ಅತಿ ಹೆಚ್ಚು ಓದುಗರನ್ನು ಹೊಂದಿರುವ CINIBUZZ ನಲ್ಲಿ ನಿಮ್ಮ ಸಿನಿಮಾದ ಕುರಿತ ಲೇಖನ / ಜಾಹೀರಾತು ಬೇಕಿದ್ದಲ್ಲಿ ಸಂಪರ್ಕಿಸಿ : 88615 99996

ಗಂಡ ಊರಿಗ್ ಹೋದಾಗ ಅನು ಗೌಡ ಏನ್ ಮಾಡಿದ್ರು ಗೊತ್ತಾ?

0

ಮಾಜಿ ನಾಯಕನಟಿಯರು ಪೋಷಕ ಪಾತ್ರಗಳಲ್ಲಿ ಕಾಣಿಸಿಕೊಳ್ಳೋದು ಈ ವರೆಗೂ ನಡೆದುಕೊಂಡುಬಂದ ಸಂಪ್ರದಾಯ. ಈಗ ಪೋಷಕ ನಟಿಯರಾಗಿ ಗುರುತಿಸಿಕೊಂಡು, ವರ್ಷಗಟ್ಟಲೇ ಅದನ್ನೇ ಮಾಡಿಕೊಂಡಿದ್ದವರು ಹೀರೋಯಿನ್ ಆಗುವ ಹೊಸ ವರಸೆ ಶುರುವಾಗಿದೆ. ಧಾರಾವಾಹಿ ನಟಿ ಎನಿಸಿಕೊಂಡಿದ್ದವರೆಲ್ಲಾ ಚಿತ್ರರಂಗದಲ್ಲಿ ಹೀರೋಯಿನ್ ಆಗಿ ಹೆಸರು ಮಾಡಿರೋವಾಗ ನಾವ್ಯಾಕೆ ಪ್ರಮುಖ ಪಾತ್ರಧಾರಿಗಳಾಗಬಾರದು ಅಂತಾ ಹಠಕ್ಕೆ ಬಿದ್ದವರಂತೆ ಮಮತಾ ರಾಹುತ್, ಭೂಮಿಕಾರಂಥ ನಟಿಯರು ಸಣ್ಣ ಪುಟ್ಟ ಸಿನಿಮಾಗಳಾದರೂ ಒಂದರ ಹಿಂದೊಂದು ಸಿನಿಮಾಗಳಲ್ಲಿ ನಾಯಕಿ ಪಾತ್ರಗಳನ್ನು ಪಡೆದುಕೊಳ್ಳುತ್ತಿದ್ದಾರೆ. ಬಹುಶಃ ಇದೇ ಸಾಲಿಗೆ ಸೇರುವ ಮತ್ತೊಬ್ಬ ನಟಿ ಅನು ಗೌಡ!
ಅನುಗೌಡ ಮೂಲತಃ ಶಿವಮೊಗ್ಗದವರು. ಉದ್ಯೋಗವನ್ನರಸಿ ಬೆಂಗಳೂರು ಸೇರಿದ್ದ ಈಕೆ ಹೆಚ್.ಡಿ.ಎಫ್.ಸಿ. ಬ್ಯಾಂಕಿನಲ್ಲಿ ಮಾರ್ಕೆಟಿಂಗ್ ಮ್ಯಾನೇಜರ್ ಆಗಿದ್ದವರು. ಆ ಬ್ಯಾಂಕಿನ ಕಸ್ಟಮರ್ ಆಗಿದ್ದ ನಿರ್ಮಾಪಕರೊಬ್ಬರು ಕರೆತಂದು ಚಿತ್ರರಂಗಕ್ಕೆ ಎಂಟ್ರಿ ಕೊಡಿಸಿದ್ದರು. ನಂತರ ವಿಕ್ಟರಿ ವಾಸು ‘ಶಿಷ್ಯ ಸಿನಿಮಾ ಮೂಲಕ ಅನು ಗೌಡ ಅವರನ್ನು ಐಟಂ ಡ್ಯಾನ್ಸರ್ ಆಗಿ ಪರಿಚಯಿಸಿದ್ದರು. ನಂತರ ಭೂಗತ, ಸವಿ ನೆನಪು, ಮೇಘವೇ ಮೇಘವೇ, ಸುಗ್ರೀವ, ಗಣೇಶ ಮತ್ತೆ ಬಂದ, ಸ್ಕೂಲ್ ಮಾಸ್ಟರ್, ಕೆಂಪೇಗೌಡ, ದೇವರು ಕೊಟ್ಟ ತಂಗಿ, ಬೃಂದಾವನ, ಸವಾರಿ-೨, ಭಜರಂಗಿ ಸೇರಿದಂತೆ ಸಾಕಷ್ಟು ಸಿನಿಮಾಗಳಲ್ಲಿ ಅನು ನಟಿಸಿದ್ದಾರೆ. ತಮಿಳಿನಲ್ಲೂ ಕೂಡಾ ಅನು ಐದಾರು ಸಿನಿಮಾಗಳಲ್ಲಿ ಪಾತ್ರ ನಿರ್ವಹಿಸಿದ್ದಾರೆ. ಜೊತೆಗೆ ಒಳ್ಳೇ ಪಾತ್ರಗಳು ಸಿಕ್ಕಾಗ ಧಾರಾವಾಹಿಗಳಲ್ಲೂ ಕಾಣಿಸಿಕೊಳ್ಳುತ್ತಿರುತ್ತಾರೆ.
ಅನು ಅವರ ಬಗ್ಗೆ ಇಷ್ಟೆಲ್ಲಾ ಹೇಳಲೂ ಕಾರಣವಿದೆ. ಸದ್ಯ ಟ್ರೇಲರ್ ಮೂಲಕ ಸಂಚಲನ ಮೂಡಿಸಿರುವ ‘ಗಂಡ ಊರಿಗೆ ಹೋದಾಗ ಅನ್ನೋ ಹಾಟ್ ಸಿನಿಮಾದಲ್ಲಿ ಸಖತ್ ಬೋಲ್ಡ್ ಆಗಿ ಕಾಣಿಸಿಕೊಂಡಿದ್ದಾರೆ. ಮಾಲಾಶ್ರೀ, ರಾಗಿಣಿ, ಆಯೇಶಾ, ಪ್ರಿಯಾ ಹಾಸನ್ರಂತ ಆಕ್ಷನ್ ಹೀರೋಯಿನ್‌ಗಳಿಗೆ ಸರಿಗಟ್ಟುವಂತೆ ಫೈಟು ಮಾಡಿ ಥ್ರಿಲ್ ಹುಟ್ಟಿಸಿದ್ದಾರೆ.
ಈ ವರೆಗೆ ಹಲವಾರು ಸಿನಿಮಾಗಳಲ್ಲಿ ಪೋಷಕ ಪಾತ್ರಗಳು ಮತ್ತು ಐಟಂ ಹಾಡುಗಳಿಗಷ್ಟೇ ಸೀಮಿತವಾಗಿದ್ದ ಅನುಗೌಡ ಇನ್ನು ಆಕ್ಷನ್ ಹೀರೋಯಿನ್ ಆಗಿ ಕೂಡಾ ಹೆಸರು ಮಾಡುವಂತಾಗಲಿ…

Share.

Leave A Reply