ ಪ್ರಾಜೆಕ್ಟುಗಳನ್ನ ಅನೌನ್ಸ್ ಮಾಡಿ ಲಾಭ ಗಿಟ್ಟಿಸಿಕೊಂಡು ಕೈಯೆತ್ತೋದು ಮಳೆ ಹುಡುಗಿ ಪೂಜಾಳ ಹಳೇ ವರಸೆ. ಇದೀಗ ಆಕೆ ಮತ್ತೊಮ್ಮೆ ಅಂಥಾದ್ದೇ ಅಸ್ತ್ರವನ್ನ ಪ್ರಯೋಗಿಸಿದಂತಿದೆ. ತೆಲುಗಿನಲ್ಲಿ ಒಂದಷ್ಟು ಚಿತ್ರ ನಿರ್ದೇಶನ ಮಾಡಿದ್ದ ಜೆಡಿ ಚಕ್ರವರ್ತಿ ಮತ್ತು ಪೂಜಾ ಗಾಂಧಿ ಜನ್ಮಾಂತರಗಳ ಗೆಳೆಯರಂತೆ ಪೋಸು ಕೊಡಲು…

Latest Posts

ಕವಿತಾ ಲಂಕೇಶ್ ನಿರ್ದೇಶನದ ಸಮ್ಮರ್ ಹಾಲಿಡೇಸ್ ಚಿತ್ರದಲ್ಲಿ ಲಂಕೇಶ್ ಅವರ ಮೊಮ್ಮಕ್ಕಳಾದ ಇಶಾ ಮತ್ತು ಸಮರ್‌ಜಿತ್ ನಟಿಸುತ್ತಿರೋ ವಿಚಾರ ಗೊತ್ತಿರೋದೇ. ಇದೀಗ ಈ ಚಿತ್ರದಲ್ಲಿ ಇಂದ್ರಜಿತ್ ಲಂಕೇಶ್ ಅವರ ಮಡದಿ ಅರ್ಪಿತಾ ಕೂಡಾ ಒಂದು ಪಾತ್ರದಲ್ಲಿ ನಟಿಸಿದ್ದಾರೆ. ಕವಿತಾ ಲಂಕೇಶ್ ಮತ್ತು ಚಿತ್ರ ತಂಡ ಆರಂಭದಲ್ಲಿ ಅರ್ಪಿತಾ ಅವರಿಗೆ ಬಹು ಮುಖ್ಯ ಪಾತ್ರವೊಂದನ್ನು ನೀಡಲು ನಿರ್ಧರಿಸಿದ್ದರಂತೆ. ಆದರೆ ಸಾಫ್ಟ್‌ವೇರ್ ಉದ್ಯೋಗಿಯಾಗಿರೋ ಅರ್ಪಿತಾಗೆ ಸಮಯ ಹೊಂದಿಸೋದು ಕಷ್ಟವಾದೀತೆಂದು ಪತ್ರಕರ್ತೆಯ ಪಾತ್ರ ನಿಕ್ಕಿ…

Latest Posts

ಕನ್ನಡದಲ್ಲಿ ಒಂದೆರಡು ಚಿತ್ರಗಳಲ್ಲಿ ನಟಿಸುತ್ತಲೇ ಬೇರೆ ಭಾಷೆಯ ಚಿತ್ರರಂಗಳತ್ತ ಕೈ ಚಾಚೋದು ಕನ್ನಡ ಚಿತ್ರರಂಗದ ಬಹು ಕಾಲದ ಟ್ರೆಂಡು. ಆದರೆ ಕೆಲ ನಟಿಯರ ಪಾಲಿಗೆ ಅವರ ಪ್ರತಿಭೆಯೇ ಬೇರೆ ಭಾಷೆಗಳ ಚಿತ್ರರಂಗದಲ್ಲಿಯೂ ಅವಕಾಶದ ಹೆಬ್ಬಾಗಿಲು ತೆರೆದುಕೊಳ್ಳುವಂತೆ ಮಾಡುತ್ತದೆ. ಈ ಸಾಲಿಗೀಗ ಈ ಹಿಂದೆ ಗಣಪ ಚಿತ್ರದ ಮೂಲಕ ಗಮನ ಸೆಳೆದಿದ್ದ ಪ್ರಿಯಾಂಕ ತಿಮ್ಮೇಶ್ ಕೂಡಾ ಸೇರಿಕೊಂಡಿದ್ದಾರೆ. ಸಂತೋಷ್ ಬಾಲರಾಜ್ ನಾಯಕನಾಗಿ ನಟಿಸಿದ್ದ ಗಣಪ ಚಿತ್ರದ ನಾಯಕಿಯಾಗಿ ಪ್ರಪ್ರಥಮವಾಗಿ ಪರಿಚಯವಾದವರು ಪ್ರಿಯಾಂಕಾ.…

