ಅತಿ ಹೆಚ್ಚು ಓದುಗರನ್ನು ಹೊಂದಿರುವ CINIBUZZ ನಲ್ಲಿ ನಿಮ್ಮ ಸಿನಿಮಾದ ಕುರಿತ ಲೇಖನ / ಜಾಹೀರಾತು ಬೇಕಿದ್ದಲ್ಲಿ ಸಂಪರ್ಕಿಸಿ : 88615 99996

‘ರಾಣಾ’ದಲ್ಲಿ ಒಟ್ಟಿಗೆ ನಟಿಸ್ತಾರಾ ರಶ್ಮಿಕಾ-ಯಶ್?

0

ಈ ಹಿಂದೆ ರಶ್ಮಿಕಾ ಮಂದಣ್ಣ ಮತ್ತು ರಾಕಿಂಗ್ ಸ್ಟಾರ್ ಯಶ್ ಅಭಿಮಾನಿಗಳ ನಡುವೆ ಒಂದು ವಾರ್ ನಡೆದ ಬಗ್ಗೆ ಬಿಡಿಸಿ ಹೇಳೋ ಅಗತ್ಯವೇನಿಲ್ಲ. ರಶ್ಮಿಕಾ ಟಿವಿ ಶೋ ಒಂದರಲ್ಲಿ ಆಡಿದ್ದ ಮಾತುಗಳ ಸುತ್ತ ಈ ವಿವಾದವೆದ್ದು ಭವಿಷ್ಯದಲ್ಲೆಂದೂ ಯಶ್ ಮತ್ತು ರಶ್ಮಿಕಾ ಒಂದಾಗಿ ನಟಿಸೋ ಛಾನ್ಸೇ ಇಲ್ಲ ಎಂಬಂಥಾ ವಾತಾವರಣ ಸೃಷ್ಟಿಯಾಗಿತ್ತು.
ಆದರೆ ಇದೀಗ ಸರಿದಾಡಲಾರಂಭಿಸಿರೋ ಸುದ್ದಿ ಅದನ್ನು ಸುಳ್ಳು ಮಾಡಿದೆ. ಆ ಸುದ್ದಿಯ ಪ್ರಕಾರವಾಗಿ ನೋಡ ಹೋದರೆ ಯಶ್ ಮತ್ತು ರಶ್ಮಿಕಾ ಒಂದಾಗಿ ನಟಿಸಲಿರೋ ಚಿತ್ರವೊಂದಕ್ಕೆ ಮುಹೂರ್ತ ನಿಗಧಿಯಾಗಿದೆ!
ಯಶ್ ಮತ್ತು ರಾಧಿಕಾ ಹರ್ಷ ನಿರ್ದೇಶನದ ಚಿತ್ರವೊಂದರಲ್ಲಿ ಒಂದಾಗಲಿದ್ದಾರೆಂಬ ಸುದ್ದಿ ಹರಡಿಕೊಂಡಿದೆ. ಈ ಚಿತ್ರಕ್ಕೆ ರಾಣಾ ಎಂಬ ಹೆಸರೂ ನಿಕ್ಕಿಯಾಗಿದೆ. ಸದ್ಯ ಯಶ್ ಪ್ರಶಾಂತ್ ನೀಲ್ ನಿರ್ದೇಶನದ ಕೆಜಿಎಫ್ ಚಿತ್ರದಲ್ಲಿ ಬ್ಯುಸಿಯಾಗಿದ್ದಾರೆ. ರಶ್ಮಿಕಾ ಕೂಡಾ ಪವರ್ ಸ್ಟಾರ್ ಪುನೀತ್ ರಾಜ್‌ಕುಮಾರ್ ಅಭಿನಯದ ಆಂಜನಿಪುತ್ರ ಚಿತ್ರದ ಚಿತ್ರೀಕರಣದಲ್ಲಿ ತೊಡಗಿಕೊಂಡಿದ್ದಾರೆ. ಇದಲ್ಲದೇ ತೆಲುಗು ಚಿತ್ರಗಳಲ್ಲಿಯೂ ರಶ್ಮಿಕಾಗೀಗ ಭರಪೂರ ಅವಕಾಶಗಳಿದ್ದಾವೆ.
ಇವೆಲ್ಲ ಆದ ನಂತರ ಅಕ್ಟೋಬರ್ ಕೊನೆಯ ಹೊತ್ತಿಗೆಲ್ಲ ರಶ್ಮಿಕಾ ಮತ್ತು ಯಶ್ ಮೊದಲ ಸಲ ಒಟ್ಟಾಗಿ ನಟಿಸುತ್ತಿರೋ ರಾಣಾ ಚಿತ್ರದ ಚಿತ್ರೀಕರಣ ಶುರುವಾಗಲಿದೆಯಂತೆ…

Share.

Leave A Reply