ಅತಿ ಹೆಚ್ಚು ಓದುಗರನ್ನು ಹೊಂದಿರುವ CINIBUZZ ನಲ್ಲಿ ನಿಮ್ಮ ಸಿನಿಮಾದ ಕುರಿತ ಲೇಖನ / ಜಾಹೀರಾತು ಬೇಕಿದ್ದಲ್ಲಿ ಸಂಪರ್ಕಿಸಿ : 88615 99996

ಎರಡನೇ ಚಿತ್ರಕ್ಕಾಗಿ ನಿಖಿಲ್ ಫೋಟೋಶೂಟ್!

0

ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ ಪುತ್ರ ನಿಖಿಲ್ ಮುಂದಿನ ಚಿತ್ರ ಹೇಗಿರಬಹುದು ಅಂತೊಂದು ಪ್ರಶ್ನೆ ಪ್ರೇಕ್ಷಕರ ವಲಯದಲ್ಲಿ ಚಾಲ್ತಿಯಲ್ಲಿರೋದು ಸುಳ್ಳಲ್ಲ. ಮೊದಲ ಚಿತ್ರ ಜಾಗ್ವಾರ್ ಮೂಲಕ ಇಂಥಾದ್ದೊಂದು ಕುತೂಕಲ ಕೆರಳಿಸುವಷ್ಟರ ಮಟ್ಟಿಗೆ ಹವಾ ಸೃಷ್ಟಿಸಿದ್ದ ನಿಖಿಲ್ ಎರಡನೇ ಚಿತ್ರಕ್ಕೆ ಅಷ್ಟೇ ಜಬರ್ಧಸ್ತಾಗಿ ಅಣಿಯಾಗಿದ್ದಾರೆ.
ಅಂದಹಾಗೆ ನಿಖಿಲ್ ಮುಂದಿನ ಚಿತ್ರಕ್ಕಾಗಿ ಸಖತ್ತಾದ್ದೊಂದು ಫೋಟೋಶೂಟ್ ನಡೆದಿದೆ. ಚಿತ್ರಕ್ಕಾಗಿ ಸಖಲ ತಯಾರಿಯೂ ನಡೆಯುತ್ತಿದೆ.
ಜಾಗ್ವಾರ್ ಚಿತ್ರದ ಸೋಲು ಗೆಲುವಿನಾಚೆಗೂ ಆ ಚಿತ್ರಕ್ಕಾಗಿ ನಿಖಿಲ್ ತಯಾರಿ ನಡೆಸಿದ್ದರ ಬಗ್ಗೆ ಎಲ್ಲೆಡೆ ಮೆಚ್ಚುಗೆ ಕೇಳಿಬಂದಿತ್ತು. ಚಿತ್ರದಲ್ಲಿಯೂ ಆ ಶ್ರಮ ಎದ್ದು ಕಾಣುತ್ತಿತ್ತು. ಮೊದಲ ಚಿತ್ರದಲ್ಲಿಯೇ ಇಂಥಾ ಶ್ರಮದ ಮೂಲಕ ಸದ್ದು ಮಾಡಿದ್ದ ನಿಖಿಲ್ ಎರಡನೇ ಚಿತ್ರಕ್ಕೂ ಅದೇ ರೀತಿ ತಯಾರಾಗಿದ್ದಾರೆ.
ಈ ಫೋಟೋಗಳೇ ಹೆಚ್ಚೂ ಕಮ್ಮಿ ಎಲ್ಲವನ್ನೂ ಹೇಳುವಂತಿವೆ…

Share.

Leave A Reply