ಅತಿ ಹೆಚ್ಚು ಓದುಗರನ್ನು ಹೊಂದಿರುವ CINIBUZZ ನಲ್ಲಿ ನಿಮ್ಮ ಸಿನಿಮಾದ ಕುರಿತ ಲೇಖನ / ಜಾಹೀರಾತು ಬೇಕಿದ್ದಲ್ಲಿ ಸಂಪರ್ಕಿಸಿ : 88615 99996

ವಿವಾದದ ಸುಳಿಯಲ್ಲಿ ವಿಜಯ ರಾಘವೇಂದ್ರ!

0

ವಿಜಯ ರಾಘವೇಂದ್ರ… ಕನ್ನಡ ಚಿತ್ರರಂಗದ ಮಟ್ಟಿಗೆ ಇಲ್ಲೀತನಕ ಯಾವುದೇ ವಿವಾದಕ್ಕೆ ಸಿಲುಕಿಕೊಳ್ಳದೇ ಇದ್ದ ನಟ. ಅಜಾತಶತೃ ಎಂದೇ ಫೇಮಸ್ಸಾಗಿರುವ ವಿಜಯ ರಾಘವೇಂದ್ರ ಎಲ್ಲರೊಂದಿಗೂ ಸ್ನೇಹಯುತವಾಗಿ ನಡೆದುಕೊಳ್ಳುವ, ಯಾರನ್ನೂ ತೀರಾ ಅಚ್ಚಿಕೊಳ್ಳದೇ ತಾನಾಯಿತು ತನ್ನ ಪಾಡಾಯಿತು ಎಂಬಂತೆ ಒಪ್ಪಿಕೊಂಡ ಸಿನಿಮಾಗಳಲ್ಲಿ ನಟಿಸಿಕೊಂಡಿದ್ದವರು. ಇಂಥ ವಿಜಯ ರಾಘವೇಂದ್ರ ಅವರ ಮೇಲೆ ನಿರ್ದೇಶಕರೊಬ್ಬರು ಬಹಿರಂಗವಾಗೇ ಆರೋಪ ಮಾಡಿದ್ದಾರೆ.

