ಅತಿ ಹೆಚ್ಚು ಓದುಗರನ್ನು ಹೊಂದಿರುವ CINIBUZZ ನಲ್ಲಿ ನಿಮ್ಮ ಸಿನಿಮಾದ ಕುರಿತ ಲೇಖನ / ಜಾಹೀರಾತು ಬೇಕಿದ್ದಲ್ಲಿ ಸಂಪರ್ಕಿಸಿ : 88615 99996

ಜಗ್ಗೇಶ್ ವಿರುದ್ಧ ಕನ್ನಡಿಗರು ರೊಚ್ಚಿಗೆದ್ದಿದ್ದೇಕೆ?

0

ಸಾಮಾಜಿಕ ಜಾಲತಾಣಗಳಲ್ಲಿ ಸದಾ ಸಕ್ರಿಯರಾಗಿರೋ ನವರಸ ನಾಯಕ ಜಗ್ಗೇಶ್ ವಿರುದ್ಧ ಕನ್ನಡಿಗರು ಅಸಹನೆ ವ್ಯಕ್ತಪಡಿಸಲಾರಂಭಿಸಿದ್ದಾರೆ. ಇದಕ್ಕೆ ಕಾರಣವಾಗಿರೋದು ಜಗ್ಗೇಶ್ ಅವರೇ ಮಾಡಿರೋ ಟ್ವೀಟ್ ಒಂದರ ಸಾರಾಂಶ!
ಉಪ ರಾಷ್ಟ್ರಪತಿಯಾಗಿ ವೆಂಕಯ್ಯ ನಾಯ್ಡು ಆಯ್ಕೆಯಾಗುತ್ತಲೇ ಆ ಬಗ್ಗೆ ಟ್ವೀಟ್ ಮಾಡಿರೋ ಜಗ್ಗೇಶ್, `ಕರ್ನಾಟಕದಲ್ಲಿ ಭಾಷಾ ಭಾವನೆಯಿಂದ ಅವರು ರಾಜ್ಯಸಭಾ ಸದಸ್ಯರಾಗೋದನ್ನು ಆಕ್ಷೇಪಿಸಿದರು. ಈಗವರು ರಾಷ್ಟ್ರಪತಿ. ಬಾರದು ಬಪ್ಪುದು, ಬರುವುದು ತಪ್ಪದು ಅಂತ ಅಭಿಪ್ರಾಯ ವ್ಯಕ್ತ ಪಡಿಸಿದ್ದಾರೆ.
ವೆಂಕಯ್ಯ ನಾಯ್ಡು ಅವರನ್ನು ಈ ಹಿಂದೆ ಕರ್ನಾಟಕದಿಂದ ರಾಜ್ಯಸಭಾ ಸದಸ್ಯರನ್ನಾಗಿ ಆಯ್ಕೆ ಮಾಡಿದ್ದಾಗಲೇ ಕನ್ನಡಿಗರು ರೊಚ್ಚಿಗೆದ್ದಿದ್ದರು. ಈ ವೆಂಕಯ್ಯ ಯಾವತ್ತೀ ಒಂದಕ್ಷರ ಕನ್ನಡ ಮಾತಾಡಲು ಪ್ರಯತ್ನಿಸಿದವರಲ್ಲ. ಕರ್ನಾಟಕದಿಂದ ಆರಿಸಿ ಹೋದರೂ ಅದನ್ನು ಅಧಿಕಾರದ ಮೆಟ್ಟಿಲಾಗಿ ಬಳಸಿಕೊಂಡರೇ ಹೊರತು ಕನ್ನಡದ ಪ್ರತಿನಿಧಿಯಾಗಿ ನಡೆದುಕೊಳ್ಳಲಿಲ್ಲ. ಅದು ಸಾಧ್ಯವೂ ಇಲ್ಲ. ಕರ್ನಾಟಕದಿಂದಲೇ ರಾಜ್ಯಸಭಾ ಸದಸ್ಯರನ್ನು ಆರಿಸಿ ಕಳಿಸಿದರೆ ಏನಾದರೂ ಪ್ರಯೋಜನವಾದೀತೆಂಬ ಅಭಿಪ್ರಾಯ ಕೇಳಿ ಬಂದಿತ್ತು.
ಆದರೆ ಈ ಬಾರಿಯೂ ಬಿಜೆಪಿ ಅವರನ್ನೇ ಮತ್ತೆ ಕಣಕ್ಕಿಳಿಸೋ ಸೂಚನೆ ಬಂದಾಗ ಕನ್ನಡಿಗರೆಲ್ಲರೂ ವಿರೋಧ ವ್ಯಕ್ತ ಪಡಿಸಿದ್ದರು. ಆದ್ದರಿಂದಲೇ ನಿರ್ಮಲಾ ಸೀತಾರಾಂ ಅವರನ್ನು ಕಣಕ್ಕಿಳಿಸಲಾಗಿತ್ತು. ಆ ಮೂಲಕ ಕನ್ನಡತನದ ಕೂಗಿಗೆ ಜಯ ಸಿಕ್ಕಿತ್ತು.
ಈ ವಿದ್ಯಮಾನವನ್ನು ರಾಜಕೀಯವಾಗಿ ಗ್ರಹಿಸಿ ಜಗ್ಗಣ್ಣ ಇಂಥಾದ್ದೊಂದು ಟ್ವೀಟ್ ಮಾಡಿದ್ದಾರೆ. ಆ ಮೂಲಕ ಕನ್ನಡಿಗರ ಆಕ್ರೋಶ ಕೆರಳಿಸಿದ್ದಾರೆ. ಇಂಥಾ ವಿಚಾರಗಳಲ್ಲಿ ರಾಜಕೀಯದಾಚೆಗೆ ಆಲೋಚಿಸಬೇಕಿದೆ. ಜಗ್ಗೇಶ್ ಅವರಿಗೆ ಪಕ್ಷ ಪಾರ್ಟಿಗಳಾಚೆಗೆ ಅಭಿಮಾನಿ ಬಳಗವಿದೆ. ಎಲ್ಲ ಪಕ್ಷ, ಸಿದ್ದಾಂತಗಳಿಗಿಂತಲೂ ಕನ್ನಡ ತನ ದೊಡ್ಡದು ಎಂಬುದನ್ನು ಜಗ್ಗೇಶ್ ಅವರಿಗೆ ಹೇಳೋ ಅವಶ್ಯಕತೆ ಇಲ್ಲ ಅಂದುಕೊಳ್ಳುತ್ತಾ…

Share.

Leave A Reply