ಅತಿ ಹೆಚ್ಚು ಓದುಗರನ್ನು ಹೊಂದಿರುವ CINIBUZZ ನಲ್ಲಿ ನಿಮ್ಮ ಸಿನಿಮಾದ ಕುರಿತ ಲೇಖನ / ಜಾಹೀರಾತು ಬೇಕಿದ್ದಲ್ಲಿ ಸಂಪರ್ಕಿಸಿ : 88615 99996

`ರಾಜಕುಮಾರ’ನಿಗೂ ಪೈರಸಿ ಕಂಟಕ!

0

ಇಡೀ ಸಿನಿಮಾವನ್ನು ಆನ್‌ಲೈನ್ ಗೆ ಅಪ್ಲೋಡ್ ಮಾಡಿದೋರ್‍ಯಾರು?

ಕನ್ನಡವೂ ಸೇರಿದಂತೆ ಎಲ್ಲ ಚಿತ್ರರಂಗಗಳಿಗೂ ಫೈರಸಿ ಎಂಬುದು ಮಹಾ ಕಂಟಕ. ಈಗಂತೂ ಹೇಳಿಕೇಳಿ ಆನ್‌ಲೈನ್ ಯುಗ. ಒಂದು ಚಿತ್ರ ಥೇಟರಲ್ಲಿ ಫಸ್ಟ್ ಶೋ ಮುಗಿಸೋ ಹೊತ್ತಿಗೆಲ್ಲಾ ಅದು ಆನ್‌ಲೈನಲ್ಲಿ ಹರಿದಾಡಲಾರಂಭಿಸುತ್ತೆ. ಬಾಹುಬಲಿಯಂಥಾ ದೊಡ್ಡ ಚಿತ್ರಗಳೂ ಇದರ ಹೊಡೆತ ತಿನ್ನುವಂತಾಗುತ್ತೆ.

ಇದನ್ನೆಲ್ಲ ಯಾಕೆ ಹೇಳುತ್ತಿದ್ದೇವೆಂದರೆ, ಕನ್ನಡ ಚಿತ್ರರಂಗದಲ್ಲಿ ಬಹು ಕಾಲದ ನಂತರ ಒಂದು ಪರಿಪೂರ್ಣ ಗೆಲುವು ದಾಖಲಿಸಿದ `ರಾಜಕುಮಾರ’ ಚಿತ್ರಕ್ಕೂ ಇದೀಗ ಅಂಥಾದ್ದೇ ಕಂಟಕ ಎದುರಾಗಿದೆ!

ರಾಜಕುಮಾರ ಚಿತ್ರ ಈಗಲೂ ಚಿತ್ರಮಂದಿರಗಳಲ್ಲಿ ಯಶಸ್ವೀ ಪ್ರದರ್ಶನ ಕಾಣುತ್ತಿದೆ. ಹೀಗಿರೋವಾಗಲೇ ಯಾರೋ ಖಬರುಗೇಡಿಗಳು ಇಡೀ ಚಿತ್ರವನ್ನು ಆನ್ ಲೈನಲ್ಲಿ ಅಪ್ಲೋಡ್ ಮಾಡಿದ್ದಾರಂತೆ!

ಎಲ್ಲಾ ವರ್ಗಗಳ ಪ್ರೇಕ್ಷಕರನ್ನೂ ಕೂಡಾ ಬಹು ಕಾಲದ ನಂತರ ಥೇಟರಿಗೆ ಬರುವಂತೆ ಮಾಡಿರೋ ಚಿತ್ರ ರಾಜಕುಮಾರ. ಬಾಯಿಂದ ಬಾಯಿಗೆ ಹರಡಿದ ಒಳ್ಳೆ ಮಾತುಗಳೇ ಎಷ್ಟೋ ವರ್ಷಗಳಿಂದ ಥೇಟರಿಗೆ ಬಾರದವರನ್ನೂ ಈ ಚಿತ್ರ ಕರೆತರುತ್ತಿದೆ. ಎಷ್ಟೋ ಮಂದಿ ಕುಟುಂಬ ಸಮೇತರಾಗಿ ಹೋಗಿ ನೊಡೋ ಯೋಜನೆ ಹಾಕಿಕೊಂಡಿದ್ದಾರೆ. ಹೀಗಿರೋವಾಗಲೇ ಇಡೀ ಚಿತ್ರ ಆನ್‌ಲೈನಲ್ಲಿ ಅಪ್ಲೋಡಾಗಿರೋ ಆತಂಕಕಾರಿ ಸುದ್ದಿ ಹೊರ ಬಿದ್ದಿದೆ.

ಇಂಥಾದ್ದರ ವಿರುದ್ಧ ತುರ್ತಾಗಿ ಶಾಸ್ವತ ಪರಿಹಾರದಂಥಾ ಕ್ರಮಕ್ಕೆ ಚಿತ್ರರಂಗ ಒಗ್ಗೂಡಿ ಮುಂದಾಗಬೇಕಿದೆ. ಇಂಥಾ ಕಿಡಿಗೇಡಿ ಕೆಲಸ ಮಾಡುವವರ ಬುಡಕ್ಕೊದ್ದು ಬಿಸಿ ಮುಟ್ಟಿಸಿದರೆ ಅಷ್ಟರ ಮಟ್ಟಿಗೆ ಸಿನಿಮಾ ಜಗತ್ತು ಕೊಂಚ ನಿರಾಳವಾಗಿ ಉಸಿರಾಡುವಂತಾಗುತ್ತದೆ.

 

Share.

Leave A Reply