ಹಾಗೆ ವಿಜಯ ರಾಘವೇಂದ್ರ ಮೇಲೆ ಗಂಭೀರವಾಗಿ ಆರೋಪ ಮಾಡಿರೋ ನಿರ್ದೇಶಕ ದಯಾಳ್ ಪದ್ಮನಾಭನ್. ಸರಿ ಸುಮಾರು ಐದಾರು ವರ್ಷಗಳ ಹಿಂದೆ ಆರಂಭಗೊಂಡಿದ್ದ ‘ಒಂದು ರೂಪಾಯಿಗೆ ಎರಡು ಪ್ರೀತಿ ಅನ್ನೋ ಪುರಾತನ ಸಿನಿಮಾ ಈಗ ‘ಟಾಸ್ ಎಂದು ಹೆಸರು ಬದಲಿಸಿಕೊಂಡು ತೆರೆಗೆ ಬರುತ್ತಿದೆ. ಈ ಸಿನಿಮಾದಲ್ಲಿನ ಇಬ್ಬರು ಹೀರೋಗಳಲ್ಲಿ ವಿಜಯ ರಾಘವೇಂದ್ರ ಕೂಡಾ ಒಬ್ಬರು. ನಾನಾ ಕಾರಣಗಳಿಗಾಗಿ ಸ್ಥಗಿತಗೊಂಡಿದ್ದ ಈ ಸಿನಿಮಾವನ್ನು ಪೂರ್ತಿ ಮಾಡಿ ಬಿಡುಗಡೆಗೆ ಅಣಿಗೊಳಿಸಿದ್ದಾರೆ. ಸಿನಿಮಾಗೆ ಸಂಬಂಧಿಸಿದಂತೆ ರಾಘು ತಮ್ಮ ಪಾಲಿನ ಕೆಲಸಗಳನ್ನು ಮುಗಿಸಿಕೊಟ್ಟಿದ್ದಾರೆ. ಆದರೆ, ಸಿನಿಮಾದ ಪಬ್ಲಿಸಿಟಿಗೆ ಮಾತ್ರ ಕೈಕೊಟ್ಟಿದ್ದಾರೆ ಅನ್ನೋದು ದಯಾಳ್ ಆರೋಪ. “ವಿಜಯ ರಾಘವೇಂದ್ರ ಅವರು ಯಾಕೆ ಹೀಗೆ ಮಾಡುತ್ತಿದ್ದಾರೆ ಅನ್ನೋದು ನಮ್ಮ ಟೀಮಿನ ಎಲ್ಲರಿಗೂ ಯಕ್ಷ ಪ್ರಶ್ನೆಯಾಗಿದೆ. ಎಷ್ಟೇ ಮೆಸೇಜು, ಕಾಲು ಮಾಡಿದರೂ ಅವರು ಪ್ರತಿಕ್ರಿಯಿಸುತ್ತಲೇ ಇಲ್ಲ. ನಮ್ಮ ಸಿನಿಮಾ ತಡವಾಗಿದೆ ನಿಜ. ಸ್ವತಃ ರಾಘು ಕೂಡಾ ಕಳೆದ ಮೂರು ವರ್ಷಗಳಿಂದ ಸಿನಿಮಾವೊಂದನ್ನು ನಿರ್ದೇಶಿಸುತ್ತಲೇ ಇದ್ದಾರೆ. ಸಿನಿಮಾ ನಿರ್ದೇಶಕ, ನಿರ್ಮಾಪಕರ ಕಷ್ಟ ಅವರಿಗೂ ಗೊತ್ತಾಗಿರುತ್ತದೆ. ಆದರೂ ಅವರು ಬರದಿರುವುದಕ್ಕೆ ಏನು ಹೇಳಬೇಕೋ ಗೊತ್ತಾಗುತ್ತಿಲ್ಲ ಎಂದು ಒತ್ತಿ ಹೇಳಿ, ವಿಜಯ ರಾಘವೇಂದ್ರ ಅವರನ್ನು ಮಾತಿನಲ್ಲೇ ಮಾರ್ಮಿಕವಾಗಿ ತಿವಿಯಲು ನಿಂತಿದ್ದಾರೆ ದಯಾಳ್!
ಈ ವರೆಗೂ ಯಾರೆಂದರೆ, ಯಾರಮೇಲೂ ಮುನಿಸಿಕೊಂಡ ವರದಿಗಳಿಲ್ಲದ ರಾಘು ದಯಾಳ್ ಜೊತೆಗೆ ಮಾತ್ರ ಯಾಕೆ ಟೂ ಬಿಟ್ಟಿದ್ದಾರೋ ಗೊತ್ತಿಲ್ಲ. ಹಾಗೆ ನೋಡಿದರೆ ವಿಜಯ ರಾಘವೇಂದ್ರ ಅವರಷ್ಟು ದಯಾಳ್ ಹೆಸರು, ನಂಬಿಕೆ ಉಳಿಸಿಕೊಂಡ ವ್ಯಕ್ತಿಯಲ್ಲ. ಈತ ಮಾಡಿದ ಮೊದಲ ಸಿನಿಮಾದಿಂದ ಹಿಡಿದು ಈವತ್ತಿನ ತನಕ ಪ್ರತಿಯೊಂದು ಸಿನಿಮಾದಲ್ಲೂ ಏನಾದರೊಂದು ರಂಖಲು ಮಾಡಿಕೊಂಡೇ ಬಂದಿರುವ ಹಿಸ್ಟರಿ ಶ್ರೀಯುತ ದಯಾಳ್ ಪದ್ಮನಾಭನ್ ಅವರದ್ದು. ಯೋಗರಾಜ್ ಭಟ್ ಅವರು ನಿರ್ದೇಶಿಸಿದ್ದ ‘ಗಾಳಿಪಟ ಚಿತ್ರಕ್ಕೆ ಕಾರ್ಯಕಾರಿ ನಿರ್ಮಾಪಕನನ್ನಾಗಿ ಮಾಡಿದ ಕಾರಣಕ್ಕೇ ಆ ಚಿತ್ರದ ನಿರ್ಮಾಪಕ ಸೂರ್ಯಪ್ರಕಾಶ್ ರಾವ್ ಅವರ ಜೇಬಿಗೆ ಬಿದ್ದ ಕತ್ತರಿ ದೊಡ್ಡ ಗಾತ್ರದಲ್ಲೇ ತೂತು ಮಾಡಿದ್ದನ್ನು ಗಾಂಧಿನಗರವಿನ್ನೂ ಮರೆತಿಲ್ಲ. ಇಂಥ ದಯಾಳ್ ಈಗ ‘ಸಭ್ಯ ಅಂತಲೇ ಸರ್ಟಿಫಿಕೇಟು ಪಡೆದಿರುವ ವಿಜಯ ರಾಘವೇಂದ್ರರ ವಿರುದ್ಧ ಮಾತು ಶುರುವಿಟ್ಟುಕೊಂಡಿದ್ದಾರೆ!
ವಿಜಯರಾಘವೇಂದ್ರ ಮನಸ್ಸು ಮಾಡಿ ಬಾಯಿ ತೆರೆದರೆ ದಯಾಳ್ ಬಂಡವಾಳ ಜಾಹೀರಾಗಲಿದೆ ಅನ್ನೋದಷ್ಟೇ ಸತ್ಯ!

Share.

Leave A Reply