ಅತಿ ಹೆಚ್ಚು ಓದುಗರನ್ನು ಹೊಂದಿರುವ CINIBUZZ ನಲ್ಲಿ ನಿಮ್ಮ ಸಿನಿಮಾದ ಕುರಿತ ಲೇಖನ / ಜಾಹೀರಾತು ಬೇಕಿದ್ದಲ್ಲಿ ಸಂಪರ್ಕಿಸಿ : 88615 99996

ಪೂನಂ-ಪ್ರಿಯಾಂಕಾ ಅವಳಿಗಳೊಂದಿಗೆ ಐಶ್ವರ್ಯಾ ಸರ್ಜಾ ಡ್ಯಾನ್ಸ್!

0

ದಕ್ಷಿಣ ಭಾರತದ ಖ್ಯಾತ ನಟ, ನಿರ್ದೇಶಕ, ಕನ್ನಡದ ಪ್ರತಿಭೆ ಅರ್ಜುನ್ ಸರ್ಜಾ ಅವರು ತಮ್ಮ ಪುತ್ರಿ ಐಶ್ವರ್ಯಾ ಅವರಿಗಾಗಿ `ಪ್ರೇಮಬರಹ’ ಚಿತ್ರವನ್ನು ನಿರ್ಮಿಸಿ ನಿರ್ದೇಶಿಸುತ್ತಿರುವ ವಿಚಾರ ಎಲ್ಲರಿಗೂ ತಿಳಿದದ್ದೇ. ಈ ಸಿನಿಮಾ ಈಗ ಚಿತ್ರೀಕರಣದ ಹಂತದಲ್ಲಿದೆ. ಈ ಚಿತ್ರದಲ್ಲಿ ಐಶ್ವರ್ಯ ಇಂಟ್ರಡಕ್ಷನ್ ಸೀನ್’ಗಾಗಿ ವಿಶೇಷ ನೃತ್ಯವೊಂದನ್ನು ಅಳವಡಿಸಲಾಗುತ್ತಿದೆ. IMG-20161017-WA0009
ಯು.ಎಸ್. ಮೂಲದ ಪೂನಂ ಮತ್ತು ಪ್ರಿಯಾಂಕಾ ಶಾ ಅವಳಿ ಸಹೋದರಿಯರು, ಭರತನಾಟ್ಯಂ-ಹಿಪಾಪ್ ಆಲ್ಬಂಗಳಿಂದ ಇತ್ತೀಚಿನ ವರ್ಷಗಳಲ್ಲಿ ಸಾಕಷ್ಟು ಹೆಸರು ಮಾಡಿದ್ದಾರೆ. ಕೋಟ್ಯಂತರ ಅಭಿಮಾನಿಗಳನ್ನು ಹೊಂದಿರುವ ಈ ಜೋಡಿ ಒಂದು ವಿಡಿಯೋವನ್ನು ಇಂಟರ್’ನೆಟ್ಟಿನಲ್ಲಿ ಹರಿಯಬಿಟ್ಟರೆ ಅಗಣಿತ ಸಂಖ್ಯೆಯ ಜನ ಅದನ್ನು ವೀಕ್ಷಿಸುತ್ತಾರೆ. ಇವರನ್ನು ಕರೆತಂದು ಒಂದು ಮ್ಯೂಸಿಕ್ ಬಿಟ್’ಗೆ ಕೊರಿಯೋಗ್ರಾಫ್ ಮಾಡಿಸಿದರೆ ಚೆಂದ ಅನ್ನಿಸಿತ್ತಂತೆ. ಹೀಗಾಗಿ ಚಿಕಾಗೋದಲ್ಲಿದ್ದ ಈ ಸಹೋದರಿಯರನ್ನು ಮುಂಬೈಗೆ ಕರೆಸಿಕೊಂಡು ಕಾನ್ಸೆಪ್ಟ್ ಹೇಳಿದ್ದರಂತೆ. ಅರ್ಜುನ್ ಸರ್ಜಾ ಅವರ ಕಾನ್ಸೆಪ್ಟ್ ಕೇಳಿ ಥ್ರಿಲ್ ಆದ ಪೂನಂ ಮತ್ತು ಪ್ರಿಯಾಂಕಾ ಕೊರಿಯೋಗ್ರಫಿ ಮಾಡಲು ಒಪ್ಪಿ ವಿಶೇಷ ಕಾಳಜಿ ವಹಿಸಿ ಅದ್ಭುತವಾದ ಫ್ಯೂಜನ್ ನೃತ್ಯವನ್ನು ಕಂಪೋಸ್ ಮಾಡಿದ್ದಾರಂತೆ. ಐಶ್ವರ್ಯಾ ಅವರಿಗೆ ಭರತನಾಟ್ಯ ಗೊತ್ತಲ್ಲದೇ ಇದ್ದರೂ ಮತ್ತು ಸಮಯಾವಕಾಶ ಕಡಿಮೆ ಇದ್ದರೂ ನಿರಂತರ ಮೂರು ದಿನಗಳಲ್ಲಿ, ಹದಿಮೂರರಿಂದ ಹದಿನಾಲ್ಕು ಘಂಟೆಗಳ ಪ್ರಾಕ್ಟೀಸ್ ಮಾಡಿ ನಂತರ ಶೂಟ್ ಮಾಡಿದ್ದಾರಂತೆ. ಈ ನೃತ್ಯ ಮಾಡುವಾಗ ಐಶ್ವರ್ಯಾ ಅವರಿಗೆ ಕಷ್ಟವಾದರೂ ತೆರೆಯ ಮೇಲದು ಸುಂದರವಾಗಿ ಮೂಡಿಬರಲಿದೆಯಂತೆ. ತಮ್ಮದೇ ಆಲ್ಬಂಗಳಿಗಾಗಿ ನೃತ್ಯ ಸಂಯೋಜನೆ ಮಾಡಿಕೊಳ್ಳುತ್ತಿದ್ದ ಪೂನಂ ಮತ್ತು ಪ್ರಿಯಾಂಕಾ ಸಹೋದರಿಯರಿಗೆ ಸಿನಿಮಾದಲ್ಲಿ ಇದು ಮೊದಲ ಅನುಭವ.
ಈ ವಿಚಾರವನ್ನು ಸ್ವತಃ ಐಶ್ವರ್ಯಾ ಅರ್ಜುನ್ ಸರ್ಜಾ ಅವರು ಸಿನಿಬಜ಼್ ನೊಂದಿಗೆ ಹಂಚಿಕೊಂಡರು. ಬಹುತೇಕ ಚಿತ್ರೀಕರಣ ಮುಗಿಸಿದ್ದೀವಿ. ಶೀಘ್ರದಲ್ಲೇ `ಪ್ರೇಮಬರಹ’ದ ಫಸ್ಟ್ ಲುಕ್ ಜೊತೆ ಕನ್ನಡದ ಚಿತ್ರರಸಿಕರ ಮುಂದೆ ಹಾಜರಾಗುತ್ತೇವೆ ಎಂದರು.

Share.

Leave A Reply