Latest Posts

ದಶಕದ ಹಿಂದೆ ಕನ್ನಡ ಚಿತ್ರರಂಗ ಮತ್ತು ಕಿರುತೆರೆಯಲ್ಲಿ ನಟಿಸಿ ಗುರುತಿಸಿಕೊಂಡಿದ್ದ ನಟ ಡಾ.ವಿಜಯ್‌ಕುಮಾರ್ ಈಗ ಮತ್ತೆ ಮರಳಿ ಬಂದಿದ್ದಾರೆ. ಅದೂ ‘ಪುನಾರಂಭ’ ಎಂಬ ಚಲನಚಿತ್ರದ ಮೂಲಕ. ವ್ಯಕ್ತಿಯು ತನ್ನ ಕನಸನ್ನು ಸಾಕಾರಗೊಳಿಸಿಕೊಳ್ಳಲು ಹೊರಟಾಗ, ಆತನ ಸಾಧನೆಯ ಹಾದಿಯಲ್ಲಿ ಹಲವಾರು ಸಮಸ್ಯೆಗಳು ಎದುರಾಗುತ್ತವೆ. ಇಂಥ ಸಮಸ್ಯೆಗಳನ್ನು ಹೇಗೆ ಪರಿಹರಿಸಿಕೊಳ್ಳಬಹುದು ಎಂಬ ವಿಷಯದ ಸುತ್ತ ಸಾಗುವ ಕಥೆಯನ್ನು ಮುಂದಿಟ್ಟುಕೊಂಡು ಪುನಾರಂಭಕ್ಕೆ ಡಾ.ವಿಜಯ್‌ಕುಮಾರ್ ಅವರು ಆಕ್ಷನ್-ಕಟ್ ಹೇಳುತ್ತಿದ್ದಾರೆ. ಜೊತೆಗೆ ನಟನಾಗಿ ಕಾಣಿಸಿಕೊಂಡಿದ್ದು, ಬಂಡವಾಳವನ್ನೂ ಚಿತ್ರಕ್ಕೆ…

cbn

ಕಡೆಗೂ ರಿಯಲ್ ಸ್ಟಾರ್ ಉಪೇಂದ್ರ ಅಧಿಕೃತ ರಾಜಕೀಯ ಪ್ರವೇಶಕ್ಕೆ ಕ್ಷಣಗಣನೆ ಶುರುವಾಗಿದೆ. ನಾಳೆ ಬೆಳಗ್ಗೆ ಹನ್ನೊಂದು ಘಂಟೆಗೆ ಮಾಧ್ಯಮಗಳ ಮುಂದೆ ಹಾಜರಾಗಲಿರೋ ಉಪೇಂದ್ರ ತಮ್ಮ ರಾಜಕೀಯ ನಡೆಯ ಕುರಿತಾಗಿ ನಿಖರವಾದ ಮಾಹಿತಿ ನೀಡಲಿದ್ದಾರೆ. ಅಷ್ಟಕ್ಕೂ ಉಪೇಂದ್ರ ರಾಜಕೀಯ ಪ್ರವೇಶದ ಬಗ್ಗೆ ಗುಲ್ಲುಗಳೇಳೋದು ಇದೇ ಮೊದಲೇನಲ್ಲ. ಕಳೆದ ಬಾರಿ ವಿಧಾನಸಭಾ ಚುನಾವಣೆ ನಡೆದಾಗಲೇ ಉಪೇಂದ್ರ ರಾಜಕೀಯ ಪ್ರವೇಶ ಮಾಡಿ ಒಂದು ಕ್ಷೇತ್ರದಿಂದ ಸ್ಪರ್ಧಿಸಿಯೇ ಬಿಡುತ್ತಾರೆಂಬ ವಾತಾವರಣ ಸೃಷ್ಟಿಯಾಗಿತ್ತು. ಆದರೀಗ ಅಂಥಾ ಗೊಂದಲಗಳೆಲ್ಲ…

cbn

ಮಾಸ್ ಲೀಡರ್ ಚಿತ್ರದ ವಿಚಾರದಲ್ಲಿ ಎಲ್ಲಾ ಅಂದುಕೊಂಡಂತೆಯೇ ಇದೆ! ಮನಸಿನ ತುಂಬಾ ಬರೀ ಕೋಮುದ್ವೇಷದ ವಿಷವನ್ನೇ ತುಂಬಿಕೊಂಡಿರೋ ಮನಸ್ಥಿತಿಯೊಂದರಿಂದ ಸಹಜ ಮನುಷ್ಯ ಪ್ರೇಮದ ಅಮೃತ ನಿರೀಕ್ಷಿಸಲು ಸಾಧ್ಯವೇ? ಮಾತೆತ್ತಿದರೆ ವಿಶ್ವಗುರು, ಭಾರತ, ದೇಶ ಪ್ರೇಮ ಅನ್ನುತ್ತಲೇ ಈ ನೆಲದ ಸಾಮರಸ್ಯ ಕದಡೋ ಕಸುಬಿನ ಚಕ್ರವರ್ತಿ ಕಾಲಿಟ್ಟ ಕಡೆ ಸಾಮರಸ್ಯದ ಹರಿಕೆ ಹುಟ್ಟೀತೆಂದು ನಿರೀಕ್ಷಿಸಲಾದೀತಾ? ಈ ವಿಚಾರದಲ್ಲಿ ಶಿವರಾಜ್ ಕುಮಾರ್ ಅಭಿನಯದ ಲೀಡರ್ ಚಿತ್ರದ ಬಗ್ಗೆ ಸಿನಿಬಜ್ ಈ ಹಿಂದೆ ಮಾಡಿದ್ದ…

1 2 3 125