ಅತಿ ಹೆಚ್ಚು ಓದುಗರನ್ನು ಹೊಂದಿರುವ CINIBUZZ ನಲ್ಲಿ ನಿಮ್ಮ ಸಿನಿಮಾದ ಕುರಿತ ಲೇಖನ / ಜಾಹೀರಾತು ಬೇಕಿದ್ದಲ್ಲಿ ಸಂಪರ್ಕಿಸಿ : 88615 99996

ಪೊಲೀಸ್ ಕಾರ್ಯಕ್ರಮಕ್ಕೆ ಹೀರೋಗಳ ಸಾಥ್!

0

ನಾಯಕ ನಟರು ತಮ್ಮ ಸಾಮಾಜಿಕ ಜವಾಬ್ದಾರಿಯನ್ನ ಪ್ರದರ್ಶಿಸಿರುವುದು ಮೆಚ್ಚುವ ವಿಚಾರ. ಯಾಕೆಂದರೆ ಪೊಲೀಸ್ ಇಲಾಖೆ ಮತ್ತು ಜನರ ಒಡನಾಟ ಗಟ್ಟಿಯಾದಾಗ ದುಷ್ಟ ಶಕ್ತಿಯಿಂದ ಮುಕ್ತಿಗೊಳ್ಳುವ ಕೆಲಸ ಒಂದಷ್ಟು ಸುಗಮವಾಗುತ್ತದೆ. ಸ್ಯಾಂಡಲ್ ವುಡ್‌ನ ಇನ್ನಷ್ಟು ಹೀರೋಗಳು ಜನರನ್ನು ಹುರಿದುಂಬಿಸೋ ಹಾದಿಯಲ್ಲಿದ್ದಾರೆ. ಇದರಿಂದಾಗ ಬೀದರ್‌ನಲ್ಲಿ ಆರಂಭಗೊಂಡು ಬೆಂಗಳೂರಿನಲ್ಲಿ ಕೊನೆಗೊಳ್ಳುವ ಸೈಕಲ್ ಜಾಥಾಕ್ಕೆ ಅಭೂತಪೂರ್ವ ಬೆಂಬಲವೂ ಸಿಗಲಾರಂಭಿಸಿದೆ.

