ಅತಿ ಹೆಚ್ಚು ಓದುಗರನ್ನು ಹೊಂದಿರುವ CINIBUZZ ನಲ್ಲಿ ನಿಮ್ಮ ಸಿನಿಮಾದ ಕುರಿತ ಲೇಖನ / ಜಾಹೀರಾತು ಬೇಕಿದ್ದಲ್ಲಿ ಸಂಪರ್ಕಿಸಿ : 88615 99996

ಅಜಯ್ ರಾವ್‌ಗೆ ಅವಾರ್ಡುಗಳೆಂದರೆ ಅಲರ್ಜಿ!

0

ಈ ಅವಾರ್ಡುಗಳ ಬಗ್ಗೆ ನನಗೆ ನಂಬಿಕೆ ಇಲ್ಲ. ಐದು ಜನರನ್ನು ನಿಲ್ಲಿಸಿ ಎಲ್ಲರಿಗೂ ರಾವಣನ ಪಾತ್ರ ಹಾಕಿಸಿ ಆ ಐವರಲ್ಲಿ ಯಾರು ಒಳ್ಳೇ ನಟನೆ ಮಾಡಿದರು ಅಂತಾ ನೋಡಿ ಅವರಲ್ಲೊಬ್ಬರಿಗೆ `ಬೆಸ್ಟ್ ಆಕ್ಟರ್’ ಅಂದರೆ, ಅದನ್ನು ಒಪ್ಪಬಹುದು. ಆದರೆ ನಾಲ್ಕಾರು ಬೇರೆ ವೆರೈಟಿ ಸಿನಿಮಾಗಳನ್ನು ನೋಡಿ ಅದರಲ್ಲಿ ಒಬ್ಬರಿಗೆ `ಬೆಸ್ಟ್ ಆಕ್ಟರ್’ ಅಂತಾ ಅವಾರ್ಡು ಕೊಟ್ಟರೆ ಅದನ್ನು ಹೇಗೆ ಸ್ವೀಕರಿಸೋದು? `ಉತ್ತಮ ನಟನೆ’ ಎಂದು ಪ್ರೋತ್ಸಾಹದಾಯಕವಾಗಿ ಪ್ರಶಸ್ತಿಗಳು ಕೊಟ್ಟರೆ ಅದನ್ನು ಒಪ್ಪಬಹುದು… ಇದು ಅಜಯ್ ರಾವ್ ಅವರ ವಾದ.
ಧೈರ್ಯಂ ಚಿತ್ರ ನಿರೀಕ್ಷೆಗಳನ್ನು ಮೀರಿ ಗೆಲುವು ಸಾಧಿಸಿದೆ. ನೋಡಿದ ಎಲ್ಲರೂ ಸಿನಿಮಾವನ್ನು ಹೊಗಳುತ್ತಿದ್ದಾರೆ. ಈ ಸಂದರ್ಭದಲ್ಲಿ ಚಿತ್ರತಂಡ ಸಂಭ್ರಮದ ಪತ್ರಿಕಾಗೋಷ್ಟಿಯನ್ನೂ ಪೂರೈಸಿದೆ. ಈ ಸಂದರ್ಭದಲ್ಲಿ ಸಿಕ್ಕ ಅಜಯ್ ರಾವ್ ಅವರನ್ನು ಮಾಧ್ಯಮದವರು `ಯಾಕೆ ನೀವು ಸಭೆ ಸಮಾರಂಭಗಳಲ್ಲಿ ಕಾಣಿಸಿಕೊಳ್ಳೋದಿಲ್ಲ?’ ಅಂತಾ ಕೇಳಿದಾಗ ಅಜಯ್ ಹೇಳಿದ್ದು ಹೀಗೆ… “ನಾನು ಡ್ಯಾನ್ಸ್ ನಲ್ಲಿ ಒಳ್ಳೇ ಪರ್ಫಾರ್ಮರ್ ಅಲ್ಲ. ಸಣ್ಣದೊಂದು ಬಿಟ್ ಗೆ ಬೇಕಿದ್ದರೆ ಕುಣಿಯಬಲ್ಲೆ. ಆದರೆ ಒಂದಿಡೀ ಹಾಡಿನ ಸ್ಪೆಪ್ಪುಗಳನ್ನು ನೆನಪಿಟ್ಟುಕೊಂಡು ಕುಣಿಯೋದು ನನ್ನಿಂದ ಆಗೋದಿಲ್ಲ. ಹಾಗಾಗಿ ಕೆಲವು ಕಡೆ ಮಾತ್ರ ಕಾಣಿಸಿಕೊಳ್ತೀನಿ. ಇನ್ನು  ಅವಾರ್ಡ್‌ಗಳ ಬಗ್ಗೆ ನನಗೆ ನಂಬಿಕೆ ಇಲ್ಲದಿರೋದರಿಂದ ಅಂಥಾ ಸಮಾರಂಭಗಳಿಗೆ ನಾನು ಹೋಗೋದೇ ಇಲ್ಲ…”

Share.

Leave A Reply