ಅತಿ ಹೆಚ್ಚು ಓದುಗರನ್ನು ಹೊಂದಿರುವ CINIBUZZ ನಲ್ಲಿ ನಿಮ್ಮ ಸಿನಿಮಾದ ಕುರಿತ ಲೇಖನ / ಜಾಹೀರಾತು ಬೇಕಿದ್ದಲ್ಲಿ ಸಂಪರ್ಕಿಸಿ : 88615 99996

ಹೊಂಬಾಳೆ ಬ್ಯಾನರ್ ಜೊತೆ ಕಿಚ್ಚನ ಚಿತ್ರ?

0


ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ಮತ್ತು ಕಿಚ್ಚಾ ಸುದೀಪ್ ಕಾಂಬಿನೇಷನ್ನಿನಲ್ಲಿ ಮೂಡಿ ಬರುತ್ತಿರೋ ವಿಲನ್ ಚಿತ್ರ ಸಾಕಷ್ಟು ನಿರೀಕ್ಷೆ ಹುಟ್ಟು ಹಾಕಿದೆ. ಸದ್ಯ ಈ ಚಿತ್ರದ ಶೂಟಿಂಗ್‌ನಲ್ಲಿ ಬ್ಯುಸಿಯಾಗಿರೋ ಸುದೀಪ್ ಅದಾಗಲೆ ಇನ್ನೆರಡು ಚಿತ್ರಗಳನ್ನೂ ಒಪ್ಪಿಕೊಂಡಿರೋ ಸೂಚನೆಗಳಿವೆ.

ಹೆಬ್ಬುಲಿ ಚಿತ್ರದ ಭರ್ಜರಿ ಗೆಲುವಿನ ನಂತರ ಸುದೀಪ್ ನಟಿಸುತ್ತಿರೋ ಮೊದಲ ಚಿತ್ರ ವಿಲನ್. ಇದರ ಚಿತ್ರೀಕರಣ ಚಾಲ್ತಿಯಲ್ಲಿರುವಾಗಲೇ ರಾಜಕುಮಾರದಂಥಾ ಸೂಪರ್ ಹಿಟ್ ಚಿತ್ರ ನಿರ್ಮಾಣ ಮಾಡಿದ್ದ ಹೊಂಬಾಳೆ ಫಿಲಂಸ್ ಬ್ಯಾನರ್‌ನಡಿಯಲ್ಲಿ ಒಂದು ಚಿತ್ರದಲ್ಲಿ ನಟಿಸಲು ಸುದೀಪ್ ಒಪ್ಪಿಕೊಂಡಿರೋ ಸುದ್ದಿ ಹೊರ ಬಿದ್ದಿದೆ.

ವಿಜಯ್ ಕಿರಗಂದೂರು ಅವರ ಹೊಂಬಾಳೆ ಫಿಲಂಸ್ ಈ ವರೆಗೂ ಸೂಪರ್ ಸ್ಟಾರ್ ನಟರುಗಳ ಸಿನಿಮಾಗಳನ್ನೇ ನಿರ್ಮಾಣ ಮಾಡಿದೆ. ಪವರ್ ಸ್ಟಾರ್ ಪುನೀತ್ ಅಭಿನಯದ ನಿನ್ನಿಂದಲೇ, ರಾಜಕುಮಾರ, ಯಶ್ ಅಭಿನಯದ ಮಾಸ್ಟರ್ ಪೀಸ್ ಚಿತ್ರಗಳನ್ನು ನಿರ್ಮಾಣ ಮಾಡಿದ್ದ ಹೊಂಬಾಳೆ ಫಿಲಂಸ್ ಇದೀಗ ಯಶ್ ಅಭಿನಯದ ಬಹು ನಿರೀಕ್ಷಿತ ಕೆಜಿಎಫ್ ನಿರ್ಮಾಣದಲ್ಲಿ ಬ್ಯುಸಿಯಾಗಿದೆ.

ಹೀಗೆ ಸಾಲು ಸಾಲಾಗಿ ಹಿಟ್ ಚಿತ್ರಗಳನ್ನು ನಿರ್ಮಾಣ ಮಾಡುತ್ತಾ ಗಮನ ಸೆಳೆದಿರೋ ಹೊಂಬಾಳೆ ಫಿಲಂಸ್ ಬ್ಯಾನರ್ ಅಡಿಯಲ್ಲಿ ಕಿಚ್ಚಾ ಸುದೀಪ್ ಅವರದ್ದೊಂದು ಚಿತ್ರ ಮೂಡಿ ಬರುವ ಎಲ್ಲ ಲಕ್ಷಣಗಳೂ ಗೋಚರಿಸುತ್ತಿವೆ. ಇದಕ್ಕಿಂತಲೂ ಮೊದಲೇ ಕೃಷ್ಣ ನಿರ್ದೇಶನದ ಚಿತ್ರವೊಂದರಲ್ಲಿಯೂ ಕಿಚ್ಚ ನಟಿಸಲಿದ್ದಾರಂತೆ!

Share.

Leave A Reply