ಜನರ ರಕ್ಷಣೆಗೋಸ್ಕರ ಹಗಲು ರಾತ್ರಿ ಎನ್ನದೇ ಕಾರ್ಯ ನಿರ್ವಹಿಸುವ ಪೊಲೀಸ್ ಇಲಾಖೆಯ ಸೇವೆ ಅನನ್ಯ. ಆದರೆ ಅದೇಕೋ ಇಂಥಾ ಪೊಲೀಸ್ ಇಲಾಖೆಗೂ ಜನರಿಗೂ ನಡುವೆ ಬಹು ಕಾಲದಿಂದಲೂ ಭಾವನಾತ್ಮಕ ಅಂತರವೊಂದು ಯಥಾ ಸ್ಥಿತಿಯಲ್ಲಿದೆ. ಜನಸಾಮಾನ್ಯರ ಮನಸ್ಸಿನಲ್ಲಿ ಪೊಲೀಸರೆಂದರೆ ಒಂದು ರೀತಿಯ ಭಯ ಮನೆಮಾಡಿಬಿಟ್ಟಿದೆ.
ಇಂಥಾದ್ದನ್ನು ನಿವಾರಿಸುವ ದೃಷ್ಟಿಯಿಂದಲೇ ರಾಜ್ಯ ಮೀಸಲು ಪೊಲೀಸ್ ಪಡೆ ‘ಎಂದೆಂದಿಗೂ ನಾವು ನಿಮ್ಮೊಂದಿಗೆ ಎಂಬ ವಿನೂತನ ಸೈಕಲ್ ಜಾಥಾ ಕಾರ್ಯಕ್ರಮವೊಂದನ್ನು ಹಮ್ಮಿಕೊಂಡಿದೆ.
ಸಂತಸದ ವಿಚಾರವೆಂದರೆ, ಪೊಲೀಸ್ ಇಲಾಖೆ ಜನರೊಂದಿಗೆ ಬೆರೆಯುವ ಈ ಕಾರ್ಯಕ್ರಮಕ್ಕೆ ಕನ್ನಡ ಚಿತ್ರರಂಗದ ಹೀರೋಗಳನೇಕರು ಸಾಥ್ ನೀಡಿದ್ದಾರೆ. ಕರ್ನಾಟಕದ ಉದ್ದಗಲಕ್ಕೂ ಸಂಚರಿಸುವ ಮೀಸಲು ಪಡೆಯ ಪೊಲೀಸರ ಈ ಕಾರ್ಯಕ್ರಮದಲ್ಲಿ ಭಾಗಿಯಾಗಿ ಯಶಗೊಳಿಸುವಂತೆ ಸ್ಯಾಂಡಲ್ ವುಡ್ ಹೀರೋಗಳು ಜನರಲ್ಲಿ ವಿಡಿಯೋ ಮೂಲಕ ಮನವಿ ಮಾಡಿ ಹುರಿದುಂಬಿಸುತ್ತಿದ್ದಾರೆ.
ರವಿಶಂಕರ್ ಗೌಡ, ಲವ್ಲಿ ಸ್ಟಾರ್ ಪ್ರೇಮ್, ರಾಕ್ ಸ್ಟಾರ್ ರೋಹಿತ್, ರಾಜವರ್ಧನ್, ಮಯೂರ್, ನಿರ್ದೇಶಕರಾದ ಸಂತೋಷ್ ಆನಂದರಾಮ್, ಮಂಜು ಮಾಂಡವ್ಯ ಮೊದಲಾದವರು ‘ನಮ್ಮ ರಕ್ಷಣೆಗೋಸ್ಕರ ದುಡಿಯುವ ಪೊಲೀಸರ ಜೊತೆ ಬೆರೆತು ಅವರನ್ನು ಅಭಿನಂದಿಸಿ ಹುರಿದುಂಬಿಸೋದು ನಮ್ಮ ಆದ್ಯ ಕರ್ತವ್ಯ. ನಿಮ್ಮೂರಿಗೆ ಬರುವ ಈ ಸೈಕಲ್ ಜಾಥಾವನ್ನು ಎದುರುಗೊಂಡು ಮೀಸಲು ಪಡೆ ಪೊಲೀಸರ ಜೊತೆ ಬೆರೆಯಿರಿ ಅಂತ ಜನರನ್ನು ಹುರಿದುಂಬಿಸಿದ್ದಾರೆ.
ಈ ಮೂಲಕ ನಾಯಕ ನಟರು ತಮ್ಮ ಸಾಮಾಜಿಕ ಜವಾಬ್ದಾರಿಯನ್ನ ಪ್ರದರ್ಶಿಸಿರುವುದು ಮೆಚ್ಚುವ ವಿಚಾರ. ಯಾಕೆಂದರೆ ಪೊಲೀಸ್ ಇಲಾಖೆ ಮತ್ತು ಜನರ ಒಡನಾಟ ಗಟ್ಟಿಯಾದಾಗ ದುಷ್ಟ ಶಕ್ತಿಯಿಂದ ಮುಕ್ತಿಗೊಳ್ಳುವ ಕೆಲಸ ಒಂದಷ್ಟು ಸುಗಮವಾಗುತ್ತದೆ. ಸ್ಯಾಂಡಲ್ ವುಡ್‌ನ ಇನ್ನಷ್ಟು ಹೀರೋಗಳು ಜನರನ್ನು ಹುರಿದುಂಬಿಸೋ ಹಾದಿಯಲ್ಲಿದ್ದಾರೆ. ಇದರಿಂದಾಗ ಬೀದರ್‌ನಲ್ಲಿ ಆರಂಭಗೊಂಡು ಬೆಂಗಳೂರಿನಲ್ಲಿ ಕೊನೆಗೊಳ್ಳುವ ಸೈಕಲ್ ಜಾಥಾಕ್ಕೆ ಅಭೂತಪೂರ್ವ ಬೆಂಬಲವೂ ಸಿಗಲಾರಂಭಿಸಿದೆ.

Share.

Leave A Reply