One N Only Exclusive Cine Portal

‘ನಿಶ್ಯಬ್ಧ-2’ಗೆ ವಿಜಯಪ್ರಕಾಶ್ ಧ್ವನಿ

ಈ ಹಿಂದೆ `ಡೇಂಜರ್ ಜೋನ್ ಚಿತ್ರದ ಮೂಲಕ ಹಾರರ್ ಕಥೆ ಕಟ್ಟಿಕೊಟ್ಟು ಗೆದ್ದಿದ್ದ ನಿರ್ದೇಶಕ ದೇವರಾಜ್ ಕುಮಾರ್ ನಿರ್ದೇಶನದ, ಮಕರಜ್ಯೋತಿ ಫಿಲಂಸ್ ಬ್ಯಾನರ್ ಅಡಿಯಲ್ಲಿ ಮೂಡಿ ಬರುತ್ತಿರುವ ಚಿತ್ರ `ನಿಶ್ಯಬ್ಧ-೨. ಈ ಚಿತ್ರದ ಹಾಡೊಂದಕ್ಕೆ ಖ್ಯಾತ ಗಾಯಕ ವಿಜಯ ಪ್ರಕಾಶ್ ಧ್ವನಿ ನೀಡಿದ್ದಾರೆ.
ರವೀಂದ್ರ ಮುದ್ದಿ ಬರೆದಿರುವ “ಒಮ್ಮೆ ನೋಡು ನನಗಾಗಿ, ಪ್ರಾಣ ಬಿಡುವೆ ನಿನಗಾಗಿ ಎಂಬ ಹಾಡಿಗೆ ವಿಜಯಪ್ರಕಾಶ್ ಧ್ವನಿ ನೀಡಿದ್ದಾರೆ. ಸತೀಶ್ ಆರ್ಯನ್ ಸಂಗೀತ ನೀಡಿರುವ ಈ ಹಾಡಿನ ರೆಕಾರ್ಡಿಂಗ್ ಕಾರ್ಯ ಬಾಂಬೆಯಲ್ಲಿ ನೆರವೇರಿದೆ. ವಿಶಿಷ್ಟವಾಗಿರೋ ಈ ಹಾಡು ಈ ಚಿತ್ರದ ಪ್ರಮುಖ ಆಕರ್ಷಣೆಗಳಲ್ಲಿ ಒಂದಾಗುವ ಭರವಸೆ ಚಿತ್ರ ತಂಡದಲ್ಲಿದೆ.
ಮಂಗಳೂರು, ಬೆಂಗಳೂರು ಮುಂತಾದೆಡೆಗಳಲ್ಲಿ ಈ ಚಿತ್ರದ ಚಿತ್ರೀಕರಣ ಅಂತಿಮ ಹಂತ ತಲುಪಿಕೊಂಡಿದೆ. ಹಾಲಿವುಡ್‌ನ ಬ್ಲಾಕ್ ಬಸ್ಟರ್ ಚಿತ್ರ `ಡೋಂಟ್ ಬ್ರೀತ್ ಈಗಾಗಲೇ ತಮಿಳು ಮತ್ತು ಹಿಂದಿಯಲ್ಲಿ ತಯಾರಾಗುತ್ತಿದೆ. ಹಿಂದಿಯಲ್ಲಿ ಅಜಯ್ ದೇವಗನ್ ಮತ್ತು ತಮಿಳಿನಲ್ಲಿ ವಿಕ್ರಂ ಅಭಿನಯದಲ್ಲಿ ಈ ಚಿತ್ರ ಮೂಡಿ ಬರಲಿದೆ. ಅದೇ ಚಿತ್ರದ ಕನ್ನಡ ಅವತರಣಿಕೆ `ನಿಶ್ಯಬ್ಧ-೨. ಇದೊಂದು ಛಾಲೆಂಜಿಂಗ್ ಸಬ್ಜೆಕ್ಟ್ ಹೊಂದಿರೋ ಚಿತ್ರ. ಇದು ಕನ್ನಡದ ಮಟ್ಟಿಗೆ ಭಿನ್ನ ಕಥೆಯೂ ಹೌದು. ನಿರ್ದೇಶಕ ದೇವರಾಜ್ ಕುಮಾರ್ ಗೆಲುವಿಗಾಗಿ ಆ ಸವಾಲು ಸ್ವೀಕರಿಸಿದ್ದಾರೆ.
ಡೇಂಜರ್ ಜೋನ್ ಚಿತ್ರದ ಮೂಲಕ ಕನ್ನಡ ಚಿತ್ರರಂಗಕ್ಕೆ ಪರಿಚಯವಾಗಿದ್ದ ರೂಪ್ ಶೆಟ್ಟಿ `ನಿಶ್ಯಬ್ಧ-೨ ಚಿತ್ರದ ಮೂಲಕ ಪೂರ್ಣ ಪ್ರಮಾಣದಲ್ಲಿ ನಾಯಕರಾಗಿದ್ದಾರೆ. ಈ ಚಿತ್ರದ ನಿರ್ದೇಶಕರಾದ ದೇವರಾಜ ಕುಮಾರ್ ಅವರು ಕನ್ನಡ ಚಿತ್ರರಂಗದಲ್ಲಿ ಈ ಹಿಂದೆ ಮೇಕಪ್ ಮ್ಯಾನ್ ಆಗಿ ಗುರುತಿಸಿಕೊಂಡಿದ್ದವರು. ಕನ್ನಡದ ಪ್ರಸಿದ್ಧ ನಟಿಯರನೇಕರಿಗೆ ಮೇಕಪ್ ಮಾಡಿದ್ದವರು ಇದೇ ದೇವರಾಜ್. ಆದರೆ ಈ ವೃತ್ತಿಯ ನಡುವೆಯೂ ನಿರ್ದೇಶನದತ್ತ ತೀವ್ರವಾದ ಒಲವು ಹೊಂದಿದ್ದ ದೇವರಾಜ್ ಡೇಂಜರ್ ಜೋನ್ ಚಿತ್ರದ ಮೂಲಕ ಕನಸು ಸಾಕಾರಗೊಳಿಸಿಕೊಂಡು ಇದೀಗ ಮತ್ತೊಂದು ಇನ್ನಿಂಗ್ಸ್‌ಗೆ ಅಣಿಯಾಗಿದ್ದಾರೆ.

Leave a Reply

Your email address will not be published. Required fields are marked *