ಅತಿ ಹೆಚ್ಚು ಓದುಗರನ್ನು ಹೊಂದಿರುವ CINIBUZZ ನಲ್ಲಿ ನಿಮ್ಮ ಸಿನಿಮಾದ ಕುರಿತ ಲೇಖನ / ಜಾಹೀರಾತು ಬೇಕಿದ್ದಲ್ಲಿ ಸಂಪರ್ಕಿಸಿ : 88615 99996

ಲಂಡನ್‌ನಲ್ಲಿ ವಿಲನ್

0

‘ದಿ ವಿಲನ್ ಚಿತ್ರತಂಡ ಲಂಡನ್ ನಲ್ಲಿ ಚಿತ್ರೀಕರಣಕ್ಕೆ ತೆರಳಿದೆ. ಸುದೀಪ್ ಮತ್ತು ಶಿವಣ್ಣ ಇಬ್ಬರೂ ಒಟ್ಟಿಗೇ ಚಿತ್ರೀಕರಣದಲ್ಲಿ ಪಾಲ್ಗೊಂಡಿದ್ದಾರೆ. ಸಿ.ಆರ್. ಮನೋಹರ್ ನಿರ್ಮಾಣದಲ್ಲಿ ಮೂಡಿಬರುತ್ತಿರುವ ಈ ಚಿತ್ರದಲ್ಲಿ ಇಬ್ಬರೂ ನಟರಿಗೆ ವಿಶೇಷ ಗೆಟಪ್ ನೀಡಲಾಗಿದೆ.
ಚಿತ್ರೀಕರಣ ಮುಗಿದ ನಂತರ ಶಿವರಾಜ್ ಕುಮಾರ್ ವಿಶ್ರಾಂತಿಗೆ ತೆರಳಿದರೆ, ಸುದೀಪ್ ಮಾತ್ರ ನಿರ್ಮಾಪಕ ಮನೋಹರ್ ಅವರೊಟ್ಟಿಗೆ ಟ್ಯೂಬ್ ಟ್ರೈನ್‌ನಲ್ಲಿ ಸುತ್ತಾಡಿ, ಜಗತ್ತಿನ ಅತಿದೊಡ್ಡ ಮಾಲ್‌ಗಳಿಗೂ ವಿಸಿಟ್ ಹಾಕಿದ್ದಾರೆ. ನಂತರ ಸೆಂಟ್ರಲ್ ಹೋಟೇಲಿನ್ ಸ್ಕೈಬಾರಲ್ಲಿ ಕೂತು ಎಂಜಾಯ್ ಮಾಡಿದ್ದಾರೆ. ಮಕ್ಕಳಂತೆ ಮರದ ಮೇಲೆ ಕೂತು ಸಂತಸ ಪಟ್ಟಿದ್ದಾರೆ
ಭಾರತದ ಯಾವುದೇ ಮೂಲೆಗೆ ಹೋದರೂ, ಅದರಲ್ಲೂ ಕರ್ನಾಟಕದ ಯಾವ ಗಲ್ಲಿಯಲ್ಲೂ ಸ್ಟಾರ್ ನಟರು ಸ್ವತಂತ್ರವಾಗಿ ಓಡಾಡಲು ಸಾಧ್ಯವಿಲ್ಲ. ಹೀಗಾಗಿ ಹೊರದೇಶಕ್ಕೆ ಹೋದರೆ ಹೀರೋಗಳಿಗೆ ರೆಕ್ಕೆ ಬಂದಂತಾಗಿರುತ್ತದೆ. ಸದ್ಯ ಕಿಚ್ಚ ಕೂಡಾ ಲಂಡನ್‌ನಲ್ಲಿ ಸ್ವಚ್ಚಂದವಾಗಿ ವಿಹರಿಸುತ್ತಿದ್ದಾರೆ…

Share.

Leave A Reply