ಅತಿ ಹೆಚ್ಚು ಓದುಗರನ್ನು ಹೊಂದಿರುವ CINIBUZZ ನಲ್ಲಿ ನಿಮ್ಮ ಸಿನಿಮಾದ ಕುರಿತ ಲೇಖನ / ಜಾಹೀರಾತು ಬೇಕಿದ್ದಲ್ಲಿ ಸಂಪರ್ಕಿಸಿ : 88615 99996

ಮಾತಿನ ಭಾಗ ಮುಗಿಸಿದ ‘ವೆನಿಲಾ

0


ಜಯತೀರ್ಥ ಅವರು ‘ಬ್ಯೂಟಿಫುಲ್ ಮನಸುಗಳು ಚಿತ್ರದ ಯಶಸ್ಸಿನ ನಂತರದಲ್ಲಿ ಕೈಗೆತ್ತಿಕೊಂಡಿರೋ ಚಿತ್ರ ‘ವೆನಿಲಾ. ಈ ಚಿತ್ರದ ಮಾತಿನ ಭಾಗದ ಚಿತ್ರೀಕರಣ ಸಂಪೂರ್ಣವಾಗಿ ಮುಗಿದಿದೆ. ಹಾಡಿನ ಭಾಗದ ಚಿತ್ರೀಕರಣಕ್ಕಾಗಿ ಚಿತ್ರ ತಂಡ ಸಜ್ಜುಗೊಳ್ಳುತ್ತಿದೆ.
ಉಡುಪಿ ಮತ್ತು ಮೈಸೂರು ಸುತ್ತಮುತ್ತಲ ರಮಣೀಯ ಪ್ರದೆಶಗಳಲ್ಲಿ ೪೫ ದಿನಗಳ ಕಾಲ ‘ವೆನಿಲಾ ಚಿತ್ರದ ಮಾತಿನ ಭಾಗದ ಚಿತ್ರೀಕರಣವನ್ನು ಮುಕ್ತಾಯಗೊಳಿಸಿಕೊಳ್ಳಲಾಗಿದೆ. ಅಖಿಲಾ ಕಂಬೈನ್ಸ್ ಅಡಿಯಲ್ಲಿ ಮೂಡಿ ಬಂದಿರುವ ಈ ಚಿತ್ರಕ್ಕೆ ಜಯರಾಮು ಹಣ ಹೂಡಿದ್ದಾರೆ.
ಕಿರಣ್ ಹಂಪಾಪುರ ಛಾಯಾಗ್ರಹಣ, ಚಂಚಲ್ ಭಟ್ ಕಲಾ ನಿರ್ದೇಶನ, ಕೆ ಎಂ ಪ್ರಕಾಶ್ ಸಂಕಲನ ಇರುವ ಈ ಚಿತ್ರದ ಮೂಲಕ ಅವಿನಾಶ್ ಮತ್ತು ಸ್ವಾತಿ ನಾಯಕ ನಾಯಕಿಯರಾಗಿ ಪರಿಚಯವಾಗುತ್ತಿದ್ದಾರೆ. ರವಿಶಂಕರ್ ಗೌಡ, ರೆಹಮಾನ್, ಪಾವನ, ಗಿರಿ, ಬಿ ಸುರೇಶ್ ಮುಖ್ಯ ಭೂಮಿಕೆಯಲ್ಲಿದ್ದಾರೆ.
ಇದೀಗ ಮಾತಿನ ಭಾಗ ಮುಗಿಸಿಕೊಂಡಿರೋ ಚಿತ್ರ ತಂಡ ಹಾಡಿನ ಭಾಗದ ಚಿತ್ರೀಕರಣಕ್ಕಾಗಿ ತಯಾರಿ ನಡೆಸುತ್ತಿದೆ. ಹಾಡೊಂದರ ಚಿತ್ರೀಕರಣವನ್ನು ಇಂಡೋನೇಷ್ಯಾದಲ್ಲಿ ನಡೆಸಲು ಯೋಜನೆ ಹಾಕಿ ಕೊಳ್ಳಲಾಗಿದೆ.

 

Share.

Leave A Reply