ಅತಿ ಹೆಚ್ಚು ಓದುಗರನ್ನು ಹೊಂದಿರುವ CINIBUZZ ನಲ್ಲಿ ನಿಮ್ಮ ಸಿನಿಮಾದ ಕುರಿತ ಲೇಖನ / ಜಾಹೀರಾತು ಬೇಕಿದ್ದಲ್ಲಿ ಸಂಪರ್ಕಿಸಿ : 88615 99996

ರಥಾವರ ಧರ್ಮ ವಿಶ್ ಹಿನ್ನೆಲೆ ಸಂಗೀತದಲ್ಲಿ ಹಿಂದಿಯ ‘ರಾಗ್ ದೇಶ್

0


ರಥಾವರ ಸಿನಿಮಾದ ಸಂಗೀತ ನಿರ್ದೇಶಕ ಧರ್ಮ ವಿಶ್. ಸದ್ಯ ಧರ್ಮ ವಿಶ್ ತಾರಕಾಸುರ ಸಿನಿಮಾಗೂ ಸಂಗೀತ ನಿರ್ದೇಶನ ಮಾಡುತ್ತಿದ್ದಾರೆ. ಈ ನಡುವೆ ಧರ್ಮ ಅವರು ಬಾಲಿವುಡ್ ಸಿನಿಮಾವೊಂದಕ್ಕೆ ಹಿನ್ನೆಲೆ ಸಂಗೀತ ನೀಡಿರುವುದು ವಿಶೇಷ.
ಅದು ತಿಗ್ಮಾನ್ಷು ಧೂಲಿಯ ನಿರ್ದೇಶನದ ‘ರಾಗ್ ದೇಶ್ ಚಿತ್ರ. ಧರ್ಮ ವಿಶ್ ಹಿನ್ನಲೆ ಸಂಗೀತ ನೀಡಿರುವ ಮೊದಲ ಚಿತ್ರ ಇದಾದರೂ ಈ ಹಿಂದೆ ಸಾಕಷ್ಟು ಹಿಂದಿ ಚಿತ್ರಗಳಿಗೆ ಇವರು ಕೆಲಸ ಮಾಡಿದ್ದಾರೆ. ಮೂಲತಃ ಕನ್ನಡಿಗರೂ, ಬೆಂಗಳೂರಿನವರೂ ಆದ ಧರ್ಮ ವಿಶ್ ಕಳೆದ ಇಪ್ಪತ್ತು ವರ್ಷಗಳಿಂದ ಚಿತ್ರರಂಗದಲ್ಲಿದ್ದಾರೆ. ವಿ. ಮನೋಹರ್ ಅವರ ಸಿನಿಮಾಗಳಲ್ಲಿ ಆರಂಭಿಸಿ ಕನ್ನಡದ ಬಹುತೇಕ ಎಲ್ಲ ಸಂಗೀತ ನಿರ್ದೇಶಕರ ಹಾಡುಗಳಿಗೆ ಧರ್ಮ ವಿಶ್ ಕೀಬೋರ್ಡ್ ಪ್ಲೇಯರ್ ಆಗಿ ಮತ್ತು ಮ್ಯೂಸಿಕ್ ಅರೇಂಜರ್ ಆಗಿ ಕಾರ್ಯ ನಿರ್ವಹಿಸಿದ್ದಾರೆ.
ಸುಭಾಷ್ ಚಂದ್ರಬೋಸ್ ಕಟ್ಟಿದ್ದ ಇಂಡಿಯನ್ ನ್ಯಾಷನಲ್ ಆರ್ಮಿ ಮತ್ತು ಅದರ ಸುತ್ತ ನಡೆದಿದ್ದ ನೈಜ ಘಟನೆಗಳನ್ನು ಆಧರಿಸಿ ‘ರಾಗ್ ದೇಶ್ ಸಿನಿಮಾ ತಯಾರಾಗಿದೆ. ಈ ಚಿತ್ರದ ನಿರ್ದೇಶಕ ತಿಗ್ಮಾನ್ಷು ಧೂಲಿಯ ಅವರು ಧರ್ಮ ವಿಶ್ ಅವರ ಒಂದಷ್ಟು ಕೆಲಸಗಳನ್ನು ನೋಡಿ ಇಷ್ಟಪಟ್ಟು ಧರ್ಮ ಅವರಿಗೆ ಈ ಅವಕಾಶವನ್ನು ನೀಡಿದ್ದಾರಂರೆ. ರಾಜ್ಯಸಭಾ ವಾಹಿನಿ ನಿರ್ಮಿಸಿರುವ ಮೊದಲ ಕಮರ್ಷಿಯಲ್ ಸಿನಿಮಾ ಇದಾಗಿದ್ದು, ರಾಷ್ಟ್ರಪತಿಯವರು ಈ ಚಿತ್ರದ ಮೊದಲ ಪ್ರದರ್ಶನವನ್ನು ವೀಕ್ಷಿಸಲಿದ್ದಾರೆ.
ತಮಿಳಿನ ಖ್ಯಾತ ಸಂಗೀತ ನಿರ್ದೇಶಕ ಹ್ಯಾರಿಸ್ ಜಯರಾಜ್ ಅವರ ಘಜಿನಿ ಚಿತ್ರದಿಂದ ಹಿಡಿದು ತುಪಾಕಿ ತನಕ ಸರಿ ಸುಮಾರು ಇಪ್ಪತ್ತು ಸಿನಿಮಾಗಳಿಗೆ ಧರ್ಮ ವಿಶ್ ಅವರು ಕೀಬೋರ್ಡ್‌ವಾದಕರಾಗಿ ಕಾರ್ಯ ನಿರ್ವಹಿಸಿದ್ದಾರೆ.
ಸದ್ಯ ಕನ್ನಡದಲ್ಲಿ ಹೆಸರು ಮಾಡಿರುವ ಬಹುತೇಕ ಸಂಗೀತ ನಿರ್ದೇಶಕರು ಆರಂಭದಲ್ಲಿ ಕೀಬೋರ್ಡ್ ಪ್ಲೇಯರುಗಳಾಗಿ ಕೆಲಸ ಮಾಡಿದ್ದವರು. ಧರ್ಮ ವಿಶ್ ಕೂಡಾ ಅದೇ ಹಾದಿಯಲ್ಲಿ ಸಂಗೀತ ನಿರ್ದೇಶಕರಾಗುತ್ತಿದ್ದಾರೆ.

Share.

Leave A Reply