ಅತಿ ಹೆಚ್ಚು ಓದುಗರನ್ನು ಹೊಂದಿರುವ CINIBUZZ ನಲ್ಲಿ ನಿಮ್ಮ ಸಿನಿಮಾದ ಕುರಿತ ಲೇಖನ / ಜಾಹೀರಾತು ಬೇಕಿದ್ದಲ್ಲಿ ಸಂಪರ್ಕಿಸಿ : 88615 99996

ಹುಲಿರಾಯನ ಹಾಡು ಕೇಳಿದ್ರಾ?

0


ಇದುವರೆಗೂ ಮೋಷನ್ ಪೋಸ್ಟರ್ ಮುಂತಾದ ಕ್ರಿಯೇಟಿವ್ ವಿಧಾನಗಳ ಮೂಲಕ ಭಾರೀ ಕುತೂಹಲ ಕೆರಳಿಸಿರುವ ಚಿತ್ರ ‘ಹುಲಿರಾಯ. ಅರವಿಂದ ಕೌಶಿಕ್ ನಿರ್ದೇಶನದ, ಬಾಲು ನಾಗೇಂದ್ರ ಅಭಿನಯದ ಹುಲಿರಾಯ ಇದೀಗ ಹಾಡುಗಳ ಮೂಲಕ ಎಲ್ಲೆಡೆ ಭರ್ಜರಿ ಸದ್ದು ಮಾಡಲಾರಂಭಿಸಿದ್ದಾನೆ!
ಫಸ್ಟ್ ಲುಕ್ ಮತ್ತು ಮೋಷನ್ ಫಿಕ್ಚರ್‌ಗಳಿಂದಲೇ ನಿರೀಕ್ಷೆ ಮೂಡಿಸಿದ್ದ ಈ ಚಿತ್ರದ ಹಾಡುಗಳು ಅನಾವರಣಗೊಂಡ ದಿನದೊಪ್ಪತ್ತಿನಿಂದಲೇ ಸದ್ದು ಮಾಡುತ್ತಿವೆ. ಬಾಲು ನಾಗೇಂದ್ರ ಅವರನ್ನು ನಾಯಕನಾಗಿಟ್ಟುಕೊಂಡು ಭಿನ್ನವಾದೊಂದು ಕಥೆ ಮಾಡಿಕೊಂಡು ಚಿತ್ರೀಕರಣಕ್ಕಿಳಿದಿದ್ದವರು ಅರವಿಂದ ಕೌಶಿಕ್. ಹೀಗೆ ಚಿತ್ರೀಕರಣಕ್ಕೆ ಸಜ್ಜಾಗುವಾಗ ಹಾಡುಗಳಿಲ್ಲದೆಯೇ ದೃಷ್ಯ ಕಟ್ಟುವ ಇರಾದೆ ನಿರ್ದೇಶಕರಿಗಿತ್ತಂತೆ. ಆದರೆ ಚಿತ್ರೀಕರಣದ ಸಮಯದಲ್ಲಿಯೇ ಮನಸು ಬದಲಾಯಿಸಿ ಒಂದು ಹಾಡಿನ ಆಲೋಚನೆ ಮಾಡಿ ಬಳಿಕ ನಾಲಕ್ಕು ಹಾಡುಗಳನ್ನು ಸಿದ್ಧಪಡಿಸಲಾಗಿದೆ.
ನಿರ್ದೇಶಕರ ಕಡೆಯಿಂದ ಇಂಥಾದ್ದೊಂದು ಗ್ರೀನ್ ಸಿಗ್ನಲ್ ಬರುತ್ತಲೇ ಹೊಸಾ ಗಾಯಕರನ್ನು ಸಜ್ಜುಗೊಳಿಸಿ ಟ್ಯೂನು ಹಾಕಿದವರು ಸಂಗೀತ ನಿರ್ದೇಶಕ ಅರ್ಜುನ್ ರಾಮ್. ಕಡೆಗೂ ಅರ್ಜುನ್ ಹೊಸಾ ಗಾಯಕರ ಮೂಲಕವೇ ನಾಲಕ್ಕು ಚೆಂದದ ಹಾಡುಗಳನ್ನು ಸೃಷ್ಟಿಸಿ ಕೊಟ್ಟಿದ್ದಾರೆ. ಅವೆಲ್ಲವೂ ಈಗ ಜನಪ್ರಿಯಗೊಂಡು ಹುಲಿರಾಯನೆಡೆಗಿನ ನಿರೀಕ್ಷೆ ಮತ್ತಷ್ಟು ನಿಗಿ ನಿಗಿಸುವಂತೆ ಮಾಡುವಲ್ಲಿ ಯಶ ಕಂಡಿದ್ದಾರೆ.
ಕಾಡಿನಲ್ಲಿಯೇ ಹುಟ್ಟಿ ಬೆಳೆದ ಯುವಕನೊಬ್ಬ ನಗರಕ್ಕೆ ಬಂದು ಹೊಸಾ ಜಗತ್ತಿನೊಂದಿಗೆ ಮುಖಾಮುಖಿಯಾಗುವ ಕಥಾ ಎಳೆಯ ಈ ಚಿತ್ರ ಈಗಾಗಲೇ ಬಹುತೇಕ ಕೆಲಸ ಕಾರ್ಯ ಮುಗಿಸಿಕೊಂಡಿದೆ. ಇದೀಗ ಹಾಡುಗಳ ಮೂಲಕವೂ ಗಮನ ಸೆಳೆಯುವಲ್ಲಿ ಸಫಲವಾಗಿರುವ ಹುಲಿರಾಯ ಇನ್ನೇನು ತಿಂಗಳೊಪ್ಪತ್ತಿನಲ್ಲಿ ಥೇಟರುಗಳಲ್ಲಿ ಘರ್ಜನೆ ಆರಂಭಿಸೋ ತಯಾರಿಯಲ್ಲಿದೆ!

Share.

Leave A Reply