ಅತಿ ಹೆಚ್ಚು ಓದುಗರನ್ನು ಹೊಂದಿರುವ CINIBUZZ ನಲ್ಲಿ ನಿಮ್ಮ ಸಿನಿಮಾದ ಕುರಿತ ಲೇಖನ / ಜಾಹೀರಾತು ಬೇಕಿದ್ದಲ್ಲಿ ಸಂಪರ್ಕಿಸಿ : 88615 99996

ಹೃದಯದ ಚಿಪ್ಪಲ್ಲಿ ಮುತ್ತಾಯ್ತು ಸಾಧು ಸಂಗೀತ!

0


ಸಾಧು ಕೋಕಿಲಾ ನಟನೆಯಲ್ಲಿ ಕಳೆದು ಹೋಗಿ ಬಹಳಷ್ಟು ವರ್ಷಗಳೇ ಕಳೆದು ಹೋಗಿವೆ. ಆದರೂ ಅಭಿರುಚಿ ಇರುವ ಮಂದಿ ಮಾತ್ರ ಸಂಗೀತ ಮಾಂತ್ರಿಕ ಸಾಧು ಕೋಕಿಲಾರನ್ನು ಸದ ಹುಡುಕುತ್ತಲೇ ಇದ್ದರು. ಅವರೀಗ ಮಾಸ್ತಿಗುಡಿಯ ಚೆಂದದ ಹಾಡುಗಳ ಮೂಲಕ ಮತ್ತೆ ಸಿಕ್ಕಿದ್ದಾರೆ!
ಸಾಧು ಕೋಕಿಲಾ ಲಾಂಗ್ ಗ್ಯಾಪ್‌ನ ಬಳಿಕ ಸಂಗೀತ ನಿರ್ದೇಶನ ಮಾಡಿರೋ ಚಿತ್ರ ನಾಗಶೇಖರ್ ನಿರ್ದೇಶನದ ಮಾಸ್ತಿಗುಡಿ. ಈ ಚಿತ್ರದ ಹಾಡುಗಳೀಗ ಕರ್ನಾಟಕದ ಗಡಿ ದಾಟಿ ದೇಶ ವಿದೇಶಗಳಲ್ಲಿಯೂ ಭಾರೀ ಹಿಟ್ ಆಗಿವೆ. ಈ ಮೂಲಕ ಮತ್ತೆ ಸಾಧು ಸಂಗೀತದ ಅಲೆ ಎಲ್ಲೆಡೆ ತೇಲಲಾರಂಭಿಸಿದೆ.
ಮಾಸ್ತಿಗುಡಿ ಚಿತ್ರದಲ್ಲಿ ಒಟ್ಟು ಐದು ಹಾಡುಗಳಿವೆ. ಅಷ್ಟೂ ಹಾಡುಗಳು ಒಂದೊಂದು ರೀತಿಯಲ್ಲಿ ಮೋಡಿ ಮಾಡಿರೋದು ಸಾಧು ಸಂಗೀತದ ಖದರ್ ಹಾಗೇ ಉಳಿದುಕೊಂಡಿರೋದರ ಸಂಕೇತ. ಈ ಹಾಡುಗಳಲ್ಲಿ ಆಡಿಯೋ ರಿಲೀಸಾದಾಕ್ಷಣವೇ ಆವರಿಸಿಕೊಂಡಿದ್ದು ಶ್ರೇಯಾ ಘೋಶಾಲ್ ಮತ್ತು ಸೋನು ನಿಗಮ್ ಹಾಡಿರೋ ‘ಚಿಪ್ಪಿನೊಳಗಡೆ. ಆ ಬಳಿಕ ಶ್ರೇಯಾ ಘೋಶಾಲ್ ಕಠದಲ್ಲಿ ಮೂಡಿ ಬಂದಿರೋ ‘ಸುಮ್ಮನೆ ಸರಿಯುತಿದೆ ಕಾಲವು, ಮೆಲ್ಲನೆ ಅರಳುತಿದೆ ಪ್ರೇಮವು ಹಾಡಂತೂ ಎಲ್ಲರ ನಾಲಗೆಯಲ್ಲೂ ನಲಿದಾಡುತ್ತಿದೆ.
ಸಾಧು ಕೋಕಿಲಾ ಈವತ್ತಿಗೆ ನಟನೆಯಲ್ಲಿ ಬಹು ಬೇಡಿಕೆ ಹೊಂದಿದ್ದರೂ ಖುದ್ದು ಅವರ ಪ್ರಧಾನ ಆಸಕ್ತಿ ಸಂಗೀತ. ಬಹುಶಃ ಬದುಕಿನ ಅನಿವಾರ್ಯತೆಯಿಂದ ನಟನೆಯನ್ನು ನೆಚ್ಚಿಕೊಂಡವರು ಸಾಧು. ಅವರೀಗ ಮತ್ತೆ ಮಾಸ್ತಿಗುಡಿ ಚಿತ್ರದ ಮೂಲಕ ಸಂಗೀತದ ತೆಕ್ಕೆಗೆ ಬಿದ್ದಿದ್ದಾರೆ. ಅವರಿಲ್ಲೇ ಇರಬೇಕೆಂಬುದು ಅವರ ಸಂಗೀತವನ್ನು ಬಹುವಾಗಿ ಪ್ರೀತಿಸುವವರ ಮನದಿಂಗಿತ. ಸಾಧು ಅದನ್ನು ಅನುಮೋದಿಸಿ ಇಲ್ಲಿಯೇ ಉಳಿಯುವಂತಾದಾರೆ ಹಾಡಿನ ಹಬ್ಬವೊಂದು ಆರಂಭವಾದಂತೆಯೇ!

Share.

Leave A Reply